ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಅಕ್ಕಮಹಾದೇವಿ

ಅಕ್ಕ ಕನ್ನಡ ಸಾಹಿತ್ಯದ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿ ಮತ್ತು ಸಮಾನತೆಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಕಾರಣಿಭೊತರಾದವರು ಅಕ್ಕ ಮಹಾದೇವಿ .
ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖ ಶಿವಶರಣೆರಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಮಹಿಳಾ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಸಮಾನತೆಯ ರೊಪವಾಗಿ, ಮಹಿಳೆ ಅಬಲೆ ಅಲ್ಲಾ ಸಬಲೆ , ಎಂದು ಘಂಟಾ ಘೋಷವಾಗಿ ಜಗತ್ತೀಗೆ ಸಾರಿದ ಶ್ರೇಯಸ್ಸು ಅಕ್ಕನಿಗೆ ಸಲ್ಲುತ್ತದೆ.ಹಾಗೂ ಅಕ್ಕನ ಜೀವನದಲ್ಲಿ ಅನೇಕ ಎಳು - ಬಿಳುಗಳನ್ನು ಕಂಡ ಅಕ್ಕ, ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿ, ಎದುರಿಸಿದ ಪರೀಕ್ಷೆಗಳು  ಲೆಕ್ಕವಿಲ್ಲದಷ್ಟು , ಸ್ವಾಭಿಮಾನ ಮತ್ತು ಆತ್ಮಶುದ್ದಿಯ ನೈಜ ವಿಚಾರಗಳನ್ನು ಮನತುಂಬೆಲ್ಲಾ ತುಂಬಿಕೊಂಡು,ಹೋರಾಡಿದ ಧೀರ ಮಹಿಳೆ,
ಸಾಕ್ಷಾತ್ ಮಲ್ಲಿಕಾರ್ಜುನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ಸತ್ಯದ ಮಾರ್ಗದಡಗೆ ಸಾಗಿದ ಅಕ್ಕ, ಜಗತ್ತೀಗೆ  ಮಾದರಿಯಾಗಿದ್ದಾಳೆ .ನಿಜ ಜೀವನದ ಸತ್ಯ ಅರೆತು, ಸಮಾಜ ಕ್ಕೇ ಆದರ್ಶಮಯವಾಗಿ ಬಾಳಿ ವಿಶ್ವಕೆ ಮಾದರಿಯಾಗುವ ಮೂಲಕ ಇಡೀ ಮಾನವ ಸಂಕುಲಕ್ಕೆ ದಾರಿ ದ್ವೀಪ ಅಕ್ಕ ಎಂದರೆ ತಪ್ಪಾಗಲಾರದು.


ಅಕ್ಕನ ಜನನ/ಬಾಲ್ಯ:
ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ/ಉಡುಗಣಿ ಎಂಬ ಊರಿನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನನ,
ತಂದೆ ನಿರ್ಮಲ ಶೆಟ್ಟಿ , ತಾಯಿ ಸುಮತಿ.,ಚಿಕ್ಕವಯಸ್ಸಿನಲ್ಲಿ ಎತಿ ಬುಧ್ಧಿವಂತೆ,ಹಾಗೂ ಸೌಮ್ಯ ನಾಚಿಕೆ ಸ್ವಭಾವದ ಅಕ್ಕ,
ಕ್ರೀಯಾಶೀಲ ಗುಣ, ಹಿರಿಯರಿಗೆ ಗೌರವ ಕೊಡುವುದು, ಕಿರಿಯವರೊಂದಿಗೆ ಪ್ರೀತಿ-ಸ್ನೇಹ ದಿಂದ ವರ್ತನೆ, ಮನೆಯ ಮುದ್ದಿನ ಮಗಳಾಗಿ ಎಲ್ಲರೊಂದಿಗೆ ಅನ್ಯೋನ್ಯತೆ - ಖುಷಿ ಯಿಂದ ತನ್ನ ಬಾಲ್ಯ ಜೀವನವನ್ನು ಕಳೆದಳು ಅಕ್ಕ.

ಅಕ್ಕನ ಮದುವೆ/ತ್ಯಾಗ:
ಹೀಗೆ ದಿನ ಕಳೆದಂತೆ ಅಕ್ಕ ದೊಡ್ಡವಳಾಗುತ್ತಾಳೆ,  ಒಮ್ಮೆ  ಸಾಮಂತ ದೊರೆ ಕಸಪಯ್ಯ ನಾಯಕ ರಾಜ್ಯ  ಬಿದಿಯಲ್ಲಿ ನಡೆದು ಕೊಂಡು ಹೋಗುವಾಗ ಅಕ್ಕ ಅವನ ಕಣ್ಣಿಗೆ ಬೀಳುತ್ತಾಳೆ. ನೋಡಿದ ತಕ್ಷಣವೇ ಅಕ್ಕನನ್ನು ವರಿಸಬೇಕೆಂದು ನಿಶ್ಚಯಿಸಿ, ರಾಜನಪರಿವಾರದವರನ್ನು ನಿರ್ಮಲ ಶೆಟ್ಟಿಯ ಮನೆಗೆ ಕಳುಹಿಸಿ ಮದುವೆಯ ಪ್ರಸ್ತಾಪ ಮುಂದಿಡುತ್ತಾನೆ. ನಾಯಕರ ಮನೆಯಿಂದ ಪ್ರಸ್ತಾಪಕ್ಕೆ  ನಿರ್ಮಲ – ಸುಮತಿಯರ ದಂಪತಿಗಳು ಒಪ್ಪಿ ಮದುವೆ ಮಾಡುತ್ತಾರೆ.
ಹೀಗೆ ಅಕ್ಕನ ಮನಸ್ಸು ಇಲ್ಲದಿದ್ದರೂ (ಅಕ್ಕನ ತಂದೆ ತಾಯಿ ಯವರ ಬಲವಂತದಿಂದ )ಕಸಪಯ್ಯ ನಾಯಕನನ್ನು ಮದುವೆಯಾದ ಅಕ್ಕಮಹಾದೇವಿ ಕೆಲ ಕಾಲ ಅವನೊಂದಿಗೆ ಬಾಳುತ್ತಾಳೆ. ಅಕ್ಕನ  ಶಿವಪ್ರೇಮದಿಂದ ಕಂಗೆಡುತ್ತಾನೆ. ದಿನದ ಎಲ್ಲ ಹೊತ್ತೂ ಶಿವ ಪೂಜೆ, ಶಿವ ಧ್ಯಾನ, ಶಿವನ ಹಾಡು ಹೀಗೆ ಚನ್ನಮಲ್ಲಿಕಾರ್ಜನನ ಸ್ಮರಣೆಯಲ್ಲಿ ಕಾಲ ಕಳೆಯುತ್ತಾಳೆ. ಇದರಿಂದ ಅತಿಗೋಪಗೊಂಡ ನಾಯಕ ಅವಳಲ್ಲಿ ಜಗಳ ತೆಗೆಯುತ್ತಾನೆ. ಸೊಮಾರು ದಿನಗಳ ಕಾಲ ಹೀಗೆ ಸಾಗುತ್ತದೆ.ಆದರೆ ರಾಜನ ನಿಚ್ಚ ಬುದ್ಧಿ ಮತ್ತು ಅವನ ಕಾಟ್ಟಾಚಾರ ತಡಿಯೋದಕ್ಕೆ ಸಾಧ್ಯವಾಗದೆ ಅಕ್ಕ ಅವನನ್ನು ತೋರಿಯಲು ನಿರ್ಧರಿಸುತ್ತಾಳೆ. ಇದರಿಂದ ಮತ್ತಷ್ಟು ಕುಪಿತನಾದ ರಾಜ್ಯ  “ನೀನು ಉಟ್ಟಿರುವ ಬಟ್ಟೆ, ತೊಟ್ಟಿರುವ ಆಭೂಷಣ, ಒಡವೆಗಳು ನನ್ನದು ,ಅವುಗಳೆಲ್ಲಾ ತೆಗೆದು ಬಿಟ್ಟು ತೋಲಗು ಎಂದು ಅಬ್ಬರೀಸುತ್ತಾನೆ.
“ಅಷ್ಟೇ ತಾನೆ!?” ನಗುತ್ತಾಳೆ ಮಹಾದೇವಿ. ಮಲ್ಲಿಕಾರ್ಜುನನ್ನೆ ಧರಿಸಿ, ಜೀವಿಸುತ್ತಿರುವ ಈ ದೇಹಕ್ಕೆ ಬಟ್ಟೆ ಬರೆಯ ಹೊರೆಯೇಕೆ? ಎಂದು ಎಲ್ಲವನ್ನೂ ಕಳಚಿ ಬೆತ್ತಲಾಗಿ ನಿಲ್ಲುತ್ತಾಳೆ ಅವನೆದುರು. ಈ ಕ್ಷಣದಿಂದ ನನಗೆ ನಿನ್ನ ಬಂಧದ ಹಂಗಿಲ್ಲವೆಂದು ಮನೆ ತೊರೆದು ಹೊರಟುಬಿಡುತ್ತಾಳೆ,ಹೀಗೆ ಲೋಕದ ಬದುಕಿನ ಮದುವೆಯ ಬಂಧನದಿಂದ ಮುಕ್ತಿ ಹೊಂದುವ ಮೂಲಕ ಕಲ್ಯಾಣ ಕಡೆಗೆ ಹೆಜ್ಜೆ ಹಾಕುತ್ತಾಳೆ ಅಕ್ಕ ಮಾಹಾದೇವಿ.
ಶರಣ ಚಳುವಳಿಯಲ್ಲಿ:
ಚೆನ್ನ ಮಲ್ಲಿಕಾರ್ಜುನನ್ನು ಕಾಣಲು ಬಳ್ಳಿಗಾವೆಯಿಂದ ಕಲ್ಯಾಣದ ಅನುಭವ ಮಂಟಪ ಗೆ ಆಗಮಿಸಿದ ಅಕ್ಕ ಅಲ್ಲಿ ಅಲ್ಲಮರ ಮತ್ತು ಇನ್ನಿತರ ಶರಣರ ವಿವಿಧ ರೀತಿಯ ಪರೀಕ್ಷೆಗಳು ಎದುರಿಸಿ ಅವರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ, ಅವರ ಮನ ಗಲ್ಲುವ ಮೂಲಕ ಇಡೀ ಶರಣ ಸಂಕುಲದ ಪ್ರೀತಿ - ವಿಶ್ವಾಸವನ್ನು ಸಂಪಾದಿಸುತ್ತಾಳೆ ಅಕ್ಕ ಹಾಗೂ
ಅನುಭವ ಮಂಟಪದಲ್ಲಿ ಬಸವಾದಿ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ಅಕ್ಕ ತೊಡಗಿಸಿಕೊಂಡರಲ್ಲದೇ, "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದ ಮೂಲಕ ವಚನ ಸಾಹಿತ್ಯಕ್ಕೆ ತಮ್ಮದೇ ಆದ ವಚನ ಸಾಹಿತ್ಯ ಸೇವೆಯನ್ನು ನೀಡಿದಾಳೆ ಅಕ್ಕ ಹಾಗೂ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ಅಕ್ಕನದು. ಅಕ್ಕನ ಒಂದು ವಚನ ಹೀಗಿದೆ ನೋಡಿ
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!.
ಈ ವಚನದಲ್ಲಿ ಹೆಣ್ಣು - ಗಂಡಿನ ಮನದ ಸೊತಕದ ಬಗೆ ಹಾಗೂ ಯಾವ ಸೊತಕದಿಂದ ಈ ನಮ್ಮ ಜೀವನ,ಅಲ್ಲದೆ ಮೋಹದ ಸೊತಕಕ್ಕೆ ಮರಳಾಗುತ್ತೀದೆ ಈ ಜಗತ್ತು, ಬಹಿರಂಗವಾಗಿ ವಾಗಿ ಅಂದ ಕಾಣುವ ಈ ದೇಹ, ಅಂತರಂಗದಲ್ಲಿ ಕೆಟ್ಟ - ದುರ್ಗದ ಈ ಜೀವನ, ಇದಕ್ಕಾಗಿ ಹಂಬಲಿಸುವ ಮನ ಎಂದು ವಿವರಿಸುತ್ತಾ, ಚನ್ನಮಲ್ಲಿಕಾರ್ಜನನ ಸನ್ನಿಧಿಯಲ್ಲಿ ಎಲ್ಲರೂ ಸಮಾನರು - ಎಲ್ಲರೂ ಅವನ ಆದೇಶದಂತೆ ಬದುಕಬೇಕು,ನಮಗೆಲ್ಲ ಅವರೆ ಗುರುಗಳೆಂದು ತಿಳಿಸುತ್ತಾಳೆ ಅಕ್ಕ.
 ಅಕ್ಕ ರಚಿಸುವ ವಚನಗಳಲ್ಲಿ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಲೌಕಿಕ ಜೀವನದ ಮಹತ್ವದ ಬಗೆ ಎಲ್ಲವನ್ನೂ ತಿಳಿದುಕೊಂಡಾಗ, ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ . ವಚನ ಚಳುವಳಿಯ ಸಮಯದಲ್ಲಿ, ವಚನ ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮ ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಮತ್ತೊಂದು ವಚನದಲ್ಲಿ ಅಕ್ಕ ಪ್ರಮುಖ ಶರಣರ ಬಗೆ ಹೀಗೆ ಹೇಳಿದಾಳೆ.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
ಎಂಬ ಈ ವಚನದಲ್ಲಿ ಬಸವಣ್ಣನವರಾದಿಯಾಗಿ ಅಲ್ಲಮರ, ಸಿಧ್ಧರಾಮ,ಮಡಿವಾಳ, ಚನ್ನಬಸವಣ್ಣನವರ ಬಗೆ ವಿವರಿಸುತ್ತಾ ಈ ಎಲ್ಲಾ ಶರಣ ಸಂಗದಿಂದ ನಾನು ಶುದ್ಧ - ಪರಿಪೂರ್ಣವಾಗಿ ಇರುವೆ ಎಂದು ತಿಳಿಸುತ್ತಾಳೆ ಅಕ್ಕ.
ಅಕ್ಕ ಒಬ್ಬ ಅನುಭಾವಿಯೂ ಜೊತೆಗೆ ಕವಿಯೂ ಆಗಿದ್ದು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ.ಮತ್ತೊಂದು ವಿಶೇಷ ವಚನ 
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]
ಎಂಬ ವಚನ ಅಕ್ಕನ ನೈಜ ಸತ್ಯದ ತಿಳುವಳಿಕೆಯ ವಚನವಾಗಿದೆ.ಮೂದಲು ಅಕ್ಕ ಈ ಲೋಕದ ಮಾನವರಂತೆ ಚನ್ನಮಲ್ಲಿಕಾರ್ಜನನ್ನು ಇರಬಹುದು ಎಂದು ಸೊತ್ತಾಡಿ- ತಿರುಗಾಡಿ,ಅಂತಿಮವಾಗಿ ಲೌಕಿಕದ ಬಗೆ ತಿಳಿದು,ಸಾವಿಲ್ಲದ, ಕೆಡಿಲ್ಲದಾ,ರೊವಿಲ್ಲದ ದೇವನಿಗೆ ನಾ ಒಲ್ಲಿದೆ ಎಂದು ತನ್ನ ಅಂತರಂಗದ ಭಾವನೆ  ವಚನ ಮೂಲಕ ಅಕ್ಕ ವ್ಯಕ್ಕಪಡೀಸಿದಾಳೆ. ಮತ್ತೊಂದು ವಚನ
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ, ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ, ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು, ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ, ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ
ಇತ್ತೊಂದು ವಚನ 
ದೇವಲೋಕದವರಿಗೂ ಬಸವಣ್ಣನೇ ದೇವರು, ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು, ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ, ಬಸವಣ್ಣನೇ ದೇವರು.
ಹೀಗೆ ತಮ್ಮ ವಚನದಲ್ಲಿ ಬಸವಣ್ಣ ನವರು ಸೇರಿ ಇಡಿ ಶರಣರ ಸಂಕುಲದ ಭಕ್ತಿಯ ಬಗೆ ಅಕ್ಕನಿಗೆ ವಿಶೇಷವಾದ ಮಮತೆ ಮತ್ತು ವ್ಯಾತ್ಸಲ್ವವು ಎದ್ದು ಕಾಣುತ್ತದೆ, ಹಾಗೂ ಬಸವಣ್ಣ  ಇಡಿ ಲೋಕಕ್ಕೆ ಒಡೆಯ ಮತ್ತು ಬಸವಣ್ಣ ನವರಿಂದ ಬದುಕಿತ್ತು ಈ ಜಗತ್ತು, ಬಸವಣ್ಣನವರೆ ಇಡೀ ಸಕಲ ಜೀವರಾಶಿಗಳಿಗೆ ಶ್ರೇಷ್ಠರು ಮತ್ತು ಗುರು, ಮಾರ್ಗದರ್ಶಕರು ಅಲ್ಲದೆ ನನ್ನ ಚನ್ನಮಲ್ಲಿಕಾರ್ಜನಿಗೂ ಬಸವಣ್ಣನೇ ಗುರು ವೆಂಬ ಅಧ್ಭುತ ವಚನ ಅಕ್ಕನದು.ಒಟ್ಟಿನಲ್ಲಿ ಅಕ್ಕನ ಅಂತರಂಗದ ಕರುಳಿನ ಬಳ್ಳಿಯ ನುಡಿ ಮುತ್ತುಗಳು ಮಾನವವರ ಮನಸ್ಸಿಗೆ ನಾಟುವಂತೆ ರಚಿಸಿದ್ದಾರೆ.ಬದುಕಿನ ಉದ್ದಕ್ಕೂ ಕಷ್ಟಪಡುತ್ತಾ, ಶರಣರ ಅನುಭಾವದ ವೈಚಾರಿಕ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸುವದರೊಂದಿಗೆ,ವಚನ ಸಾಹಿತ್ಯ ಬೆಳೆಸುತ್ತಾ, ಶ್ರೀಶೈಲದ ಕಡೆ ಹೆಜ್ಜೆ ಹಾಕಿದರು ಅಕ್ಕಮಹಾದೇವಿ.
ಚೆನ್ನ ಮಲ್ಲಿಕಾರ್ಜುನನ  ಅದಮ್ಯ ಪ್ರೇಮವನ್ನೇ ಆಧ್ಯಾತ್ಮಿಕ ಶಿಖರವನ್ನೇರುವ ಮೆಟ್ಟಿಲಾಗಿಸಿಕೊಂಡು ಆರೋಹಣ ನಡೆಸಿದ ಅಕ್ಕ, ಕದಳಿಯನ್ನು ತಲುಪಿ ತನ್ನ ಪರಮ ಪ್ರಿಯತಮನಲ್ಲಿ ಶಾಶ್ವತವಾಗಿ ನೆಲೆಸಿದಳು.
ಅಕ್ಕ ಮಹಾದೇವಿಯ ಬದುಕು ಹೀಗಿರುವಾಗ, ಇದರ ಮೂಸೆಯಿಂದ ಹೊಮ್ಮಿದ ವಚನಗಳ ಸತ್ವ ಹೇಗಿದ್ದಿರಬೇಕು ಊಹಿಸಿ! 8 ಶತಮಾನಗಳ ಹಿಂದೆಯೇ ಇಷ್ಟು ಸ್ಪಷ್ಟತೆಯುಳ್ಳ ವಿಚಾರವಾದಿ, ಸ್ತ್ರೀವಾದಿ, ಬಂಡಾಯ, ಸಂವೇದನಾಶೀಲ ಹೆಣ್ಣುಮಗಳೊಬ್ಬಳು ಜೀವಿಸಿದ್ದಳು ಎಂಬುದನ್ನು ಈ ವಚನಗಳು ಸಾರಿ ಸಾರಿ ಹೇಳುತ್ತವೆ. ಕಾವ್ಯ ದೃಷ್ಟಿಯಿಂದಲೂ ಅಕ್ಕನ ವಚನಗಳು ದಿವ್ಯರಸ ಧಾರೆಯೇ ಆಗಿವೆ. ಅಕ್ಕಮಹಾದೇವಿಯ ತ್ಯಾಗದ ಜೀವನ ಇಡೀ ಮಾನವ ಕುಲಕ್ಕೆ ಮಾದರಿ, ವಿಶೇಷವಾಗಿ ಮಹಿಳಾ ವರ್ಗಕ್ಕೆ ದಾರಿದ್ವೀಪ, ಸತ್ಯಕಾಗಿ ಹಾಗೂ ಮಾನವೀಯ ಗುಣಗಳಿಗಾಗಿ ತಮ್ಮ ಜೀವನದ ಬದುಕು ಮುಳ್ಳಿನ ಹಾದಿಯಲ್ಲಿ ಸವೇಸಿ/ಸಾಗಿ, ಶರಣರ ಚಳುವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಕೀರ್ತಿ ಅಕ್ಕಮಹಾದೇವಿಯವರಿಗೆ ಸಲ್ಲಲೇಬೇಕು
ಶ್ರೀಶೈಲದ ಕದಳಿಯ ಬನವನ್ನು ತಲುಪುವ ಮಹಾದೇವಿಯ ಪ್ರಯಾಣ ಒಂದು ಸಮಾಜಿಕ ಮೌಲ್ಯಗಳ ನಿಜದರ್ಶನದ ಆಧ್ಯಾತ್ಮಿಕ ಯಾನ. ಕಲ್ಯಾಣದ ಅನುಭವ ಮಂಟಪದ ಸಂಪರ್ಕ, ಅಲ್ಲಮಪ್ರಭು – ಬಸವಾದಿ ಶರಣರ ಒಡನಾಟ ಈ ಎಲ್ಲವೂ ಮಹಾದೇವಿಯ ಅಂತಃಸತ್ವಕ್ಕೆ ಕನ್ನಡಿಯಾದವು ಅಲ್ಲದೆ ವೈಚಾರಿಕ, ಸಮಾನತೆ   ಹಾಗೂ ಮಹಿಳೆಯ ಹಕ್ಕುಗಳಿಗಾಗಿ ಧ್ವನಿ ಎತ್ತಿ ಹೋರಾಡಿದವರು,ಜಾತಿ ವ್ಯೆವಸ್ಥೆ ಮತ್ತು ಪೂಜಾರಿಗಳ ಮೂಲಕ ದೇವರ ಪೂಜೆಯನ್ನು ವಿರೋಧಿಸಿದ ವೀರ ಗಣಾಚಾರಿಯಾಗಿ ಲೋಕಸಂಚಾರಿಯಾಗಿ ಎಲ್ಲರಿಗೂ ಮಾಗ೯ದಶ೯ನ ಮಾಡಿದರು,ಕನ್ನಡ ಮಾತೃಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡಿದ ಕೀರ್ತಿ ಎಲ್ಲಾ ಶರಣರಿಗೂ ಮತ್ತು ಅಕ್ಕಮಾಹಾದೇವಿ ಅಕ್ಕನಿಗೆ ಸಲ್ಲಬೇಕು. , ಚನ್ನಮಲ್ಲಿಕಾರ್ಜುನ" ಎಂಬುದು ಅಕ್ಕಮಾಹಾದೇವಿ ಅಕ್ಕ’ನ ವಚನಗಳ ಅಂಕಿತ ನಾಮ. ಲೋಕದ ಮತ್ತು ಅಲೌಕಿಕ ಜೀವನದ ನಡುವೆ ಇರುವ ಹಲವಾರು ಆಶೆ,ಆಮಿಷಗಳ ,ಬಂಧನದ ನಡುವಿನ ನಿಜವಾದ ಜೀವನದ ಸತ್ವವನ್ನು ಜಗತ್ತೀಗೆ ತಿಳಿಸಲು ಅಕ್ಕಮಹಾದೇವಿ ಪ್ರಯತ್ನ ಮಾಡಿದ್ದಾರೆ ಅಲ್ಲದೆ ನಾವೆಲ್ಲರೂ ಅಕ್ಕ ನ ಮಾರ್ಗದರ್ಶನಲ್ಲಿ ನಡೆದು ಅವರಿಗೆ ಚೀರ ಋಣಿ ಯಾಗೋಣ ಶರಣ ಬಂಧುಗಳೇ ಎನಂತೀರಿ. 

         ಶ್ರೀ ಸಂಗಮೇಶ ಎನ್. ಜವಾದಿ., ಪ್ರಗತಿಪರ ಚಿಂತಕರು ಮತ್ತು ಸಮಾಜಿಕ ಕಾರ್ಯಕರ್ತರು.
 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.