ತುಳುವರೇ ನಿಮ್ಮ ಬೆಂಬಲ ಬೇಕಿದೆ ಈ ಅಭಿಯಾನಕ್ಕೆ..!

ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗಗಳ ಮಣ್ಣಿನ ಭಾಷೆಯಾದ ತುಳು ಭಾಷೆಯೂ ಒಂದಾಗಿದ್ದು, ತುಳು ಭಾಷೆಯನ್ನಾಡುವ ಜನರು ಜಗತ್ತಿನಾದ್ಯಂತ ಇದ್ದಾರೆ. ಜೊತೆಗೆ ತುಳು ಭಾಷೆಗೆ ಅತ್ಯಂತ ಶ್ರೇಷ್ಠವಾದ ಸಾಂಸ್ಕೃತಿಕ ಮತ್ತು ಪಾರಂಪರಿಕ ಹಿನ್ನಲೆಯೂ ಇದ್ದು, ಲಿಪಿ ಇರುವ ಭಾಷೆಯಾಗಿದೆ. 


ಹಾಗಿದ್ದರೂ ತುಳು ಭಾಷೆಗೆ ಇನ್ನೂ ಶಾಸ್ತ್ರೀಯ ಸ್ಥಾನಮಾನ ಲಭಿಸದಿರುವುದು ವಿಪರ್ಯಾಸವೇ ಸರಿ. ಜೊತೆಗೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇಲ್ಲಿನ ಸೋ ಕಾಲ್ಡ್ ಜನನಾಯಕರು ನಿರಂತರವಾಗಿ ಪ್ರಯತ್ನಿಸದಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಾಮಾಜಿಕ ವಲಯದಿಂದ ಟೀಕೆಗಳು ವ್ಯಕ್ತವಾಗುತ್ತಿದ್ದು, ಇತ್ತೀಚಿಗೆ ಕೆಂದ್ರ ಸರ್ಕಾರ ನೂತನ ಶಿಕ್ಷನ ನೀತಿಯನ್ನು ಘೋಷಿಸಿದ್ದರ ಪರಿಣಾಮ ಇದೀಗ, ತುಳು ಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಕುರಿತಾಗಿ ಅಭಿಯಾನವು ಸಾ.ಜಾ.ಗಳಲ್ಲಿ ಗರಿಗೆದರುತ್ತಿದೆ.

tulunad flag

ಪ್ರೀ-ನರ್ಸರಿಯಿಂದ 5ನೇ ತರಗತಿವರೆಗೂ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲೇ ಶಿಕ್ಷಣವನ್ನು ಅಭ್ಯಸಿಸುವ ಅವಕಾಶವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದ್ದು, ವಿದ್ಯಾರ್ಥಿಗಳು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲೇ ಕಲಿಯಲು ಅವಕಾಶ ಕಲ್ಪಿಸಿದೆ. ಹಾಗು ದೇಶಾದ್ಯಂತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡು ಸಂಸ್ಕೃತವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಕನ್ನಡ ಸಹಿತ ದೇಶದಲ್ಲಿರುವ “ಶಾಸ್ತ್ರೀಯ ಭಾಷೆ ಸ್ಥಾನಮಾನ” ಹೊಂದಿರುವ ಭಾಷೆಗಳನ್ನು ಕೂಡ ಮಕ್ಕಳಿಗೆ ಐಚ್ಛಿಕವಾಗಿ ನೀಡಲಾಗುತ್ತದೆ ಎಂದು ನೂತನ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. 

tweet


ಆದ ಕಾರಣ, ತುಳು ಭಾಷೆಯಲ್ಲಿ ಶಿಕ್ಷಣ ನೀಡಬೇಕಾದರೆ, ತುಳುವಿಗೆ ಶಾಸ್ತ್ರೀಯ ಸ್ಥಾನಮಾನ ಅತ್ಯಗತ್ಯ. ಹಾಗಾಗಿ ತುಳು ಭಾಷೆಯನ್ನು  ಕರ್ನಾಟಕ ಮತ್ತು ಕೇರಳದ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಯಾಗಿ ಅಳವಡಿಸಬೇಕು ಎಂಬ ಉದ್ದೇಶದಿಂದ ಆಗಸ್ಟ್ 16ರ ಬೆಳಗ್ಗೆ 6 ಗಂಟೆಯಿAದ ರಾತ್ರೆ 12 ಗಂಟೆ ತನಕ #EducationInTulu ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಟ್ವೀಟ್ ತುಳುನಾಡ್ ಅಭಿಯಾನ ನಡೆಯಲಿದೆ ಎಂಬ ಸಂದೇಶವು ತುಳುನಾಡಿನಾದ್ಯಂತ ಅರ್ಥಾತ್ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೀಗ ತುಳು ಭಾಷೆಯಲ್ಲೇ ಹರಿದಾಡುತ್ತಿದೆ. ಇದಕ್ಕಾಗಿ ವಾಟ್ಸಪ್‌ನಲ್ಲಿ ಹಾಗು ಫೇಸ್‌ಬುಕ್‌ನಲ್ಲಿ ಅಯಾ ಪ್ರದೇಶಗಳಿಗನುಗುಣವಾಗಿ ಗ್ರೂಪ್‌ಗಳನನು ತಯಾರಿಸಿರುವ ಆಯೋಜಕರು ಟ್ವೀಟ್ ಅಭಿಯಾನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಅಭಿಯಾನಕ್ಕೆ ಭಾರಿ ಬೆಂಬಲವನ್ನು ತುಳುವರು ನೀಡುತ್ತಿದ್ದು ಗ್ರೂಪ್‌ಗೆ ಸೇರುವವರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. 

education in tulu


ಅಪ್ಪೆ ಬಡಪತ್ತ್ಡ್ ಇತ್ತುಂಡಲ ಜೋಕುಲೆನ್ ಸಾದಿಡ್ ಬುಡುದ್ ಪೋಪುಜಲ್...ಜೋಕುಲಾದ್ ಅಪ್ಪೆನ್ ಸಾದಿಡ್ ಪಾಡುದ್ ನನೊರಿಯನ ಅಪ್ಪೆನ್ ತರೆಟ್ ತುಂಬುನ ಏತ್ ಸರಿ...ಅಪ್ಪೆಗ್ ಮಾನದಿಗೆ ಇಜ್ಜಿ ನಿಜ..ಅಪ್ಪೆಡಾ ಸಂಪೊತ್ತ್ ಇಜ್ಜಿ ನಿಜಾ..ಆಂಡ ಅಪ್ಪೆಗ್ ಉಂದೆನ್ ಪೂರಾ ಒದಗದ್ ಕೊರ್ಪಿನ ಜಬದರಿಗೆ ಆಲೆನ ಜೋಕುಲೆನಾ...ನಮ ಅಪ್ಪೆಗ್ ತಿಕ್ಕೋಡಾಯಿನ ಮಾನದಿಗೆ ತಿಕ್ಕುಲೆಕ ಮಲ್ಪುಗ..ಅಪ್ಪೆ ಭಾಷೆನ್ ಶಾಲೆಡ್ ಕಲ್ಪವುನ ಭಾಷೆ ಮಲ್ಪರೆಗಾದ್ ನಮ್ಮ ಕಡೆತಾ ಬುಲಿಪು ದೀಕಾ... ಅರ್ಥಾತ್ ತಾಯಿಯು ಎಷ್ಟೇ ಕಷ್ಟದಲ್ಲಿದ್ದರೂ ತನ್ನ ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ಹೋಗಲಾರಳು.

tulu language


ಆದರೆ ಆ ತಾಯಿಯ ಮಕ್ಕಳಾದ ನಾವು…ತಾಯಿಯನ್ನು ಬೀದಿಯಲ್ಲಿ ಬಿಟ್ಟು ಬೇರೊಬ್ಬನ ತಾಯಿಯನ್ನು ಸತ್ಕರಿಸುವುದು ಸಮಂಜಸವೇ..!? ತಾಯಿಗೆ ಸ್ಥಾನಮಾನ ಇಲ್ಲ ನಿಜ, ಗೌರವವೂ ಇಲ್ಲ ನಿಜ ಆದರೆ..ಅವಳಿಗೆ ಅದನ್ನು ನೀಡಬೇಕಾಗಿರುವ ಕರ್ತವ್ಯ ಹಾಗು ಜವಬ್ದಾರಿ ನಮ್ಮ ಮೇಲಿದೆ. ನಮ್ಮ ತಾಯಿಗೆ ಸಿಗಬೇಕಾದ ಸ್ಥಾನಮಾನವನ್ನು ಸಿಗುವ ಹಾಗೆ ಮಾಡೋಣ. ಎಂದು ಮಾತೃ ಭಾಷೆಯ ಉಳಿವಿಗಾಗಿ ನಾವೇ ಹೋರಾಡೋಣ ಎಂದು ಅಭಿಯಾನದ ಆಯೋಜಕರು ಕರೆ ನೀಡಿದ್ದು...ಇದಕ್ಕೆ ಸಮಸ್ತ ತುಳುನಾಡ ಜನರ ಬೆಂಬಲವನ್ನು ಅವರು ಕೋರಿದ್ದಾರೆ. ತುಳುವರು ಒಟ್ಟಾದರೆ ಖಂಡಿತಾ ತುಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ನಮ್ಮ ಮಣ್ಣಿನ ಭಾಷೆಯ ಉಳಿವಿಗಾಗಿ ನಮ್ಮ ಕಿರು ಬೆಂಬಲವನ್ನು ಟ್ವಿಟ್ಟರ್ ಅಭಿಯಾನದ ಮೂಲಕ ನೀಡೋಣ.

 

  • ಭಾರವಿ ಕಲ್ಲಡ್ಕ, ನ್ಯೂಸ್ ಬ್ಯೂರೋ ಟ್ರೂನ್ಯೂಸ್ ಕನ್ನಡ 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.