ಡಿ. 21: ಮೂಲ್ಕಿಯಲ್ಲಿ 3 ಜಿಲ್ಲಾ ಮಟ್ಟದ ಪದ್ಮಶಾಲಿ ಕ್ರೀಡೋತ್ಸವ
ಮೂಲ್ಕಿ : ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಹದಿನಾರು ಶ್ರೀ ವೀರಭದ್ರ ದೇವಸ್ಥಾನಗಳ ವ್ಯಾಪ್ತಿಯ ಪದ್ಮಶಾಲಿ ಕ್ರೀಡೋತ್ಸವವು ಡಿ. 21ರಂದು ಮೂಲ್ಕಿ ಕಾರ್ನಾಡಿನ ಸರಕಾರಿ ಪದವಿಪೂರ್ವ (ಜ್ಯೂನಿಯರ್) ಇದರ ಕ್ರೀಡಾಂಗಣದಲ್ಲಿ ನಡೆಯಲಿದೆ.
ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಾರ್ಗದರ್ಶನ ಹಾಗೂ ಮಾನಂಪಾಡಿ ಶ್ರೀ ವೀರಭದ್ರ ದೇವಸ್ಥಾನದ ಸಹಯೋಗದಲ್ಲಿ ಪದ್ಮಶಾಲಿ ಯುವ ವೇದಿಕೆ ಮೂಲ್ಕಿಯ ನೇತೃತ್ವದಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಕ್ರೀಡೋತ್ಸವ ಜರಗಲಿದೆ.
ಬೆಳಗ್ಗೆ 8.30ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ. ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಕಾರ್ಕಳ, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು, ಪ್ರಾಂಶುಪಾಲ ವಾಸುದೇವ ಬೆಳ್ಳೆ ಡಾ। ಹರಿಕೃಷ್ಣ ಪುನರೂರು, ನಳಿನ್ ಕುಮಾರ್ ಕಟೀಲು ಮತ್ತಿತರರು ಉಪಸ್ಥಿತರಿರುತ್ತಾರೆ.
ಬೆಳಗ್ಗೆ 10.30ಕ್ಕೆ ಮುಂಬಯಿ ಪದ್ಮಶಾಲಿ ಸಮಾಜಸೇವಾ ಸಂಘ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರ್ ಅಧ್ಯಕ್ಷತೆಯಲ್ಲಿ ಕ್ರೀಡಾಕೂಟದ ಗೌರವ ಪ್ರದಾನ ನಡೆಯಲಿದೆ. 7 ಮಂದಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.
ಗೌರವ ಸನ್ಮಾನ ಸ್ವೀಕಾರ:
- ಶ್ರೀ ಧನಂಜಯ ಶೆಟ್ಟಿಗಾರ್, ದುಬೈ, ಟ್ರಸ್ಟಿ ಪದ್ಮಶಾಲಿ ಸಮುದಾಯ ದುಬೈ
- ಶ್ರೀ ಶೇಖರ್ ಡಿ. ಶೆಟ್ಟಿಗಾರ್, ಯಕ್ಷಗುರುಗಳು, ದುಬೈ
- ಡಾ| ಚಂದ್ರಶೇಖರ್ ವಿ.ಎಸ್. ಸಮಾಜಸೇವಕರು
- ಶ್ರೀ ಶಾರದಾ ಡಿ. ಶೆಟ್ಟಿಗಾರ್ ಬ್ರಹ್ಮಾವರ. 6ನೇ ವರ್ಷದ ಕ್ರೀಡೋತ್ಸವದ ಏಕಮಾತ್ರ ಆಯೋಜಕರು
- ಶ್ರೀಮತಿ ವಿದ್ಯಾಲತಾ ದತ್ತರಾಜ್ ಕೊÊಲ (ಮಾಜಿ ಕ್ರೀಡಾ ಸಂಚಾಲಕರ ಗೌರವಾರ್ಥ)
- ಬೇಬಿ ಧನ್ಯ, ರಾಷ್ಟಿçÃಯ ಮಟ್ಟದ ಕರಾಟೆಪಟು
- ಪದ್ಮಶಾಲಿ ಸಮಾಜಕ್ಕೆ ಕೀರ್ತಿ ತಂದ ಜೇನು ಕೃಷಿಕ, ಪ್ರಜ್ವಲ್ ಎಂ
ಸಂಜೆ ನಡೆಯುವ ಸಮಾರೋಪದಲ್ಲಿ ವೆಂಕಟರಮಣ ಆಸ್ರಣ್ಣ, ಆನುವಂಶಿಕ ಅರ್ಚಕರು,ಹರಿನಾರಾಯಣದಾಸ ಆಸ್ರಣ್ಣ, ಶ್ರೀ ಕ್ಷೇತ್ರ ಕಟೀಲು, ಮಿಥುನ್ ರೈ, ಯುವ ನೇತಾರ, ಪ್ರಧಾನ ಕಾರ್ಯದರ್ಶಿ KPCC, ಶ್ರೀ ಕ್ಷೇತ್ರದ ಮೊಕ್ತೇಸರರು, ನಾಲ್ಕು ಮಾಗಣೆ ಅಧ್ಯಕ್ಷರುಗಳು ಪದ್ಮಶಾಲಿ ಯುವ ವೇದಿಕೆ ಅಧ್ಯಕ್ಷರು ಮತ್ತು ಕ್ರೀಡೋತ್ಸವ ಸಮಿತಿಯ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿರುತ್ತಾರೆ ಎಂದು ಪ್ರಕಟನೆ ತಿಳಿದೆ.
ಕಾಮೆಂಟ್ ಬಿಡಿ