ಬಿಸಿಲಿನ ಬೇಗೆಯಿಂದ ಪಾರಾಗಲು ಪುದೀನ ಮಾವಿನಕಾಯಿ ಪಾನಕ

ಅಬ್ಬಾ ಬೇಸಿಗೆ ಬಂತೆಂದರೆ ಒಂದು ತರಹದ ಯಮಯಾತನೆ. ಸುಡುವ ಬಿಸಿಲು, ನೀರಿನಂತೆ ದೇಹದಿಂದ ಹರಿದು ಹೋಗುವ ಬೆವರು, ದೇಹವನ್ನು ಹಿಂಡಿ ಹಿಪ್ಪೆ ಮಾಡುವ ಸುಸ್ತು. ಅತಿಯಾದ ಬಾಯಾರಿಕೆ ಇದೆಲ್ಲಾ ಸಮಸ್ಯೆಗಳು ಉಂಟಾಗುವುದೇ ಬೇಸಿಗೆಯಲ್ಲಿ. ಆದರೆ..ಈಗ ಚಳಿಗಾಲವು ಕೇವಲ ನಮಗೆ ರಾತ್ರಿ ವೇಳೆ ಮಾತ್ರ ಅನುಭವಕ್ಕೆ ಬರುತ್ತಿದ್ದು...ಹಗಲಿನಲ್ಲಿ ಬಿರು ಬಿಸಿಲಿನಿಂದ ಮನೆಯಿಂದ ಹೊರಗಡೆ ಕಾಲಿಡಲು ಹಿಂಜರಿಯುತ್ತಿದ್ದೇವೆ. ಅಷ್ಟೇ ಅಲ್ಲದೆ ಈ ಚಳಿಗಾಲದಲ್ಲೂ ಆಗಾಗ ಮಳೆ ಸುರಿಯುತ್ತಿದ್ದು...ಇದು ಯಾವ ಕಾಲವಯ್ಯ ಎಂಬ ಪ್ರಶ್ನೆ ನಮ್ಮನ್ನು ಕಾಡದೆ ಇರದು.

juice


ಅದೇನೆ ಇರಲಿ, ಕೆಲಸ ಕಾರ್ಯ ನಿಮಿತ್ತ ಮನೆಯಿಂದ ಹೊರ ಹೋಗಿ ಹಿಂತಿರುಗಿ ಬಂದಾಗ...ಅಥವಾ ಬಿಸಿಲಿಗೆ ದಣಿದು ಮನೆಗೆ ಬಂದ ಅತಿಥಿಗಳಿಗಾಗಿ ಈ ಪಾನೀಯಗಳನ್ನು ನೀವು ನೀಡಿದ್ದಲ್ಲಿ....ದಣಿದವರ ದಾಹವು ತಣಿಯುವುದರ ಜೊತೆಗೆ ತಂಪಿನ ಅನುಭವವು ಅವರಲ್ಲಿ ಮೂಡುತ್ತದೆ. ಆದರೆ ಹೆಚ್ಚು ತಂಪಿನ ಉತ್ಪನ್ನಗಳನ್ನು ಸೇವನೆ ಕೂಡ ಮಾಡಬಾರದು ಎಂಬುದು ನಾವು ನಿಮಗೆ ನೀಡುವ ಸಲಹೆ.

raw mango juice

ಪುದೀನ ಮಾವಿನಕಾಯಿ ಪಾನಕ
ಬೇಕಾಗುವ ಸಾಮಗ್ರಿಗಳು: ಸಕ್ಕರೆ, ನೀರು, ಹಸಿ ಮಾವಿನಕಾಯಿ, ಪುದೀನ ಸೊಪ್ಪು, ಐಸ್ ಕ್ರಶ್ ಮಾಡಿರುವುದು.

raw mango juice


ಪುದೀನ ಮಾವಿನಕಾಯಿ ಪಾನಕ ಮಾಡುವ ವಿಧಾನ: ಮೊದಲಿಗೆ ತಳ ಆಳವಿರುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆ ಮತ್ತು ನೀರನ್ನು ಸೇರಿಸಿ....ಸಕ್ಕರೆ ಕರಗುವವರೆಗೆ ಮಿಶ್ರ ಮಾಡಿಕೊಳ್ಳಿ. ಈ ಮಿಶ್ರಣ ತಣ್ಣಗಾದ ನಂತರ ಮಾವಿನಕಾಯಿಯ ಸಿಪ್ಪೆ ತೆಗೆದು ತುಂಡು ಮಾಡಿ ಮಿಕ್ಸಿಗೆ ಹಾಕಿ ಹಾಗೂ ಸ್ವಲ್ಪ ಪುದಿನ ಸೊಪ್ಪನ್ನು ಸೇರಿಸಿ ನುಣ್ಣಗೆ ಮಿಶ್ರಣವನ್ನು ತಯಾರಿಸಿಕೊಳ್ಳಿ. ನುಣ್ಣಗೆ ಮಾಡಿದ ಮಿಶ್ರಣ, ಸಕ್ಕರೆ ನೀರು ಒಟ್ಟಿಗೆ ಸೇರೆಸಿ ಕ್ರಶ್ ಮಾಡಿದ ಐಸ್‌ನೊಂದಿಗೆ ಬೆರಸಿದಾಗ ಪುದೀನ ಮಾವಿನಕಾಯಿ ಪಾನಕ ಕುಡಿಯಲು ರೆಡಿ.

raw mango juice

ಸೌತೆಕಾಯಿ ಶುಂಠಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು: ಸೌತೆಯಾಕಿ, ಶುಂಠಿ, ಸಕ್ಕರೆ, ಜೀರಿಗೆ ಪುಡಿ, ಕಪ್ಪುಪ್ಪು, ನೀರು

ಸೌತೆಕಾಯಿ ಶುಂಠಿ ಜ್ಯೂಸ್ ಮಾಡುವ ವಿಧಾನ: ಮಿಕ್ಸರ್ ಬಳಸಿಕೊಂಡು ಸೌತೆಕಾಯಿ ಹೋಳುಗಳು, ಶುಂಠಿ ಹಾಗೂ ನೀರನ್ನು ಚೆನ್ನಾಗಿ ಬೆರೆಸಿ ಒಂದು ನಯವಾದ ಪೇಸ್ಟ್ ರೂಪಕ್ಕೆ ತಂದುಕೊಳ್ಳಿರಿ. ಈ ಮಿಶ್ರಣಕ್ಕೆ ನೀರು. ಕಪ್ಪುಪ್ಪು, ಸಕ್ಕರೆ, ಜೀರಿಗೆ ಸೇರಿಸಿ ಚೆನ್ನಾಗಿ ಬೇರಕೆ ಮಾಡಿದರೆ ಸಿಂಪಲ್ & ಟೇಸ್ಟಿ ಸೌತೆಕಾಯಿ ಶುಂಠಿ ಜ್ಯೂಸ್ ಸವಿಯಲು ಸಿದ್ಧ.

cucumber ginger juice

ಕಲ್ಲಂಗಡಿ ಯೋಗರ್ಟ್
ಬೇಕಾಗುವ ಸಾಮಗ್ರಿಗಳು: ಕಲ್ಲಂಗಡಿ, ಬಾಳೆಹಣ್ಣು, ಗ್ರೀಕ್ ವೆನಿಲ್ಲಾ ಯೋಗರ್ಟ್, ಸಕ್ಕರೆ, ನೀರು, ಐಸ್.

water melon yogurt


ಕಲ್ಲಂಗಡಿ ಯೋಗರ್ಟ್ ಮಾಡುವ ವಿಧಾನ: ಬ್ಲೆಂಡರ್‌ನಲ್ಲಿ ಕಲ್ಲಂಗಡಿ, ಬಾಳೆಹಣ್ಣು, ವೆನಿಲಾ ಯೋಗರ್ಟ್ ಸಕ್ಕರೆ, ನೀರು ಸೇರಿಸಿ ಬ್ಲೆಂಡ್ ಮಾಡಿ ಗ್ಲಾಸ್‌ಗೆ ಐಸ್ ಕ್ಯೂಬ್ ಹಾಕಿ ಮಿಶ್ರಣವನ್ನು ಸೇರಿಸಿದರೆ ಕಲ್ಲಂಗಡಿ ಯೋಗರ್ಟ್ ಸವಿಯಲು ಸಿದ್ಧ.

water melon yogurt


ಪೈನಾಪಲ್ ಲೆಮನೇಡ್
ಬೇಕಾಗುವ ಸಾಮಗ್ರಿಗಳು: ಪೈನಾಪಲ್, ಲಿಂಬೆ ರಸ, ಜೇನು, ನೀರು , ಐಸ್, ಸಕ್ಕರೆ
ಪೈನಾಪಲ್ ಲೆಮನೇಡ್ ಮಾಡುವ ವಿಧಾನ: ಮೊದಲಿಗೆ ಪೈನಾಪಲ್ ತುಂಡುಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.  ನೀರನ್ನು ಕುದಿಯಲು ಇಡಿ, ನೀರು ಕುದಿ ಬರುತ್ತಿರುವವಾದ ಪೈನಾಪಲ್ ಜ್ಯೂಸ್, ಲಿಂಬೆರಸ, ಸಕ್ಕರೆ ಜೇನು ಸೇರಿಸಿ. ಸಕ್ಕರೆ ಕರಗುವ ತನಕ ಕರಗಿಸಿ ಪುನಃ ಪಾನೀಯವನ್ನು ಕುದಿಸಿ. ನಂತರ ಉರಿಯಿಂದ ತೆಗೆದು ತಣ್ಣಗಾದ ಮೇಲೆ 3-4 ಗಂಟೆಗಳ ಕಾಲ ಫ್ರಿಜ್‌ನಲ್ಲಿ ಇಡಿ. ಇಷ್ಟಾದ ಬಳಿಕ ಐಸ್ ಕ್ಯೂಬ್ಸ್ನೊಂದಿಗೆ ಪೈನಾಪಲ್ ಲೆಮನೇಡ್ ಸವಿಯಲು ನೀಡಿ.

pineaple lemanade

ಗುಲಾಬಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು: ಗುಲಾಬಿ ಎಸಳುಗಳು, ಸಕ್ಕರೆ, ಬಿಸಿನೀರು, ಏಲಕ್ಕಿ. ಲಿಂಬೆ. ದಾಳಿಂಬೆ, ಐಸ್ .

rose sharbath


ಗುಲಾಬಿ ಜ್ಯೂಸ್ ಮಾಡುವ ವಿಧಾನ: ಗುಲಾಬಿ ಎಸಳುಗಳನ್ನು ಪೇಸ್ಟ್ ಮಾಡಿ ಅದಕ್ಕೆ ಬಿಸಿನೀರು ಸೇರಿಸಿ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ ಬಟ್ಟಲು ಮುಚ್ಚಿ...ಒಂದು ರಾತ್ರಿ ಇಡಬೇಕು. ಬೆಳಗ್ಗೆ ದ್ರಾವಣವನ್ನು ಸೋಸಬೇಕು. ಸಕ್ಕರೆ ಹಾಕಿ ಅದು ಕರಗುವವರೆಗೆ ತಿರುಗಿಸಿ. ಸಕ್ಕರೆ ಕರಗಿದ ನಂತರ ದಾಳಿಂಬೆ ಜ್ಯೂಸ್ ಮತ್ತು ಲಿಂಬೆ ರಸ ಸೇರುಸಿ ಮಿಶ್ರ ಮಾಡಿ . ಈ ಮಿಶ್ರಣಕ್ಕೆ ಐಸ್ ಕ್ಯೂಬ್ಸ್, ತಣ್ಣನೆಯ ನೀರು ಸೇರಿಸಿದರೆ ಗುಲಾಬಿ ಜ್ಯೂಸ್ ಕುಡಿಯಲು ರೆಡಿ.

rose sharbath
  • ಸುಲಭ.ಆರ್. ಭಟ್
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.