ಕ್ರೈಂ

ಹಳೆಯಂಗಡಿಯ ಅಪ್ರಾಪ್ತ ಬಾಲಕಿಯೋರ್ವಳ ಅತ್ಯಾಚಾರ

ಮುಲ್ಕಿ: ಮಕ್ಕಳು ಮೇಲಿನ ಅತ್ಯಾಚಾರ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.ಆದರೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಮೂಲತಃ ಬಾದಾಮಿಯ ಕೂಲಿ ಕಾರ್ಮಿಕ ಮಣಿಕಂಠ ಎಂಬಾತ ಕಳೆದ 2024ರ ಎಪ್ರಿಲ್‌ನಿಂದ ಬಾಲಕಿಯ ಪರಿಚಯ ಹೊಂದಿದ್ದ. ಇನ್‌ಸ್ಟಾಗ್ರಾಮ್ ಮತ್ತು ಸ್ಕ್ಯಾಪ್ ಚಾಟ್ ಮೂಲಕ ಹಳೆಯಂಗಡಿಯ ಅಪ್ರಾಪ್ತ ಬಾಲಕಿಯೋರ್ವಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ಉಡುಪಿಯಲ್ಲಿರುವ ತನ್ನ ರೂಮ್‌ಗೆ ಕರೆದುಕೊಂಡು ಹೋಗಿ ಹಲವಾರು ಬಾರಿ ಅತ್ಯಾಚಾರವೆಸಗಿರುವುದಾಗಿ ಬಾಲಕಿಯ ತಾಯಿ ನೀಡಿದ ದೂರಿನಂತೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತಿದೆ. ಗೃಹ ಇಲಾಖೆ ನೀಡಿರುವ ಅಂಕಿ - ಅಂಶಗಳ ಪ್ರಕಾರ 2023 ರಿಂದ 2025 ರ ವರೆಗೆ 1461 ಅತ್ಯಾಚಾರ ಪ್ರಕರಣಗಳು ನಡೆದಿದೆ. ಇದರಲ್ಲಿ 1662 ಆರೋಪಿಗಳ ಬಂಧನ ಆಗಿದೆ. ಆದರೆ ಶಿಕ್ಷೆಯ ಪ್ರಮಾಣ ಮಾತ್ರ ಶೂನ್ಯ ಎಂಬುದು ರಾಜ್ಯ ಅಪರಾಧ ದಾಖಲಾತಿ ವಿಭಾಗವು (SCRB) ಕ್ರೈಂ ಇನ್ ಕರ್ನಾಟಕ ಬಿಡುಗಡೆ ಮಾಡಿರುವ ಅಂಕಿ-ಅಂಶದಿಂದ ತಿಳಿದುಬಂದಿದೆ.ಅತ್ಯಾಚಾರ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗಳು ಆದಲ್ಲಿ ಮಾತ್ರ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ.

ಕಾಮೆಂಟ್ ಬಿಡಿ

Join Us