ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಸಿಡಿ ಪ್ರಕರಣ: ಎಸ್. ಐ. ಟಿ ವಿಶೇಷ ತನಿಖಾ ತಂಡದ ವರದಿ ಹೈಕೋರ್ಟ್ ಪೀಠಕ್ಕೆ..!

ಬೆಂಗಳೂರು: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ರಮೇಶ್​ ಜಾರಕಿಹೊಳಿ. ಸರ್ಕಾರದಲ್ಲಿ ಪ್ರಭಾವಿ ಖಾತೆ ಪಡೆಯುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಶಕ್ತಿ ಹೆಚ್ಚಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ ಈಗ ಮಾಜಿ ಸಚಿವರು. 

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್. ಐ. ಟಿ ತನಿಖೆ ಅಂತಿಮ ವರದಿಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಮೋದನೆ ನೀಡಿದ್ದಾರೆ.

ಮಾಜಿ ಸಚಿವ ರಮೇಶ್​​ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೌಮೇಂದು ಮುಖರ್ಜಿ ವರದಿ ಅನುಮೋದಿಸಿಲ್ಲ ಅನ್ನೋ ವಾದವಿತ್ತು, ಆದರೆ ಇದೀಗ ಮುಖರ್ಜಿ ಅಂತಿಮ ವರದಿಗೆ ಅನುಮೋದನೆ ನೀಡಿದ್ದಾರೆ. ನವೆಂಬರ್​​​​​ 26ರಂದು ಮುಚ್ಚಿದ ಲಕೋಟೆಯಲ್ಲಿ 6 ಪುಟಗಳ ವರದಿ ಸಲ್ಲಿಕೆ ಮಾಡಲಾಗಿತ್ತು, ಹೈಕೋರ್ಟ್ ಪೀಠಕ್ಕೆ ಎಸ್. ಐ. ಟಿ  ಪರ ವಕೀಲ ಪ್ರಸನ್ನಕುಮಾರ್ ಮಾಹಿತಿ ನೀಡಿದ್ದರು, ಎಸ್. ಐ. ಟಿ  ಸಿಂಧುತ್ವವನ್ನ ಸಂತ್ರಸ್ತೆ ಮತ್ತು ವಕೀಲೆ ಗೀತಾ ಮಿಶ್ರಾ ಪ್ರಶ್ನಿಸಿದ್ದರು.  ಈ ಹಿಂದೆ ತನಿಖಾ ವರದಿ ಸಲ್ಲಿಕೆಗೆ ಹೈಕೋರ್ಟ್​ ನಿರ್ಬಂಧ ಹೇರಿತ್ತು.

  •  ಕ್ರೈ೦ ಬ್ಯೂರೋ, ಟ್ರೂನ್ಯೂಸ್ ಕನ್ನಡ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.