ಸುರತ್ಕಲ್ ನಲ್ಲಿ ಪ್ರತಿನಿತ್ಯವೂ ಅಪಘಾತ ನೋಡಿದ ಜನರು ಏನ್ ಮಾಡಿದ್ರು ಗೊತ್ತಾ
ಮುಲ್ಕಿ: ಸುರತ್ಕಲ್ಲಿನಲ್ಲಿ ಹಲವು ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕದರಸ್ತೆಯಲ್ಲಿ ಹಲವು ಅಪಘಾತಗಳು ನಡೆಯುದನ್ನು ನೋಡಿದ ಜನರು ಏನ್ ಮಾಡಿದ್ರು ಗೊತ್ತಾ..?

ಪ್ರತಿನಿತ್ಯವೂ ಅಪಘಾತಗಳು ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಅಷ್ಟೇ ಅಲ್ಲ ಪಕ್ಕದ ರಸ್ತೆಯಲ್ಲಿ ಆಸ್ಪತ್ರೆಗೆ ಹೋಗುವಾಗ ರೋಗಿಗಳು ಮತ್ತೆ ಅಪಘಾತದಲ್ಲಿ ಆದೆ ಆಸ್ಪತ್ರೆ ಸೇರುವಂತಾಗುತ್ತಿತ್ತು.

ಇದನ್ನು ಗಮನಿಸಿದ ಸ್ಥಳೀಯರು ಯತೀಶ್, ಶ್ರೀಧರ್, ಶ್ರೀಕಾಂತ್ ಹಾಗೂ ಜಯರಾಮ್ ಸೇರಿ ಸ್ಪೀಡ್ ಬ್ರೇಕರ್ ನ್ನು ತಾವೇ ನಿರ್ಮಿಸಿ ಅದಕ್ಕೆ ಬಣ್ಣ ಬಳಿದರು. ಅಪಘಾತ ನಡೆಯದಂತೆ ಸಾರ್ವಜನಿಕರಿಗೆ ಹಾಗೂ ವಾಹನಾಕಾರರ ಜೀವ ಉಳಿಸುವ ಕೆಲಸವನ್ನು ಮಾಡಿದ್ದಾರೆ.
ಕಾಮೆಂಟ್ ಬಿಡಿ