ಇಂಗ್ಲೆಂಡ್ ವಿರುದ್ಧದ 3 ಏಕದಿನ ಸರಣಿಗೆ ತಂಡ ಪ್ರಕಟ, ಕನ್ನಡಿಗ ಸೇರಿ ಮೂವರಿಗೆ ಮೊದಲ ಬಾರಿ ಸ್ಥಾನ

ಪುಣೆ : ಇಂಗ್ಲೆಂಡ್  ವಿರುದ್ಧದ 3 ಏಕದಿನ ಸರಣಿಗೆ ಬಿಸಿಸಿಐ, ಟೀಮ್ ಇಂಡಿಯಾವನ್ನು ಘೋಷಿಸಿದೆ. ಕ್ರುನಾಲ್ ಪಾಂಡ್ಯ ಏಕದಿನ ತಂಡಕ್ಕೆ ಮರಳಿದ್ದಾರೆ. ಅದೇ ಸಮಯದಲ್ಲಿ ಪ್ರಸಿದ್ಧ ಕೃಷ್ಣ ಅವರಿಗೆ ಬೌಲಿಂಗ್ ವಿಭಾಗದಲ್ಲಿ ಅವಕಾಶ ಸಿಕ್ಕಿದೆ. ತಂಡದಲ್ಲಿ ಪ್ರಸಿದ್ಧ್ ಕೃಷ್ಣರ ಆಯ್ಕೆಯ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರ ಆಯ್ಕೆ ಆಶ್ಚರ್ಯಕಾರಿಯಾಗಿದೆ. ಕೊಹ್ಲಿ ತಂಡದ ನಾಯಕತ್ವವನ್ನು ನಿರ್ವಹಿಸಲಿದ್ದಾರೆ. ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಮೊದಲು ರೋಹಿತ್ ಶರ್ಮಾ ಅವರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುತ್ತಾರೆ ಎಂಬ ವರದಿಗಳೂ ಬಂದವು. ಆದರೆ, ಉಪನಾಯಕನಾಗಿ ಹಿಟ್ಮ್ಯಾನ್ ಏಕದಿನ ತಂಡದ ಭಾಗವಾಗಿದ್ದಾರೆ.

ಇಂಗ್ಲೆಂಡ್  ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. 18 ಆಟಗಾರರ ಈ ತಂಡದಲ್ಲಿ ಸೂರ್ಯಕುಮಾರ್ ಯಾದವ್, ಕರ್ನಾಟಕದ ವೇಗಿ ಪ್ರಸಿಧ್ ಕೃಷ್ಣಾ ಮತ್ತು ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಇದೇ ಮೊದಲ ಬಾರಿ ಸ್ಥಾನ ನೀಡಲಾಗಿದೆ. ಅಂದ್ರೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಇವರು ಸ್ಥಾನ ಪಡೆದ್ರೆ ಒಂಡೇ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಂತಾಗುತ್ತೆ. ಉಳಿದಂತೆ ನಾಲ್ವರು ಸ್ಪಿನ್ನರ್ ಮತ್ತು ಐವರು ವೇಗಿಗಳು ಆಯ್ಕೆಯಾಗಿದ್ದಾರೆ. 

1

ಮೊದಲ ಪಂದ್ಯ ಮಾ.23, ಎರಡನೇ ಪಂದ್ಯ ಮಾ.26 ಮತ್ತು ಮೂರನೇ ಪಂದ್ಯ ಮಾ.28ರಂದು ನಡೆಯಲಿದೆ. ಮೂರು ಪಂದ್ಯಗಳು ಪುಣೆಯಲ್ಲಿ ನಡೆಯಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್  ಮೊದಲ ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ.

3

ತಂಡ: ವಿರಾಟ್ ಕೊಹ್ಲಿ (ನಾ) ರೋಹಿತ್ ಶರ್ಮಾ ( ಉ.ನಾ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿ.ಕೀ), ಕೆ.ಎಲ್. ರಾಹುಲ್ (ವಿ.ಕೀ), ಯುಜುವೇಂದ್ರ ಚಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ,ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದುಲ್ ಠಾಕೂರ್.


ಸ್ಪೋರ್ಟ್ಸ್ ಬ್ಯೂರೋ ಟ್ರೂ ನ್ಯೂಸ್ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.