ಮುಲ್ಕಿಯ ಕೊಲ್ನಾಡುನಲ್ಲಿ 1 ಕೆ.ಜಿ 160 ಗ್ರಾಂ ಗಾಂಜಾ ವಶಕ್ಕೆ; ಧನೇಶ್ ಎಸ್. ಕುಮಾರ್ ಬಂಧಿತ ಆರೋಪಿ
ಮುಲ್ಕಿ: ಕೊಲ್ನಾಡು ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಸ್ತೆಯ ಬಳಿ ಪೊಲೀಸರು ವ್ಯಕ್ತಿಯೋರ್ವನಿಂದ ಸುಮಾರು 1 ಕೆ.ಜಿ 160 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ಕೋಡಿಕಲ್ ನಿವಾಸಿ ಧನೇಶ್ ಎಸ್. ಕುಮಾರ್ (35) ಎಂಬಾತ ಬಂಧಿತ ಆರೋಪಿ. ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಲ್ಕಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಬಿ.ಎಸ್ ರವರು ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿದ್ದು, ಮೊಬೈಲ್ ಫೋನ್ ಹಾಗೂ ಗಾಂಜಾ ತೂಕ ಮಾಡುವ ಯಂತ್ರ ಮತ್ತು ಇತರೆ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಾಮೆಂಟ್ ಬಿಡಿ