ಕ್ರೈಂ

ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಗಂಭೀರ ತಿರುವು; ಸೌಜನ್ಯಳ ಕಿಡ್ನಾಪ್ ಕಣ್ಣಾರೆ ಕಂಡಿದ್ದೇನೆ:ಚಿಕ್ಕಕೆಂಪಮ್ಮ

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ಮುನ್ನಲೆಗೆ ಬಂದಿದೆ. ಬುರುಡೆ ಮ್ಯಾನ್ ಚಿನ್ನಯ್ಯ ತಾನು ಸೌಜನ್ಯಳ ಅಪಹರಣವನ್ನು ಕಣ್ಣಾರೆ ಕಂಡಿದ್ದೇನೆ ಎಂದು ಹೇಳಿಕೆ ನೀಡಿದ್ದ ಬಳಿಕ, ಈಗ ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆಯೂ ತಾನು ಸೌಜನ್ಯಳ ಕಿಡ್ನಾಪ್ ಘಟನೆಯನ್ನು ಕಂಡಿದ್ದೇನೆ ಎಂದು ವಿಶೇಷ ತನಿಖಾ ದಳಕ್ಕೆ (SIT) ದೂರು ಸಲ್ಲಿಸಿದ್ದಾರೆ. ಈ ದೂರು ಪ್ರಕರಣಕ್ಕೆ ಮತ್ತಷ್ಟು ಗಂಭೀರ ತಿರುವು ನೀಡಿದೆ.

ಚಿಕ್ಕಕೆಂಪಮ್ಮ ತನ್ನ ದೂರಿನಲ್ಲಿ, ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿದ್ದ ವೇಳೆ ಒಬ್ಬ ಹುಡುಗಿಯನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದನ್ನು ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ SIT ಅಧಿಕಾರಿಗಳು ದೂರವಾಣಿ ಮೂಲಕ 45 ನಿಮಿಷಗಳ ಕಾಲ ಚಿಕ್ಕಕೆಂಪಮ್ಮರಿಂದ ವಿವರಣೆ ಪಡೆದಿದ್ದಾರೆ. ಈ ಚರ್ಚೆ SIT ಸಹಾಯವಾಣಿ ಮೂಲಕ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದೆ.

ಕಾಮೆಂಟ್ ಬಿಡಿ

Join Us