ಜಿಲ್ಲಾ ಸುದ್ದಿಗಳು

ಆರೋಪಿ ಕೃಷ್ಣ ಕೆ. ರಾವ್ ಗೆ ಮಗು ಕರುಣಿಸಲು ಗೊತ್ತಿದೆ, ಇನ್ನೆಂಥಹ ಪ್ರೌಢಾವಸ್ಥೆ: ಪ್ರತಿಭಾ ಕುಳಾಯಿ ಆಕ್ರೋಶ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿಗೆ ಮಗು ಕರುಣಿಸಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮನೆಗೆ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭೇಟಿ ನೀಡಿ ಸಂತ್ರಸ್ತೆ ಹಾಗೂ ಹೆತ್ತವರಿಗೆ ಧೈರ್ಯ ತುಂಬಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ಮಾಡುತ್ತೇನೆ. ಸಂತ್ರಸ್ತೆಯ ಕುಟುಂಬದೊಂದಿಗೆ ನಿಂತು ನ್ಯಾಯ ಒದಗಿಸುವ ಕೆಲಸ ನನ್ನದು. ಆರೋಪಿ ಕೃಷ್ಣ ಕೆ ರಾವ್ ಪ್ರೌಢಾವಸ್ಥೆಗೆ ಬಂದಿಲ್ಲ ಎಂದು ಕೆಲವರು ಹೇಳುತ್ತಾರೆ. ಮಗು ಕರುಣಿಸಲು ಗೊತ್ತಿದೆ, ಇನ್ನೆಂಥಹ ಪ್ರೌಢಾವಸ್ಥೆ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದರು.

ಲೈಂಗಿಕ ಶೋಷಣೆಗಳಂತಹ ಘಟನೆಗಳು ನಡೆದಾಗ ಮಹಿಳೆಯರು ಧೈರ್ಯ ಕಳೆದುಕೊಳ್ಳಬಾರದು. ಬದಲಾಗಿ ಆರೋಪಿಗಳ ವಿರುದ್ಧ ಹೋರಾಟ ಮಾಡಬೇಕು. ಇದು ಇಬ್ಬರ ಭವಿಷ್ಯದ ಪ್ರಶ್ನೆ. ನಾನು ನಿಮ್ಮ ಪರವಾಗಿ ಇದ್ದೇನೆ. ಸಂತ್ರಸ್ತೆಯನ್ನು ಪತಿಯ ಮನೆಗೆ ಸೇರಿಸುವ ಜವಾಬ್ದಾರಿ ನನ್ನದು. ಇಲ್ಲಿಯವರೆಗೆ ಸಂತ್ರಸ್ತೆಗೆ ಒಬ್ಬರು ತಾಯಿ ಇದ್ದರು. ಇನ್ನು ಮುಂದೆ ನಾನು ಕೂಡ ಸಂತ್ರಸ್ತೆಯ ತಾಯಿ. ಸಂತ್ರಸ್ತೆ ಕುಟುಂಬದ ಖರ್ಚು ವೆಚ್ಚವನ್ನೆಲ್ಲ ನಾನು ಭರಿಸುತ್ತೇನೆ ಎಂದರು.

ಇದೇ ವೇಳೆ ಪ್ರತಿಭಾ ಕುಳಾಯಿ ಅವರ ಫೋನ್ ಮೂಲಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ಸಂಪರ್ಕಿಸಿ ನಮಿತಾ ಅವರೂ ಮಾತುಕತೆ ನಡೆಸಿದ್ದಾರೆ. ಸಂತ್ರಸ್ತೆಯ ತಾಯಿಗೆ ಧೈರ್ಯ ತುಂಬಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಕಾನೂನು ಚೌಕಟ್ಟಿನ ಮುಖಾಂತರವೇ ನ್ಯಾಯ ದೊರಕಿಸಿ ಕೊಡುತ್ತೇವೆ. ನಿಮ್ಮ ಪರವಾಗಿ ಮಹಿಳಾ ಆಯೋಗ ನಿಲ್ಲಲಿದೆ ಎಂದು ಧೈರ್ಯ ತುಂಬಿದ್ದಾರೆ.

ಕಾಮೆಂಟ್ ಬಿಡಿ

Join Us