ಮಂಗಳೂರು : ಶೇಣಿ ಸಮೀಪದ ಕುಳ್ಳಾಜೆ ನಿವಾಸಿ ಲೀಲಾವತಿ (35) ಮೃತ ಮಹಿಳೆ. ಒಂದು ವಾರದ ಹಿಂದೆ ಲೀಲಾವತಿಯ ತಂದೆ ಮೈರೋಲ್ ಹಣ್ಣಿನ ಜ್ಯೂಸ್ ಮಾಡಿ ಕುಡಿದಿದ್ದರು. ಲೀಲಾವತಿ ಅವರೂ ಕೂಡ ಮೈರೋಲ್ ಹಣ್ಣಿನ ಜ್ಯೂಸ್ ಸೇವನೆ ಮಾಡಿದ್ದರು. ಪರಿಣಾಮ ಲೀಲಾವತಿ ಅವರಿಗೆ ವಾಂತಿ, ಭೇದಿಯಾಗಿ ಸುಳ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ದಾಖಲಿಸುವ ಸಂದರ್ಭ ದಾರಿ ಮಧ್ಯೆ ಅವರು ಸಾವನ್ನಪ್ಪಿದ್ದಾರೆ.
ಮೈರೋಲ್ ಹಣ್ಣು.. ಹೆಚ್ಚಾಗಿ ಕಾಡಿನಲ್ಲಿ ಕಂಡು ಬರುವ ಹಣ್ಣು. ಮೈರೋಲ್ ಹಣ್ಣಿನ ಬದಲು ಬೇರೆ ವಿಷಕಾರಿ ಅಂಶವಿರುವ ಕಾಯಿಯನ್ನು ಸೇವನೆ ಮಾಡಿರುವ ಸಾಧ್ಯತೆಯಿದೆ. ಅಂತಹ ವಿಷಕಾರಿ ಕಾಯಿಯ ಸೇವನೆಯಿಂದ ಲೀಲಾವತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಶೇಣಿ ಎಂಬಲ್ಲಿ ಘಟನೆ ನಡೆದಿದೆ.