ಯುವ ವೇದಿಕೆಯ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರಕ್ಕೆ ಹೆಚ್ಚಿದ ಜನಸ್ಪಂದನೆ
ಮೂಲ್ಕಿ: ದ. ಕ ಜಿಲ್ಲಾ ಪದ್ಮಶಾಲಿ ಮಹಾಸಭಾದ ಯುವ ವೇದಿಕೆಯ ನೇತೃತ್ವದಲ್ಲಿ ಹಾಗೂ ಹದಿನಾರು ದೇವಸ್ಥಾನ ಮತ್ತು ವಲಯ ವೇದಿಕೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ನಿರೀಕ್ಷೆಗೂ ಮೀರಿದ ಯಶಸ್ವಿಗೆ ಕಾರಣವಾಯಿತು.
.

ಅಷ್ಟಕ್ಕೂ ಈ ರಕ್ತದಾನ ಶಿಬಿರ ಅವಳಿ ಜಿಲ್ಲೆಗಳ ಕೇಂದ್ರ ಬಿಂದು ಮೂಲ್ಕಿಯ ಬಪ್ಪನಾಡು ಬಳಿಯ ದೇವಾಡಿಗ ಸಂಘದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಈ ಸಭಾ ಕಾರ್ಯಕ್ರಮದಲ್ಲಿ ದ. ಕ ಜಿಲ್ಲಾ ಪದ್ಮಶಾಲಿ ಮಹಾಸಭದ ಅಧ್ಯಕ್ಷರು ರವಿ ಶೆಟ್ಟಿಗಾರ್ ಕಾರ್ಕಳ, ಉಪಾಧ್ಯಕ್ಷರು ರತ್ನಾಕರ್ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ವೆಂಕಟರಾಯ ಶೆಟ್ಟಿಗಾರ್ ಬ್ರಹ್ಮಾವರ, ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಲಕ್ಷ್ಮಣ್ ಶೆಟ್ಟಿಗಾರ್ ಕೊಡಿಯಾಲಬೈಲ್, ಕಾರ್ಯದರ್ಶಿ ಉಮೇಶ್ ಶೆಟ್ಟಿಗಾರ್ ಕಾಪು, ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನ ಮಾನoಪಾಡಿ ಮೂಲ್ಕಿ ಇದರ ಮುಕ್ತೇಸರರು ಪುರಂದರ ಡಿ ಶೆಟ್ಟಿಗಾರ್, ಕಡಂದಲೆ ಮಗಣೆ ಗುರಿಕಾರರು ರುಕ್ಮಯ ಶೆಟ್ಟಿಗಾರ್, ದೇವಾಡಿಗ ಸಂಘದ ಅಧ್ಯಕ್ಷರು ಸಂಜೀವ ದೇವಾಡಿಗ, ಕೆಎಂಸಿ ಆಸ್ಪತ್ರೆಯ ಪ್ರಜ್ವಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಗಣ್ಯರನ್ನು ಹರೀಶ್ ಮೂಲ್ಕಿ ಯವರು ಸ್ವಾಗತಿಸಿದರು. ಪ್ರಾರ್ಥನೆಯನ್ನು ನಾಗರಾಜ್ ಶೆಟ್ಟಿಗಾರ್ ಕಿನ್ನಿಮುಲ್ಕಿ ಹಾಗೂ ಧನ್ಯವಾದವನ್ನು ದೀಪಕ್ ಶೆಟ್ಟಿಗಾರ್ ಕಿನ್ನಿಮುಲ್ಕಿ ಇವರು ನಡೆಸಿ ಕೊಟ್ಟರು.
ರಕ್ತದಾನ ಶಿಬಿರ : ನಿರೀಕ್ಷೆಗೂ ಮೀರಿದ ಸ್ಪಂದನೆ. ರಕ್ತದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ.ಈ ಕಾರ್ಯಕ್ರಮದ ಆಯೋಜನೆಯ ಮೊದಲ ದಿನ 50 ಮಂದಿ ರಕ್ತದಾನ ನಡೆಸುವ ತಯಾರಿಯನ್ನು ಮಾಡಲಾಯಿತು. ನಂತರ ಟ್ರೂ ನ್ಯೂಸ್ ನ ಮೂಲಕ ಮಾಡಿದ ಪ್ರಚಾರದ ಬಳಿಕ 75 ಕ್ಕೂ ಅಧಿಕ ಸಂಖ್ಯೆಯಲ್ಲಿ ನೋಂದಾವಣೆ ನಡೆಯಿತು. ತದನಂತರ ದ ದಿನಗಳಲ್ಲಿ ರಕ್ತದಾನಿಗಳ ಸಂಖ್ಯೆ ನೂರಕ್ಕೂ ಹೆಚ್ಚಾಯಿತು.

ಇನ್ನೇನು ಕಾರ್ಯಕ್ರಮಕ್ಕೆ ಒಂದು ದಿನ ಇರುವಾಗಲೇ ನಾವು ರಕ್ತದಾನದಲ್ಲಿ ಭಾಗಿಯಾಗುತ್ತೇವೆ ಎಂದು ಹಲವು ಸಂಘ ಸಂಸ್ಥೆಗಳು ಕರೆ ಮಾಡಿ ತಿಳಿಸಿದರು. ಇದು ನೂರರ ಗಡಿ ದಾಟಲು ದೊಡ್ಡ ಕಾರಣ ವಯಿತು. ಸಂಘಟಕರು ಎಣಿಸಿದ್ದಕ್ಕಿಂತ ಜನರ ಸ್ಪಂದನೆ ಇದ್ದ ಕಾರಣ ದೊಡ್ಡ ಮಟ್ಟಿನ ಯಶಸ್ವಿಗೆ ಕಾರಣವಾಯಿತು. ಒಟ್ಟಿನಲ್ಲಿ ಪದ್ಮಶಾಲಿ ಯುವ ವೇದಿಕೆಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಸಮಾಜದಲ್ಲಿ ಜೀವನ್ಮರಣ ಹೋರಾಟದಲ್ಲಿ ಇರುವ ಜನರ ಜೀವ ಉಳಿಸುವ ಮಹಾನ್ ಕಾರ್ಯವಾಗಿದೆ. ಹಸಿವು ನೀಗಿಸಲು ಅನ್ನದಾನ, ಉಸಿರು ಉಳಿಸಲು ರಕ್ತದಾನ, ದೇಶ ಉಳಿಸಲು ಮತದಾನ. ಈ ಕಾರ್ಯದಲ್ಲಿ ಅಸಡ್ಡೆಯನ್ನು ಬಿಟ್ಟು ಸೇವೆಯಲ್ಲಿ ತೊಡಗೋಣ..
ಕಾಮೆಂಟ್ ಬಿಡಿ