ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕೃಷಿ ಕಾರ್ಯ ಪ್ರೇರಣೆ..!

ಮಂಗಳೂರು: ಸದಾ ರಾಜಕೀಯ ಚರ್ಚೆ ತಂತ್ರಗಾರಿಕೆಯಲ್ಲೇ ಮುಳುಗಿರುತಿದ್ದ ಬಿಜೆಪಿಯ ರಾಜ್ಯಾದ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಪೂರ್ಣ ರೈತನಂತೆ ಗದ್ದೆಗೆ ಇಳಿದು ನಾಟಿ ಕಾರ್ಯ ಮಾಡಿ ಅಚ್ಚರಿ ಮೂಡಿಸಿದರು. ಜಿಲ್ಲೆಯಲ್ಲಿ ಆಹಾರ ಬೆಳೆಗಳಿಗಿಂತಲೂ ಹೆಚ್ಚಾಗಿ ವಾಣಿಜ್ಯ ಬೆಳೆಗಳನ್ನೇ ಬೆಳೆಸಲಾಗುತ್ತದೆ. ಭತ್ತ ಬೆಳೆದರೂ ಕೂಡ ಉತ್ಪಾದನಾ ವೆಚ್ಚ ಅಧಿಕವಾಗಿರುವುದರಿಂದ ಕೃಷಿಕರು ಆಹಾರ ಬೆಳೆ ಬೆಳೆಯುವತ್ತ ನಿರಾಸಕ್ತಿ ತೋರುತಿದ್ದಾರೆ. ಹೀಗಾಗಿಯೇ ಜಿಲ್ಲೆಯಾದ್ಯಂತ ನೂರಾರು ಎಕರೆ ಭತ್ತ ಬೆಳೆಯೋ ಭೂಮಿಗಳು ಪಾಳು ಬಿದ್ದಿದೆ. ಹತ್ತಾರು ವರ್ಷಗಳಿಂದ ಕೃಷಿ ಕಾರ್ಯವನ್ನೇ ಮಾಡದ ಪರಿಣಾಮ ಪಾಳು ಬಿದ್ದಿವೆ. ಹೀಗಾಗಿ ಇಂಥಹ ಭೂಮಿಗಳಲ್ಲಿ ಮತ್ತೆ ಬಂಗಾರದ ಬೆಳೆ ತೆಗೆಯೋ ಯೋಜನೆಯೊಂದನ್ನ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ರೂಪಿಸಿದ್ದಾರೆ.

gg


ಹೀಗಾಗಿ ಈ ಯೋಜನೆಯ ಭಾಗವಾಗಿ ಮಂಗಳವಾರ ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಎರಡು ಹಡೀಲು ಗದ್ದೆಗಳಲ್ಲೂ ಭತ್ತ ಬೆಳೆಯೋ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಆದ್ರೆ ಈ ಎರಡೂ ಗದ್ದೆಯಲ್ಲಿ ಸ್ವತಃ ದ.ಕ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕೃಷಿ ಕಾರ್ಯ ಮಾಡುವ ಮೂಲಕ ಪ್ರೇರಣೆಯ ಹೆಜ್ಜೆ ಇಟ್ಟಿದ್ದಾರೆ.

gf


ಶಾಸ್ತ್ರೋಕ್ತವಾಗಿ ಗದ್ದೆಯ ಬಳಿ ದೀಪ ಬೆಳಗಿಸಿದ ಬಳಿಕ ಸ್ಥಳೀಯರ ಜೊತೆ ಸೇರಿ ತಾವೇ ನೈತಾಡಿಯ ಗದ್ದೆಯಲ್ಲಿ ನೇಗಿಲ ಕೋಣಗಳ ಸಹಿತ ಗದ್ದೆಯ ಉಳುಮೆ ಮಾಡಿದ್ರು. ಅಲ್ಲದೇ ಪಕ್ಕದಲ್ಲೇ ಇದ್ದ ಮತ್ತೊಂದು ಗದ್ದೆಯನ್ನ ಟ್ರಾಕ್ಟರ್ ಏರಿ ಹದ ಮಾಡಿದ್ರು. ಜಿಲ್ಲೆಯಾದ್ಯಂತ ಮಳೆರಾಯನ ಅಬ್ಬರ ಜೋರಾಗಿದ್ದರೂ ನಳಿನ್ ಕುಮಾರ್ ಕಟೀಲ್ ಮಾತ್ರ ನೇಗಿಲು ಮತ್ತು ಟ್ರಾಕ್ಟರ್ ಮೂಲಕ ನೈತಾಡಿಯಲ್ಲಿ ಗದ್ದೆ ಕೆಲಸ ಮಾಡಿದ್ದಾರೆ. ಇದಾದ ನಳಿಕ ಮುಳಿಯ ಫಾರ್ಮ್‍ಗೆ ತೆರಳಿ ಅಲ್ಲಿ ಉಳುಮೆ ಮಾಡಿ ತಯಾರಾಗಿದ್ದ ಗದ್ದೆಯಲ್ಲಿ ಸ್ಥಳೀಯರ ಜೊತೆ ಸೇರಿಕೊಂಡು ಪೈರು ನೇಡೋ ಕಾರ್ಯ ಮಾಡಿದ್ದಾರೆ ಸದ್ಯ ಯಾಂತ್ರೀಕೃತ ಪೈರು ನಾಟಿ ವ್ಯವಸ್ಥೆ ಇದ್ರೂ ನಳಿನ್ ಕುಮಾರ್ ಮಾತ್ರ ಕೈಯ್ತಲ್ಲೇ ಪೈರು ನಾಟಿ ಮಾಡೋ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು.

ff

ರಾಜಕೀಯದ ಜಂಜಾಟ ಮರೆತು ನಳಿನ್ ಇವತ್ತು ಕೃಷಿಕರಾಗಿ ಬದಲಾಗಿದ್ದರು. ಮೂಲತಃ ಪುತ್ತೂರಿನ ಕೃಷಿ ಕುಟುಂಬದಿಂದಲೇ ಬಂದಿರೋ ನಳಿನ್ ಸಣ್ಣ ವಯಸ್ಸಲ್ಲಿ ಕೃಷಿ ಕೆಲಸ ಮಾಡಿಕೊಂಡೇ ಬೆಳೆದವ್ರು ಆದ್ರೆ ರಾಜಕಾರಣ ಸೇರಿದ ಮೇಲೆ ಅದರಿಂದ ದೂರವಾಗಿದ್ದ ನಳಿನ್ ಕಟೀಲ್ ಗೆ ಮತ್ತೆ ಕೃಷಿಯ ಸ್ಪರ್ಶ ಸಿಕ್ಕಿದೆ. ಇವತ್ತಿನ ಕಾರ್ಯ ಯುವಜನರಿಗೆ ಪ್ರೇರಣೆ ನೀಡೋ ಉದ್ದೇಶದಿಂದ ಮಾಡಲಾಗಿದೆ. ಹೀಗಾಗಿ ಮುಂದೆ ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋ ಪಕಾರ್ಯವನ್ನ ಎಲ್ಲರೂ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.


ಪಾಳು ಬಿಟ್ಟ ಭೂಮಿಯಲ್ಲಿ ಭತ್ತ ಬೆಳೆಯೋಣ ಅನ್ನೋ ಯೋಜನೆ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಕನಸಿನ ಯೋಜನೆ.ಇನ್ನು ಈ ಯೋಜನೆಯ ಹಿಂದೆ ಎರಡು ಉದ್ದೇಶಗಳಿವೆ. ಒಂದು ಪಾಳು ಬಿದ್ದ ಗದ್ದೆಗೆ ಮತ್ತೆ ಪುನರ್ಜೀವನ ನೀಡೋದು ಮತ್ತು ಹೆಚ್ಚಿನ ಕೆಂಪು ಕುಚುಲಕ್ಕಿ ಬೆಳೆಯೋದು.ಇಡೀ ರಾಜ್ಯದಲ್ಲಿ ಕರಾವಳಿ ಭಾಗದ ಜನರು ಮಾತ್ರ ಅನ್ನಕ್ಕೆ ಕೆಂಪು ಕುಚುಲಕ್ಕಿ ಬಳಕೆ ಮಾಡ್ತಾರೆ. ಆದರೆ ಪಡಿತರ ಅಂಗಡಿಗಳಲ್ಲಿ ಬಿಳಿ ಅಕ್ಕಿಯೇ ಸಿಗೋ ಕಾರಣ ಕರಾವಳಿ ಜಿಲ್ಕೆಗಳಿಗೆ ಕೆಂಪು ಕುಚುಲಕ್ಕಿ ಪೂರೈಕೆಗೆ ಸಚಿವ ಕೋಟಾ ಆಹಾರ ಸಚಿವರಿಗೆ ಮನವಿ ಸಲ್ಲಿಸಿದ್ದರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.