ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ಕಂಟಕ ಎದುರಾಗುವುದೇ..!?

ಬೆಂಗಳೂರು: ದೆಹಲಿಗೆ ಕೂಡಲೇ ಆಗಮಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಹೈಕಮಾಂಡ್‌ ಸೂಚಿಸಿದೆ. ಇದರಿಂದ ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ಕಂಟಕ ಶುರುವಾಗಿದೆಯೇ ಎಂಬ ಅನುಮಾನ ಉಂಟಾಗಿದೆ.
ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಒಂದಲ್ಲ ಒಂದು ಎಡವಟ್ಟು ಮಾಡುತ್ತಿರುವ ಆರಗ ಜ್ಞಾನೇಂದ್ರ ಬಗ್ಗೆ ವಿಪಕ್ಷಗಳು ಮಾತ್ರವಲ್ಲ ಸ್ವಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಸೂಕ್ಷ್ಮ ವಿಷಯಗಳ ನಿರ್ವಹಣೆಯಲ್ಲಿ ಒಂದು ಕಡೆ ಎಡವಟ್ಟು ಮಾಡುತ್ತಿದ್ದರೆ ಮತ್ತೊಂದೆಡೆ ಎಡವಟ್ಟು ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ.
ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿದ್ದ ಸಿಎಂ ಬೊಮ್ಮಾಯಿ ಚರ್ಚೆ ನಡೆಸಿದ ಬೆನ್ನಲ್ಲೇ ಈ ಆರಗ ಜ್ಞಾನೇಂದ್ರ ಅವರಿಗೆ ಬುಲಾವ್‌ ಮಾಡಿರುವುದು ಕುತೂಹಲ ಮೂಡಿಸಿದ್ದು, ಆರಗ ಜ್ಞಾನೇಂದ್ರ ಸಚಿವ ಸ್ಥಾನಕ್ಕೆ ಕಂಟಕ ಎದುರಾಗುವುದೇ ಎಂಬ ಅನುಮಾನ ಮೂಡಿದೆ.

  • ಪೊಲಿಟಿಕಲ್ ಬ್ಯೂರೋ true news ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.