ಸಿನಿಮಾ

ರಾಖಿ ಸಾವಂತ್ : ಪಾಕಿಸ್ತಾನದ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತೇನೆ

ರಾಖಿ ಸಾವಂತ್ : ನನಗೆ ಹಲವು ಪ್ರಪೋಸ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಹೇಗೆ ಕಿರುಕುಳ ನೀಡಲಾಯಿತು ಎಂಬುದನ್ನು ಅವರು ನೋಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ರಾಖಿ ಸಾವಂತ್ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರಂತೆ. ಮದುವೆಯ ನಂತರ ರಾಖಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಫಾತಿಮಾಳಾಗಿ ಮತಾಂತರಗೊಂಡರು. ಆದರೆ ಮದುವೆ ಆಗಿರೋದಾಗಿ ಹೇಳಿದ ಕೆಲವೇ ದಿನಗಳಲ್ಲಿ ಇಬ್ಬರ ನಡುವಿನ ಜಗಳ ಬೀದಿಗೆ ಬಂತು. ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಕಿಸ್ತಾನದಿಂದ ಮದುವೆಯ ಪ್ರಸ್ತಾಪಗಳನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಮತ್ತು ಸಮಯ ಬಂದಾಗ ಇಷ್ಟವಾಗುವ ಒಬ್ಬರನ್ನು ಆಯ್ಕೆ ಮಾಡಬಹುದು ಎಂದು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ನಟಿ ಸಂದರ್ಶನವೊಂದರಲ್ಲಿ ಮಾತನಾಡಿ, “ನನಗೆ ಹಲವು ಪ್ರಪೋಸ್‌ಗಳು ಬರುತ್ತಿವೆ. ನಾನು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ, ನನ್ನ ಹಿಂದಿನ ಮದುವೆಗಳಲ್ಲಿ ನನಗೆ ಹೇಗೆ ಕಿರುಕುಳ ನೀಡಲಾಯಿತು ಎಂಬುದನ್ನು ಅವರು ನೋಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.ನಾನು ಪಾಕಿಸ್ತಾನಿ ಜನರನ್ನು ಪ್ರೀತಿಸುತ್ತೇನೆ ಮತ್ತು ಅಲ್ಲಿ ನನಗೆ ಅನೇಕ ಅಭಿಮಾನಿಗಳಿದ್ದಾರೆ ಅನೇಕ ಪಾಕಿಸ್ತಾನಿ ಮತ್ತು ಭಾರತೀಯ ಜೋಡಿಗಳು ಮದುವೆಯಾಗಿ ಅಮೆರಿಕ ಮತ್ತು ದುಬೈನಲ್ಲಿ ನೆಲೆಸಿದ್ದು, ಉತ್ತಮ ಜೀವನ ನಡೆಸುತ್ತಿದ್ದಾರೆ" ಎಂದು ರಾಖಿ ಹೇಳಿದ್ದಾರೆ.ಈ ರೀತಿಯ ವಿವಾಹವು ಎರಡು ದೇಶಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸುತ್ತದೆ. ಭಾರತೀಯರು ಮತ್ತು ಪಾಕಿಸ್ತಾನಿಗಳು ಪರಸ್ಪರ ಒಪ್ಪಿಗೆ ಇಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾನು ಪಾಕಿಸ್ತಾನದ ಒಳ್ಳೆಯ ವ್ಯಕ್ತಿಯನ್ನು ಮದುವೆಯಾಗಲು ಬಯಸುತ್ತೇನೆ" ಎಂದಿದ್ದಾರೆ.

ಕಾಮೆಂಟ್ ಬಿಡಿ

Join Us