ಅಕ್ರಮ ಮರಳು ಸಾಗಾಟ 2 ಲಾರಿಗಳು ವಶಕ್ಕೆ.
ಸುಳ್ಯ: ಅಕ್ರಮ ಮರಳು ಸಾಗಾಟದ 2 ಲಾರಿಗಳು ಹಾಗೂ ಮರಳು ಸಾಗಾಟಕ್ಕೆ ಬಳಸಿದ ಇತರ ವಸ್ತುಗಳನ್ನು ಸುಳ್ಯ ತಹಶೀಲ್ದಾರ್ ತಂಡ ವಶಪಡಿಸಿಕೊಂಡ ಘಟನೆ ಸೋಮವಾರ ವರದಿಯಾಗಿದೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದೊಡ್ಡರಿಯಿಂದ ಅಕ್ರಮವಾಗಿ ಮರಳು ಹೇರಿಕೊಂಡು ಹೋಗುತ್ತಿದ್ದ ಲಾರಿಯನ್ನು ಮತ್ತು ದೊಡ್ಡೇರಿ ಪಯಸ್ವಿನಿ ಹೊಳೆಯ ಬದಿಯಲ್ಲಿ ನಿಂತಿದ್ದ ಇನ್ನೊಂದು ಲಾರಿ ಹಾಗೂ ಮರಳು ಸಾಗಾಟಕ್ಕೆ ಬಳಸಿದ ಇತರ ವಸ್ತುಗಳನ್ನು ಸುಳ್ಯ ತಹಶೀಲ್ದಾರ್ ತಂಡ ವಶಕ್ಕೆ ಪಡೆದಿದೆ.
ಬಳಿಕ ತಹಶೀಲ್ದಾರ್ ತಂಡ ಅಕ್ರಮವಾಗಿ ಮರಳು ಹೇರಿಕೊಂಡು ಹೋಗುತ್ತಿದ್ದ ಲಾರಿ ಮತ್ತು ಇನ್ನೊಂದು ಲಾರಿಯನ್ನು ಗಣಿ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ಗಣಿ ಇಲಾಖೆಯವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಕಾಮೆಂಟ್ ಬಿಡಿ