ಕಾರ್ಕಳ :ಚಿಕ್ಕ ಮಕ್ಕಳಿಗೆ ಮೊಬೈಲ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋಗೆ ವ್ಯಾಪಕ ವಿರೋಧ
ಕಾರ್ಕಳ : ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹಠ ಮಾಡಿದ ತಕ್ಷಣ ಪೋಷಕರು ಮೊಬೈಲನ್ನು ಕೊಡುತ್ತಾರೆ. ಊಟ ಮಾಡೋದಿಲ್ಲ ಎಂದ ಕ್ಷಣ ಮೊಬೈಲ್ ನೀಡಿ ಸಮಾಧಾನ ಮಾಡುತ್ತಾರೆ ಹೀಗಾಗಿ ಅದೆಷ್ಟು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಕನ್ನಡಕ ಬರುವುದನ್ನು ನಾವು ನೋಡುತ್ತೇವೆ ಈ ಹಿನ್ನೆಲೆಯಲ್ಲಿ ಕಾರ್ಕಳದ ಶಿಕ್ಷಕಿ ವಂದನ ರೈ ಮಕ್ಕಳಲ್ಲಿ ಮೊಬೈಲ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ಟೀಕೆಗೆ ಗುರಿಯಾಗಿದೆ.
ಮಕ್ಕಳಲ್ಲಿ ಭಯ ಹುಟ್ಟಿಸುವಂತಹ ವಿಡಿಯೋವನ್ನು ಸೃಷ್ಟಿ ಮಾಡುವುದರಿಂದ ಸಣ್ಣ ಮಕ್ಕಳ ಮನಸ್ಸಿನಲ್ಲಿ ದುಷ್ಪರಿಣಾಮ ಬೀರಬಹುದು ಮಕ್ಕಳ ಮನಸ್ಸು ಇನ್ನು ರೂಪಗೊಳ್ಳುವ ಹಂತದಲ್ಲಿರುವುದರಿಂದ ಭಯ ಆತಂಕ ಅಥವಾ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮಕ್ಕಳಿಗೆ ಭಯವನ್ನು ಉಂಟು ಮಾಡುವ ರೀತಿಯಲ್ಲಿ ಜಾಗೃತಿ ಮೂಡಿಸುವುದು ಮಾನಸಿಕ ಆರೋಗ್ಯಕ್ಕೆ ಹಾನಿಕರಕ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಶಿಕ್ಷಕಿಯ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ಇದರ ಬೆನ್ನಲ್ಲೇ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಕಾಮೆಂಟ್ ಬಿಡಿ