ಧರ್ಮಸ್ಥಳ ಪ್ರಕರಣ :ಸುಳ್ಳು ದಾಖಲೆ ಸೃಷ್ಟಿಸಿದ್ದರೆ ಬಂಧಿಸಲಿ ಎಂದು ಸವಾಲು : ಗಿರೀಶ್ ಮಟ್ಟಣನವರ್
ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡದ ಎದುರು ನಿನ್ನೆ ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟಣನವರ್ ವಿಚಾರಣೆಗೆ ಹಾಜರಾಗಿದ್ದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿಗಳ ರೀತಿಯೇ ಅವರಿಗೆ ಮಾಹಿತಿಯನ್ನು ನೀಡಿ ಅಚ್ಚರಿ ಮೂಡಿಸಿದರು. ಮಾಧ್ಯಮಗಳಲ್ಲಿ ಬರುವ ಬ್ರೇಕಿಂಗ್ ಸುದ್ದಿ ರೀತಿಯೇ ಹೇಳಿದ ಅವರು ನನಗೆ SIT ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಅಂತಾ ಕೇಳಿದ್ರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಠ್ ಗಳಿಂದ ದೇವಸ್ಥಾನ ಹಾಳು ಮಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಅಂತಾ ಕೇಳಿದ್ರು. ಅದನ್ನು ಪೂರ್ತಿಯಾಗಿ ಹೇಳಿದ್ದೇನೆ ಎಂದರು.
ಯಾವ ಶೋ ರೂಂ ನಿಂದ ಬುರುಡೆ ತಂದಿದ್ದೀರಿ. ಅದಕ್ಕೆ ಯಾವ ಕಾರ್ಪರೇಟರ್ ಬಣ್ಣ ಹಚ್ಚಿದ್ರು ಅಂತಾ ಕೇಳಿದ್ರು. ಅವರ ನಂಬರ್ ಕೂಡಾ ಕೊಟ್ಟಿ ಬಂದಿದ್ದೇನೆ. ಬುರುಡೆ ಆಗಲಿ, ಏನೇ ಆಗಲಿ ಪ್ರತಿಯೊಂದಕ್ಕೂ ಸ್ಪಷ್ಟನೆ ನೀಡಿ ಬಂದಿದ್ದೇನೆ ಎಂದು ತಿಳಿಸಿದರು. ಬಳಿಕ ಮಾತನಾಡಿದ ಅವರು ಪ್ರಕರಣದಲ್ಲಿ ನಾವು ಯಾವುದೇ ಸುಳ್ಳು ಹೇಳಿಲ್ಲ. ಎಲ್ಲದ್ದಕ್ಕೂ ಸ್ಪಷ್ಟನೆ ನೀಡಿದ್ದೇನೆ. ಹೆಣ ಹೂತಿದ್ದ ಅಕ್ರಮ ಮತ್ತು ಧರ್ಮಸ್ಥಳ ಪಂಚಾಯತ್ ದಾಖಲೆಯಲ್ಲಿನ ಫೋರ್ಜರಿ ಕುರಿತು ದಾಖಲೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿದ್ದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
ಕಾಮೆಂಟ್ ಬಿಡಿ