ಜಿಲ್ಲಾ ಸುದ್ದಿಗಳು

ಮುಲ್ಕಿ:ಮರ ರಸ್ತೆಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತ; ಜನ ಸಾಮಾನ್ಯರ ಸಮಸ್ಯೆಗೆ ಡೋಂಟ್ ಕೇರ್

ಮುಲ್ಕಿ: ಮುಲ್ಕಿ ಮೂಡಬಿದಿರೆಯ ರಾಜ್ಯ ಹೆದ್ದಾರಿಯ ಕುಬೆವೂರು ಬಳಿ ಮರ ರಸ್ತೆಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.   

ಹೌದು.. ಮಂಗಳವಾರ ಸಂಜೆ 3:45ರ ಸುಮಾರಿಗೆ ಮಕ್ಕಳಿಗೆ ಶಾಲೆ ಬಿಡುವಂತಹ ಹೊತ್ತಿಗೆ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದುಬಿಟ್ಟಿತು. ಸುಮಾರು ಒಂದು ಘಂಟೆಗಳ ಹೊತ್ತು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿತ್ತು.  

 ಅ ಸಮಯದಲ್ಲಿ ಅದೇ ಮಾರ್ಗವಾಗಿ ಸಂಚರಿಸುತ್ತಿದಂತಹ ಹರೀಶ್ ಮುಲ್ಕಿ , ರಫೀಕ್ ದರ್ಗರೋಡ್, ರಂಜನ್ ಬಿ.ಶೆಟ್ಟಿ ಸೇರಿ ತಕ್ಷಣವೇ ಹತ್ತಿರದ ಮನೆಯ ಕತ್ತಿಯನ್ನು ತಂದು ಮರದ ರೆಂಬೆಗಳನ್ನು ತೆರವು ಮಾಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. 

ಮುಲ್ಕಿ ರಸ್ತೆಯನ್ನು ಬಳಸಿಕೊಂಡು ಬಜಪೆ ವಿಮಾನ ನಿಲ್ದಾಣಕ್ಕೆ ತಲುಪಬೇಕಾಗಿದ ಕೇರಳ ಶಾಸಕರೊಬ್ಬರು ಹಲವು ಹೊತ್ತು ಕಾಯುವಂತೆ ಮಾಡಿತು. ವಿಪರ್ಯಾಸವೆಂದರೆ ಶಾಸಕರ ಬೆಂಗಾವಲು ವಾಹನದಲ್ಲಿ ಇದ್ದ ಪೋಲಿಸ್ ಅಧಿಕಾರಿ ಬಂದು ಹೇಳಿದ ರೀತಿ ಹೇಗೆ ಇತ್ತು ಎಂದರೆ ಬೇಗ ತೆರವು ಮಾಡಿ ಎನ್ನುವ ಶಬ್ದ ಅಲ್ಲಿ ತೆರವು ಮಾಡುವವರಿಗೆ ಕೋಪ ಬರಿಸುವಂತೆ ಮಾಡಿತು.   

ದುರಂತ ಎಂದರೆ ಹತ್ತಿರದಲ್ಲೇ ಇರುವ ಕಿಲ್ಪಾಡಿ ಪಂಚಾಯತ್, ಮುಲ್ಕಿ ನಗರ ಪಂಚಾಯತ್ ಗೆ ಸ್ಥಳೀಯರು ಮಾಹಿತಿ ನೀಡಿದರು.  ಒಂದು ಗಂಟೆಗಳ ನಂತರ ಸ್ಥಳಕ್ಕೆ ಬಂದರು. ಅಂದರೆ ನೀವೂ ಯೋಚಿಸಿ ಯಾವ ರೀತಿಯ ಸ್ಪಂದನೆ ಇದೆ ಎಂದು. ಜನ ಸಾಮಾನ್ಯರಿಗೆ ಸಮಸ್ಯೆ ಇರಲಿ. ಅದ್ರೆ ಆಯಿತು ಹೋದ್ರೆ ಹೋಯಿತು ಎನ್ನುವ ವರ್ತನೆ ಇವರದು. ಅದು ನಮ್ಮ ಕೆಲಸ ಅಲ್ಲ, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಆಲೋಚನೆ ಇವರದು.

ಮುಲ್ಕಿಯಿಂದ ಮೂಡಬಿದಿರೆಯ ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಆಕಾರದ ಮರಗಳು ಇದೆ. ಅದರ ರೆಂಬೆಗಳು ಯಾವಾಗ ಬೀಳುವುದು ಎನ್ನುವ ಹಾಗೆ ಇದೆ. ಸಂಬಂಧಪಟ್ಟ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಾಗೂ  ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಮರಗಳ ರೆಂಬೆಗಳನ್ನು ಕತ್ತರಿಸದೆ ಇದ್ದರಿಂದ ವಾಹನಗಾರರು‌ ಪ್ರಾಣ ಅಪಾಯದಿಂದಲೇ ಸಂಚಾರಿಸುವಂತೆ ಆಗಿದೆ.‌ ಆದಷ್ಟು ಬೇಗ ಅಪಾಯಕಾರಿ ಬೃಹತ್‌ ಮರಗಳ ಕೊಂಬೆಗಳನ್ನು ತೆಗೆಯುವ ವ್ಯವಸ್ಥೆ ಮಾಡಬೇಕಾಗಿದೆ. ಇಲ್ಲವೇ ಇನ್ನೊಂದು ದಿನ ದೊಡ್ಡ ದುರಂತಕ್ಕೆ ಹೊಣೆ ಹೊರಬೇಕಾಗ ಬಹುದು. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಸರಿಯಾದ ಕ್ರಮವನ್ನು ತೆಗೆದುಕೊಳ್ಳುವುದು ಅಗತ್ಯ.

ಕಾಮೆಂಟ್ ಬಿಡಿ

Join Us