ಅಪಘಾತದ ಸ್ಥಳಕ್ಕೆ ರಕ್ಷಣೆಗೆ ಧಾವಿಸಿ ಸ್ವೀಕರ್ ಯು. ಟಿ. ಖಾದರ್
ಮಂಗಳೂರು : ನಗರದ ಅಡ್ಯಾರ್ ಬಳಿ ಬುಧವಾರ ಮಧ್ಯಾಹ್ನ ಅಪಘಾತಕ್ಕೀಡಾಕಿದ್ದ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನದೊಳಗೆ ಸಿಲುಕಿದ್ದ ಡ್ರೈವರ್ ಕಾಲನ್ನು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಅವರು ಜನರೊಂದಿಗೆ ಸೇರಿ ಸುರಕ್ಷಿತವಾಗಿ ಹೊರ ತೆಗೆದರು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರಿನಲ್ಲಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನವು ಡಿವೈಡರ್ ಹಾರಿ ಅತ್ತ ಕಡೆ ಸಂಚರಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಆ ಸಂದರ್ಭದಲ್ಲಿ ಸ್ಪೀಕರ್ ಯು. ಟಿ. ಖಾದರ್ ವಾಹನ ನಿಲ್ಲಿಸಿ ವಾಹನದೊಳಗೆ ಸಿಲುಕಿದ್ದ ಚಾಲಕನ ರಕ್ಷಣೆಗೆ ಧಾವಿಸಿದರು. ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಕಾಲು ಅದರಡಿ ಸಿಲುಕಿಕೊಂಡಿತ್ತು. ನಜ್ಜುಗುಜ್ಜಾಗಿದ್ದ ವಾಹನದ ಮುಂಭಾಗವನ್ನು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಸಹಾಯದಿಂದ ಎಳೆದಿದ್ದಾರೆ. ಈ ವೇಳೆ ವಾಹನದೊಳಗೆ ಸಿಲುಕಿದ್ದ ಕಾಲು ಸುರಕ್ಷಿತವಾಗಿ ಹೊರಗೆ ಬಂದಿದ್ದು, ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಡ್ರೈವರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಮೆಂಟ್ ಬಿಡಿ