ಮದುವೆಗೆ ಹೋಗಿದ್ದವರು ಮಸಣಕ್ಕೆ
ಬೆಂಗಳೂರು: ಬಿಎಂಟಿಸಿ ಬಸ್ ಹರಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟ ಘಟನೆ ನಗರದ ಮೈಸೂರು ರಸ್ತೆಯ ನಾಯಂಡಹಳ್ಳಿ ಸಮೀಪ ನಡೆದಿದೆ. ಕಾರಿನ ಡೋರ್ ಟಚ್ ಆಗಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಾಮಕ್ಷಿಪಾಳ್ಯದ ನಿವಾಸಿ ಸರೋಜಿ (42) ಮೃತ ಮಹಿಳೆ. ಜ್ಞಾನಭಾರತಿಯಲ್ಲಿ ಮದುವೆ ಮುಗಿಸಿಕೊಂಡು ಬರುತ್ತಿದ್ದಾಗ ಘಟನೆ ನಡೆದಿದೆ. ಸರೋಜಿ ಅವರು ಸಹೋದರನ ಜೊತೆ ಹೋಂಡಾ ಆ್ಯಕ್ಟಿವಾದಲ್ಲಿ ತೆರಳುತ್ತಿದ್ದರು. ರಸ್ತೆಯಲ್ಲಿ ನಿಂತಿದ್ದ ಕಾರಿನ ಡೋರ್ ಅನ್ನು ಸಡನ್ ಆಗಿ ಓಪನ್ ಮಾಡಲಾಗಿದೆ. ಈ ವೇಳೆ ಡೋರ್ಗೆ ಟಚ್ ಆಗಿ ಇಬ್ಬರು ಸವಾರರು ಕೆಳಗೆ ಬಿದ್ದಿದ್ದಾರೆ.
ಕಾಮೆಂಟ್ ಬಿಡಿ