New traffic rule: ಹೊಸ ಸಂಚಾರ ನಿಯಮಗಳು; ವಾಹನ ಸವಾರರಿಗೆ ಬಿಗ್ ಶಾಕ್
ನಿಯಮ ಉಲ್ಲಂಘನೆ ದಂಡ / ಶಿಕ್ಷೆ
- ಮದ್ಯಪಾನ ಮಾಡಿ ವಾಹನ ಚಾಲನೆ:ಮೊದಲ ಬಾರಿ: ₹10,000 ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ.ದ್ವಿತೀಯ ಬಾರಿ: ₹15,000 ದಂಡ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆ.
- ಸಿಗ್ನಲ್ ಉಲ್ಲಂಘನೆ ₹5,000 ದಂಡ (ಹಿಂದೆ ₹500).
- ಅತಿವೇಗ ಚಾಲನೆ ₹5,000 ದಂಡ.
- ವಾಣಿಜ್ಯ ವಾಹನಗಳಲ್ಲಿ ಹೆಚ್ಚುವರಿ ಸಾಮಾನು ಸಾಗಾಟ ₹20,000 ದಂಡ.
- ಚಾಲನಾ ಪರವಾನಗಿ ಇಲ್ಲದಿರುವುದು ₹5,000 ದಂಡ. ಡಿಜಿಲಾಕರ್ ಅಥವಾ ಎಂಪರಿವಾಹನ್ ಆಪ್‌ನಲ್ಲಿ DL ತೋರಿಸಿದರೆ ಸಾಕು.
- ಮಾಲಿನ್ಯ ಪ್ರಮಾಣಪತ್ರ (PUC) ಇಲ್ಲದಿರುವುದು ₹10,000 ದಂಡ ಮತ್ತು 6 ತಿಂಗಳ ಜೈಲು ಶಿಕ್ಷೆ, ಜೊತೆಗೆ ಸಮುದಾಯ ಸೇವೆ.
- ಸೀಟ್ ಬೆಲ್ಟ್ ಧರಿಸದಿರುವುದು ₹1,000 ದಂಡ (ಚಾಲಕ ಮತ್ತು ಎಲ್ಲ ಪ್ರಯಾಣಿಕರಿಗೆ ಕಡ್ಡಾಯ).
- ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣ ₹1,000 ದಂಡ.
- ಹೆಲ್ಮೆಟ್ ಧರಿಸದಿರುವುದು ₹1,000 ದಂಡ (ಹಿಂದೆ ₹100) ಮತ್ತು 3 ತಿಂಗಳವರೆಗೆ ಚಾಲನಾ ಪರವಾನಗಿ ಅಮಾನತು.
- ಅಪ್ರಾಪ್ತ ವಯಸ್ಕರಿಂದ ವಾಹನ ಚಾಲನೆ ₹25,000 ದಂಡ, 3 ವರ್ಷ ಜೈಲು ಶಿಕ್ಷೆ (ಪೋಷಕರಿಗೆ), ವಾಹನ ನೋಂದಣಿ 1 ವರ್ಷ ರದ್ದು, ಮತ್ತು ಅಪ್ರಾಪ್ತನಿಗೆ 25 ವರ್ಷದವರೆಗೆ DL ನಿಷೇಧ.
- ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಬಳಕೆ ₹5,000 ದಂಡ.
ಸಾರ್ವಜನಿಕರಿಗೆ ಸಲಹೆ: ಹೊಸ ನಿಯಮಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಜಾರಿಗೊಳಿಸಲಾಗಿದ್ದು, ಜನರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಕಠಿಣ ದಂಡ ಮತ್ತು ಶಿಕ್ಷೆಗಳು ದೊಡ್ಡ ಆರ್ಥಿಕ ಹೊರೆಯಾಗಬಹುದು. ಆದ್ದರಿಂದ, ಎಲ್ಲರೂ ಸಂಚಾರ ನಿಯಮಗಳನ್ನು ಗಂಭೀರವಾಗಿ ತೆಗೆದುಕೊಂಡು ಅಪಘಾತಗಳನ್ನು ತಡೆಯಲು ಸಹಕರಿಸಬೇಕು.
ಕಾಮೆಂಟ್ ಬಿಡಿ