ಜಿಲ್ಲಾ ಸುದ್ದಿಗಳು

ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ವತಿಯಿಂದ ಆರ್ಥಿಕ ನೆರವು ವಿತರಣೆ ಸಮಾರಂಭ

ಮೂಲ್ಕಿ: ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ ವತಿಯಿಂದ 3ನೇ ವರ್ಷದ 2025-26ನೇ ಸಾಲಿನ ಮೂಲ್ಕಿ ಹಾಗೂ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆ ಯಲ್ಲಿ ಕಲಿಯುತ್ತಿರುವ ಆರ್ಥಿಕ ವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಣೆ ಸಮಾರಂಭ ಶನಿವಾರ ಸಂಸ್ಥೆಯ ಮುಂಭಾಗದ ವೇದಿಕೆಯಲ್ಲಿ ನಡೆಯಿತು.

ಮೂಲ್ಕಿಯ ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ವಂ. ಫಾ. ಅಂತೊನಿ ಶೆರಾ ಆಶೀರ್ವಚನ ನೀಡಿ, ಶಿಕ್ಷಣದಲ್ಲಿ ಗೆಲುವು ಶಾಶ್ವತವಲ್ಲ, ಸೋಲು ಅಂತಿಮವಲ್ಲ. ಪ್ರಯತ್ನ ಮುಂದುವರಿಸಿ ಜೀವನದಲ್ಲಿ ನಿರಂತರ ಸಾಧನೆ ಮುಖ್ಯ ವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ತಾಣದಿಂದ ದೂರವಿದ್ದು ಸಾಧಕರಾಗಿ ಎಂದರು.

ಮೂಲ್ಕಿ ಹಾಗೂ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಣೆ ಸಮಾರಂಭ ನಡೆಯಿತು.

ಸುರಭಿ ಎಲೆಕ್ಟ್ರಾನಿಕ್ಸ್ & ಫರ್ನಿಚರ್, ಮುಲ್ಕಿ ವತಿಯಿಂದ 2025-26 ನೇ ಸಾಲಿನ ಮುಲ್ಕಿ  ತಾಲೂಕಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ಪಡೆಯುವ ಶಾಲೆಗಳ ವಿವರ 
  • 1.ದ ಕ ಜಿ ಪ ಸರಕಾರಿ ಹಿ ಪ್ರಾ ಶಾಲೆ ಮನಂಪಾಡಿ, ಮುಲ್ಕಿ 
  • 2.ಭಾರತ್ ಮಾತಾ ಹಿ ಪ್ರಾ ಶಾಲೆ, ಪುನರೂರು, ಕಿನ್ನಿಗೋಳಿ 
  • 3.ಭಾರತ್ ಮಾತಾ ಪ್ರೌಢ ಶಾಲೆ, ಪುನರೂರು ಕಿನ್ನಿಗೋಳಿ 
  • 4.ಕೊಲಕಾಡಿ ಅನುದಾನಿತ ಹಿ ಪ್ರಾ ಶಾಲೆ, ಪಂಜಿನಡ್ಕ ಮುಲ್ಕಿ 
  • 5.ಕೆ ಪಿ ಎಸ್ ಕೆ ಸ್ಮಾರಕ ಪ್ರೌಢ ಶಾಲೆ ಪಂಜಿನಡ್ಕ, ಮುಲ್ಕಿ 
  • 6.ದ ಕ ಜಿ ಪ ಹಿ ಪ್ರಾ ಶಾಲೆ ಚಿತ್ರಾಪು, ಮುಲ್ಕಿ
  • 7.ಕೆ ಎಸ್ ರಾವ್ ಸ್ಮಾರಕ ಸರಕಾರಿ ಪ್ರೌಢಶಾಲೆ, ಚಿತ್ರಾಪು ಮುಲ್ಕಿ
  • 8.ಸರಕಾರಿ ಕಿ ಪ್ರಾ ಶಾಲೆ, ಕಕ್ವ ಮುಲ್ಕಿ
  • 9.ಸರಕಾರಿ ಹಿ ಪ್ರಾ (ಬೋರ್ಡ್ ) ಶಾಲೆ, ಮುಲ್ಕಿ
  • 10.ಸರಕಾರಿ ಪ್ರೌಢಶಾಲೆ ಸದಾಶಿವ ನಗರ, ಮುಲ್ಕಿ
  • 11.ಮೆಡಲಿನ್ ಹಿ ಪ್ರಾ ಶಾಲೆ ಕಾರ್ನಾಡ್ ಮುಲ್ಕಿ
  • 12.ಮೆಡಲಿನ್ ಪ್ರೌಢಶಾಲೆ ಕಾರ್ನಾಡ್ ಮುಲ್ಕಿ
  • 13.ಸರಕಾರಿ ಪ ಪೂ ಕಾ ಪ್ರಾಥಮಿಕ ವಿಭಾಗ ಕಾರ್ನಾಡ್, ಮುಲ್ಕಿ
  • 14.ಸ ಪ ಪೂ ಕಾ ಪ್ರೌಢಶಾಲೆ ಕಾರ್ನಾಡ್ ಮುಲ್ಕಿ
  • 15.ಸ ಪದವಿ ಪೂರ್ವ ಕಾಲೇಜ್ ಕಾರ್ನಾಡ್ ಮುಲ್ಕಿ
  • 16.ಸ ಕಿ ಪ್ರಾ ಶಾಲೆ ಅತಿಕಾರಿಬೆಟ್ಟು ಮುಲ್ಕಿ
  • 17.ಸ ಕಿ ಪ್ರಾ ಶಾಲೆ ಕೆಂಚನಕೆರೆ ಮುಲ್ಕಿ
  • 18.ಸ ಕಿ ಪ್ರಾ ಶಾಲೆ ಕಿಲ್ಪಾಡಿ ಮುಲ್ಕಿ
  • 19.ಸ ಪ ಪೂ ಕಾ ಪ್ರೌಢಶಾಲಾ ವಿಭಾಗ ಹಳೆಯಂಗಡಿ
  • 20.ಸಂತ ಪೌಲರ ಹಿ ಪ್ರಾ ಶಾಲೆ ಬಳಕುಂಜೆ

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ- 153 ಆರ್ಥಿಕ ನೆರವು 

ಸುರಭಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲೀಕ ಜಾನ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು.ಮೂಲ್ಕಿ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಬಿ.ಎಸ್., ವೇದ ಮೂರ್ತಿ ವಾದಿರಾಜ ಉಪಾ ಧ್ಯಾಯ ಕೊಲಕಾಡಿ, ವಕೀಲರಾದ ಹಂಝತ್ ಹೆಜಮಾಡಿಕೋಡಿ, ಕಾರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯ ಲಕ್ಷ್ಮೀ ಟಿ. ನಾಯಕ್ ಮಾತನಾಡಿದರು.ರೋಶನ್ ಫುರ್ಟಾಡೋ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಹೆಜ್ಜಾಡಿ ವಂದಿಸಿದರು.

ಕಾಮೆಂಟ್ ಬಿಡಿ

Join Us