ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ ಗಾಯಕಿ ಶ್ರೇಯಾ ಘೋಷಾಲ್..!?

ಮುಂಬೈ: ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ತಮ್ಮ ಮಧುರ ಕಂಠದಿಂದ ಫೇವರಿಟ್ ಎನಿಸಿಕೊಂಡಿರುವ ಗಾಯಕಿ ಶ್ರೇಯಾ ಘೋಷಾಲ್ ಈಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. 
ಫೇಸ್ ಬುಕ್ ಪುಟದಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಬೇಬಿ ಬಂಪ್ ಇರುವ ಫೋಟೋ ಹಾಕಿಕೊಂಡಿರುವ ಶ್ರೇಯಾ ‘ಬೇಬಿ ಶ್ರೇಯಾದಿತ್ಯ ಸದ್ಯದಲ್ಲೇ ಬರಲಿದೆ. ನಾವಿಬ್ಬರೂ ಈ ವಿಚಾರವನ್ನು ನಿಮ್ಮೆದುರು ಹಂಚಿಕೊಳ್ಳಲು ಖುಷಿಪಡುತ್ತೇವೆ. ನಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ನಿಮ್ಮೆಲ್ಲರ ಹಾರೈಕೆ, ಪ್ರೀತಿ ನಮ್ಮ ಮೇಲಿರಲಿ’ ಎಂದು ಶ್ರೇಯಾ ಬರೆದುಕೊಂಡಿದ್ದಾರೆ.

tru


 
ಶ್ರೇಯಾ ಮತ್ತು ಶೈಲಾದಿತ್ಯ ಮುಖ್ಯೋಪಾಧ್ಯಾಯ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಹುಕಾಲದ ಅವರ ಗೆಳೆತನ ಮದುವೆಯಲ್ಲಿ ಕೊನೆಗೊಂಡಿತ್ತು. ಇದೀಗ ಇಬ್ಬರೂ ಹೊಸ ಅತಿಥಿಯ ಆಗಮನಕ್ಕೆ ಕಾಯುತ್ತಿದ್ದಾರೆ.

  • ನ್ಯೂಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.