ಮೂಡಬಿದ್ರೆ : ಹಸುವಿನ ತಲೆಬುರುಡೆ ಗೋಣಿ ಚೀಲ ಪತ್ತೆ..! ಕಾಂಗ್ರೆಸ್ ನಿಯೋಗ ಪೊಲೀಸ್ ಕಮಿಷನರ್ ಭೇಟಿ ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಮನವಿ

ಮೂಡಬಿದ್ರೆ : ತುಂಡರಿಸಿದ ರೀತಿಯಲ್ಲಿ ದನದ ತಲೆ ಪತ್ತೆಯಾದ ಘಟನೆ ಮೂಡುಬಿದಿರೆ ತಾಲೂಕಿನ ಮಹಾವೀರ ಕಾಲೇಜು ಸಮೀಪದ ಕೊಡಂಗಲ್ಲು ಕೀರ್ತಿನಗರ ಕ್ರಾಸ್‌ ಬಳಿ ಬುಧವಾರ ಬೆಳಗ್ಗೆ ನಡೆದಿದೆ.ಹಸುವಿನ ಮುಂಡದಿಂದ ಬೇರ್ಪಟ್ಟಿದ್ದ ತಲೆಬುರುಡೆಯನ್ನು ಗೋಣಿ ಚೀಲದಲ್ಲಿ ಸುತ್ತಿ ರಸ್ತೆಯ ಪಕ್ಕದಲ್ಲಿ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.

ಗೋವಿನ ತಲೆಯನ್ನು ರಸ್ತೆ ಬದಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ಮಂಗಳೂರು ನಗರ ಪೊಲೀಸ್ ಕಮಿಷನರ್ ಭೇಟಿ ಮನವಿ ಸಲ್ಲಿಸಿದೆ.

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿ ನಗರದಲ್ಲಿ ದುಷ್ಕರ್ಮಿಗಳು ಗೋವಿನ ರುಂಡವನ್ನು ಗೋಣಿ ಚೀಲದಲ್ಲಿ ಕಟ್ಟಿ ರಸ್ತೆ ಬದಿಯಲ್ಲಿ ಬಿಸಾಡಿತ್ತು. ಇದರಿಂದಾಗಿ ಸಮಾಜದಲ್ಲಿ ಶಾಂತಿ ಕೆಡಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಪರಿಸರದಲ್ಲಿ ನಿರಂತರ ಗೋಕಳ್ಳತನ ನಡೆಯುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

  • ಪೊಲಿಟಿಕಲ್ ಬ್ಯೂರೋ ಟ್ರೂ ನ್ಯೂಸ್‌ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.