ರಾಷ್ಟ್ರೀಯ ಸುದ್ದಿ

ಕೋಳಿಮರಿ ನುಂಗಿದಾತ ಮೃತ..! ಜೀವಂತವಾಗಿ ಬದುಕು ಉಳಿದ ಕೋಳಿಮರಿ.

ಛತ್ತೀಸ್‌ಗಢ: ಛತ್ತೀಸ್‌ಗಢದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಜೀವಂತ ಮರಿಯನ್ನು ನುಂಗಿ 35 ರ‍್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಲ್ಲಿ ವಿಚಿತ್ರವೆಂದರೆ ಕೋಳಿ ಮರಿ  ನುಂಗಿದಾತ ಮೃತಪಟ್ಟಿದ್ದರೆ, ಕೋಳಿ ಮರಿ ಆರಾಮಾಗಿ ಬದುಕು ಬಂದಿದೆ. ಅಂಬಿಕಾಪುರ ಗ್ರಾಮವೊಂದರಲ್ಲಿ ನಡೆದ ಈ ಘಟನೆ ವೈದ್ಯಕೀಯ ತಜ್ಞರನ್ನೂ ಅಚ್ಚರಿಗೊಳಿಸಿದೆ. 

ಮೃತ ವ್ಯಕ್ತಿಯನ್ನು ಚಿಂಡ್ಕಲೋ ಗ್ರಾಮದ ಆನಂದ್ ಯಾದವ್ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆನಂದ್ ಯಾದವ್ ಅವರನ್ನು ಅಂಬಿಕಾಪುರದ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಕುಟುಂಬಸ್ಥರ ಪ್ರಕಾರ, ಸ್ನಾನ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಆನಂದ್ ತಲೆ ಸುತ್ತಿ ಪ್ರಜ್ಞಾಹೀನನಾಗಿದ್ದ. 

ಮಾಧ್ಯಮ ವರದಿಗಳ ಪ್ರಕಾರ, ಆನಂದ್ ಅವರು ಈ ರೀತಿ ನಡೆದುಕೊಂಡಿರುವುದಕ್ಕೆ ತಂತ್ರ ಮಂತ್ರವೇ ಕಾರಣ ಎಂದು  ಗ್ರಾಮಸ್ಥರು ಉಲ್ಲೇಖಿಸಿದ್ದಾರೆ. ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ  ಆನಂದ್ ಹತ್ತಿರದ ತಾಂತ್ರಿಕರೊಂದಿಗೆ ಸಂರ‍್ಕದಲ್ಲಿದ್ದರು ಎಂದು ವರದಿಯಾಗಿದೆ. ತಂದೆಯಾಗಬೇಕೆಂಬ ಆಸೆಯಿಂದ ಮಾಂತ್ರಿಕ ಹೇಳಿದ ಎನ್ನುವ ಕಾರಣಕ್ಕೆ ಜೀವಂತ ಮರಿಯನ್ನು ನುಂಗಿರಬಹುದು ಎನ್ನುವುದು ಗ್ರಾಮಸ್ಥರ ಅನುಮಾನ. 

ಶವಪರೀಕ್ಷೆ ವೇಳೆ ವೈದ್ಯರು ಆನಂದ್‌ನ ದೇಹದೊಳಗೆ ಜೀವಂತ ಮರಿಯನ್ನು ಪತ್ತೆ ಹಚ್ಚಿದ್ದಾರೆ. 20 ಸೆಂ.ಮೀ ಉದ್ದದ ಮರಿ ಆನಂದ್ ಅವರ ಶ್ವಾಸನಾಳ ಮತ್ತು ಆಹಾರದ ಮರ‍್ಗ ಎರಡೂ ಮುಚ್ಚಿಹೋಗುವ ರೀತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದು, ಇದರಿಂದ ಉಸಿರುಗಟ್ಟಿ ಆನಂದ್ ಸಾವನ್ನಪ್ದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಇಲ್ಲಿಯವರೆಗೂ '15,000 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿರುವ ನಾನು ನನ್ನ ಇಡೀ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿದ್ದೇನೆ ಎಂದು ಶವಪರೀಕ್ಷೆ ನಡೆಸಿದ ಡಾ.ಸಂತು ಬಾಗ್  ತಿಳಿಸಿದ್ದಾರೆ. 

ಕಾಮೆಂಟ್ ಬಿಡಿ