ಫೆಬ್ರವರಿ 19 ರಿಂದ 28: ಉಡುಪಿಯಲ್ಲಿ ಕೈಮಗ್ಗ ಮತ್ತು ಕರಕುಶಲ ಮೇಳ
ಉಡುಪಿ: ದೇಶದ ಬೇರೆ ಬೇರೆ ರಾಜ್ಯ ಮತ್ತು ಪ್ರದೇಶಗಳ ಪರಂಪರಾಗತ ಕೈಮಗ್ಗ ಮತ್ತು ಕರಕುಶಲತೆಯ ಸೀರೆ ಮತ್ತು ಉಡುಪುಗಳನ್ನು ಪರಿಚಯಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ಫೆಬ್ರವರಿ 19 ರಿಂದ 28 ರವರೆಗೆ ಉಡುಪಿಯ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾ ದ ಸಮೀಪ ಇರುವ ಹೋಟೆಲ್ ಮಥುರ ಗೋಕುಲ್ ನಲ್ಲಿ ಉಡುಪಿ ಸಂಸ್ಕೃತಿ ಕೈಮಗ್ಗ ಹಾಗೂ ಕರಕುಶಲ ಮೇಳ ಜರುಗಲಿದೆ. ಮೇಳವು ಫೆಬ್ರವರಿ 19ರಂದು ಉಡುಪಿಯ ಜನಪ್ರಿಯ ಮಹಿಳಾ ಮುಂದಾಳುಗಳಿಂದ ಉದ್ಘಾಟನೆಗೊಳ್ಳಲಿದೆ.
ಉಡುಪಿ, ಇಳಕಲ್, ಕೋಲ್ಕತ್ತಾ, ವೆಂಕಟಗಿರಿ, ಮಂಗಳಗಿರಿ, ಮೊಳಕಾಲ್ಮೂರು, ಮಧುಬನಿ, ಬಿಹಾರ ದ ಕಸೂತಿ, ಕೈ ನೇಯ್ಗೆ, ಸುಜನಿ, ಬನಾರಸ್, ಕಾಂಚಿ ಸಿಲ್ಕ್, ಝಾರ್ಕಂಡ್ ನ ತಸರ್ ಸಿಲ್ಕ್, ಕಾಟನ್ ಸಿಲ್ಕ್, ಕೋಲಾರ ಸಿಲ್ಕ್, ಧಾರವಾಡ ಕಸೂತಿ, ಪೋಚಂಪಲ್ಲಿ, ಮಲಬಾರಿ ಸಿಲ್ಕ್, ಕ್ರೇಪ್ ಸಿಲ್ಕ್, ಕಾಶ್ಮೀರ, ಲಡಾಕ್, ಹುಬ್ಬಳ್ಳಿ ಕಾಟನ್, ಕೊಳ್ಳೇಗಾಲ ಸಿಲ್ಕ್, ಪಶ್ಮಿನ, ಕಲಂಕಾರಿ, ಮಧುಬನಿ, ಮಟ್ಕಾ ಸಿಲ್ಕ್, ತಸರ್ ಸಿಲ್ಕ್, ಎರಿ ಸಿಲ್ಕ್, ಮೈಸೂರ್, ತುಮ್ಮಿನಕಟ್ಟಿ, ಗುತ್ತೂರ್, ಸಾಗರ ಮುಂತಾದ ನೇಕಾರ ಮತ್ತು ಕರಕುಶಲಕರ್ಮಿಗಳಿಂದ ಸಿದ್ದಪಡಿಸಲಾದ ಸೀರೆ, ಶಾಲ್, ಕುರ್ತಾ, ಕುರ್ತೀ, ಟವೆಲ್, ಬೆಡ್ ಶೀಟ್, ಲುಂಗಿ, ಶರ್ಟ್, ವೈಸ್ಟ್ ಕೋಟ್, ಲಿನೇನ್ ಉಡುಪುಗಳು ಲಭ್ಯ ಇರಲಿವೆ.
ಕಾಮೆಂಟ್ ಬಿಡಿ