ಬಿಜೆಪಿ ಹೈಕಮಾಂಡ್ ಪ್ಲಾನ್: 20 ಹಾಲಿ ಶಾಸಕರಿಗೆ ಕೊಕ್ ಕೊಡುವ ಎರಡು ಲಿಸ್ಟ್ ರೆಡಿ..!

2023ರ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವ ಹೈಕಮಾಂಡ್ ಲೆಕ್ಕಚಾರ ಖಡಕ್ ಆಗಿರುತ್ತಂತೆ. ಎಷ್ಟೇ ದೊಡ್ಡವರಿದ್ದರೂ ಬ್ಯಾಕ್ ಸೀಟ್ ನಲ್ಲಿ ಕೂರಬೇಕು ಎಂಬ ಸಂದೇಶ ರವಾನೆ ಆಗಿದೆ ಎಂಬ ಚರ್ಚೆ ಶುರುವಾಗಿದೆ. ಈಗಾಗಲೇ ರೆಡಿ ಆಗಿರುವ 20 ಹಾಲಿ ಶಾಸಕರಿಗೆ ಕೊಕ್ ಕೊಡುವ ಲಿಸ್ಟ್ ಫೆಬ್ರವರಿ ಕಡೇ ವಾರದ ಬಳಿಕ ಅಂತಿಮವಾಗುವ ಸಾಧ್ಯತೆ ಇದ್ದು, ಶಾಸಕರಿಗೆ ಕೊಕ್ ಕೊಡುವ ಸಂಖ್ಯೆ ಹೆಚ್ಚಾದ್ರೂ ಆಗಬಹುದು. ಅಥವಾ ಕಡಿಮೆಯಾದ್ರೂ ಆಗಬಹುದಂತೆ. 

ಈ ನಡುವೆ ಬಿಜೆಪಿ ಎಲ್ಲ ಸಿಟ್ಟಿಂಗ್ ಎಂಎಲ್‍ಎ ಗಳಿಗೆ ಟಿಕೆಟ್ ಕೊಡಬೇಕು ಎಂಬ ರೂಲ್ಸ್ ಇಲ್ಲ ಎಂದು ಬಿಜೆಪಿ ಹೈಕಮಾಂಡ್‍ನಿಂದ ಕರ್ನಾಟಕ ಬಿಜೆಪಿ ಶಾಸಕರಿಗೆ ಪರೋಕ್ಷ ಸಂದೇಶ ರವಾನೆ ಆಗಿದೆ. ವಯಸ್ಸು+ಆರೋಗ್ಯ, ವಿರೋಧಿ ಅಲೆ, ಕ್ಷೇತ್ರದಲ್ಲಿನ ಲೆಕ್ಕಚಾರವೇ ಟಿಕೆಟ್‍ಗೆ ಮಾನದಂಡಗಳಾಗಿವೆ. ಮೂರು ಹಂತಗಳಲ್ಲಿ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಐದಾರು ಹಾಲಿ ಶಾಸಕರಿಗೆ ಕೊಕ್ ಸಾಧ್ಯತೆ ಇದ್ದರೆ, ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿರುವ ಮೂರ್ನಾಲ್ಕು ಹಾಲಿ ಶಾಸಕರಿಗೆ ಕೊಕ್ ಕೊಡಬಹುದು. ಇನ್ನು ಪದೇ ಪದೇ ಗೆದ್ದು ಪಕ್ಷ ಸಂಘಟನೆಗೆ ಉಪಯೋಗ ಇಲ್ಲದ ನಾಲ್ಕೈದು ಹಾಲಿ ಶಾಸಕರಿಗೆ ಕೊಕ್ ಕೊಡಬಹುದು ಎಂಬ ಚರ್ಚೆ ಬಿಜೆಪಿಯೊಳಗೆ ಜೋರಾಗಿ ನಡೆಯುತ್ತಿದೆ.ಈಗಾಗಲೇ ಎರಡು ಲಿಸ್ಟ್ ರೆಡಿಯಾಗಿದ್ದು, ಅದರಲ್ಲಿ 15 ಹಾಲಿ ಶಾಸಕರು ಹಿಟ್ ಲಿಸ್ಟ್ ನಲ್ಲಿದ್ದಾರಂತೆ. ಉಳಿದ 5ಕ್ಕೂ ಹೆಚ್ಚು ಶಾಸಕರು ಶಾರ್ಟ್ ಲಿಸ್ಟ್ ನಲ್ಲಿದ್ದಾರೆ. ಫೆಬ್ರವರಿ ಸರ್ವೇ ಬಳಿಕ ಬಿಜೆಪಿ ಹೈಕಮಾಂಡ್ ಎಲ್ಲವನ್ನೂ ಫೈನಲ್ ಮಾಡುತ್ತೆ ಎಂದು ಮೂಲಗಳು ತಿಳಿಸಿವೆ. 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.