ಶೀರ್ಷಿಕೆ - ಹಸಿರೇ ನಮಗುಸಿರು
ಸ್ವಚ್ಚವಾಗಿತ್ತು ಕಡಲ ಒಡಲು
ಇರುವಾಗ ಶುದ್ಧ ಗಾಳಿ, ಬಿಸಿಲು
ಕಡಿದೆ ಮರಗಳ ಕಟ್ಟಡಗೊಳಿಸಲು
ಪ್ರಕೃತಿಯೇ ಬಂದಿದೆ ಮನೆಗೀಗ ಪ್ರಶ್ನೆ ಕೇಳಲು..!!
ಕೊರಗುತಿದೆ ಕಡಲಿಂದು
ಧರೆಯ ಸಂಕಟ ನೆನೆ ನೆನೆದು
ಮರಗಳ ನಾಶದ ಪ್ರತಿಫಲವಿದು 
ಕರಗದೇ ಹೃದಯ ನಿನಗೆಂದೂ..? |
ಸ್ವಚ್ಚ ಪರಿಸರವೇ ಭೂಮಿಗೆ ಆಸ್ತಿಯು 
ಇದ ಬೆಳೆಸುವುದೇ ನಿಜ ಭಕ್ತಿಯು 
ಪರಿಸರವೇ ನಮ್ಮುಸಿರಿಗೆ ಶಕ್ತಿಯು 
ತುಂಬಲಿ ಇಳೆಯ ರಕ್ಷಿಸುವ ಆಸಕ್ತಿಯು..!!
ಇನ್ನಾದರೂ ನೋಡು ಕಡಲ ಅಳಲನ್ನು 
ಆಲಿಸು ಕಡಲೊಡಲ ಮನವಿಯನ್ನು 
ತಿಳಿವೆ ಮನುಜನೇ ಇದಕೆ ಕಾರಣವೆಂಬ ನಿಜವನ್ನು
ತಿಳಿದು ರಕ್ಷಿಸು ಧರೆಯ ಸೊಬಗನ್ನು..!!
-✍🏻 ಯಶಸ್ವಿ ಗಣೇಶ್ ಸೋಮವಾರಪೇಟೆ
                                 
                                       
                                       
                              
          
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                             
                                                                                                                                                                                                                                                                                                                                                                                      
                                                                    
ಕಾಮೆಂಟ್ ಬಿಡಿ