ಜ್ಯೋತಿಷ್ಯ

ಶನಿ ದೋಷವಿದ್ದರೆ ಹನುಮಾನ್ ಚಾಲೀಸಾ ಓದಿ

ಬೆಂಗಳೂರು: ಶನಿ ದೋಷವಿದ್ದರೆ ಹನುಮಾನ್ ಚಾಲೀಸಾ ಓದಿದರೆ ಸಂಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ. ಅದೇ ರೀತಿ ಜೀವನದಲ್ಲಿ, ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಹನುಮಾನ್ ಚಾಲೀಸಾವನ್ನು ಓದಬೇಕು.
ಹನುಮಾನ್ ಚಾಲೀಸಾವನ್ನು ಸತತ ೪೮ ದಿನಗಳ ಕಾಲ ತಪ್ಪದೇ ಪಠಿಸುತ್ತಿದ್ದರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುತ್ತೀರಿ. ಮನಸ್ಸಿನಲ್ಲಿ ಭಯವಿದ್ದರೆ, ಶತ್ರು ಭಯವಿದ್ದರೆ, ಓದು, ಉದ್ಯೋಗದಲ್ಲಿ ಹಿನ್ನಡೆಯಾಗುತ್ತಿದ್ದರೆ ಹನುಮಾನ್ ಚಾಲೀಸಾವನ್ನು ಓದುತ್ತಿದ್ದರೆ ಎಲ್ಲಾ ಸಂಕಷ್ಟಗಳೂ ದೂರವಾಗುತ್ತದೆ. ಹನುಮಾನ್ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ.

ಜಯ ಹನುಮಾನ ಜ್ಞಾನಗುಣಸಾಗರ
ಜಯ ಕಪೀಶ ಮರ‍್ಲೋಕ ಪ್ರಭಾಕರ
ರಾಮದೂತ ಅತುಲಿತ ಬಲಧಾಮ
ಅಂಜನಿಪುತ್ರ ಪವನಸುತ ನಾಮ
ಮಹಾವೀರ ವಿಕ್ರಮ ಬಜರಂಗೀ
ಕುಮತಿ ನಿವಾರಕ ಸುಮತಿಯ ಸಂಗೀ
ಕಾಂಚನ ರಂಜತ ಸುಂದರ ವೇಷ
ರ‍್ಣಕುಂಡಲ ಗುಂಗುರುಕೇಶ
ವಜ್ರಗದಾಧರ ಧ್ವಜಕರಶೋಭಿತ
ಸುಂದರಭುಜ ಉಪವೀತ ಅಲಂಕೃತ
ಶಂಕರಕುವರ ಕೇಸರೀ ನಂದನ
ತೇಜಪ್ರತಾಪ ಮಹಾ ಜಗವಂದನ
ವಿದ್ಯಾವಾನ ಗುಣೀ ಅತಿ ಚತುರ
ರಾಮಕರ‍್ಯವೆಸಗೆ ಬಲು ಕಾತುರ
ಪ್ರಭುಕಥೆ ಕೇಳುತ ಮೈಮರೆವಾತ
ಮನವಿ ರಾಮ ಸೌಮಿತ್ರಿ ಸೀತ
ಸೂಕ್ಷ್ಮರೂಪವನು ಸೀತೆಗೆ ತೋರಿದೆ
ವಿಕಟರೂಪದಲಿ ಲಂಕೆಯ ದಹಿಸಿದೆ
ಭೀಮರೂಪದಲಿ ಅಸುರರ ಕೊಂದೆ
ರಾಮಚಂದ್ರನ ಕರ‍್ಯವೆಸಗಿದೆ
ಮೂಲಿಕೆ ತಂದು ಸೌಮಿತ್ರಿಯ ಪೊರೆದೆ
ರಾಮನ ಪ್ರೀತಿಯ ಅಪ್ಪುಗೆ ಪಡೆದೆ
ಭರತನಂತೆ ನೀನು ಪ್ರಿಯಸಹೋದರ
ಎನ್ನುತ ಹೊಗಳಿದ ಶ್ರೀರಘುವೀರ
ಸಹಸ್ರಮುಖವು ನಿನ್ನ ಸ್ತುತಿಸಿದೆ
ಎನ್ನುತ ಶ್ರೀಪತಿ ಆಲಿಂಗಿಸಿದ
ಸನಕಬ್ರಹ್ಮಾದಿ ಮುನಿವರೇಣ್ಯರು
ನಾರದ ಶಾರದೆ ಆದಿಶೇಷರು
ಯಮಕುಬೇರ ದಿಕ್ಪಾಲಕರೆಲ್ಲರು
ಕವಿಕೋವಿದರು ನಿನ್ನ ಸ್ತುತಿಸಿಹರು
ಸುಗ್ರೀವಗೆ ನೀ ಸಹಾಯ ಮಾಡಿದೆ
ರಾಮಸಖ್ಯದಿ ರಾಜ್ಯ ಕೊಡಿಸಿದೆ
ನಿನ್ನುಪದೇಶ ವಿಭೀಷಣ ಒಪ್ಪಿದ
ಲಂಕೇಶನಾದುದ ಜಗವೇ ಬಲ್ಲದು
ಮಧುರ ಹಣ್ಣೆಂದು ತಿಳಿದು ರವಿಯನು
ಪಿಡಿಯೆ ಹಾರಿದೆ ಸಹಸ್ರಯೋಜನ
ಪ್ರಭುಮುದ್ರಿಕೆಯನು ಧರಿಸಿ ಬಾಯಲಿ
ಶರಧಿ ಲಂಘನವು ಸೋಜಿಗವಲ್ಲ
ಎಷ್ಟೇ ಕಠಿಣ ಕರ‍್ಯವೇ ಇರಲಿ
ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ
ರಾಮನ ದ್ವಾರಪಾಲಕ ನೀನು
ನಿನ್ನಾಜ್ಞೆ ವಿನಾ ಒಳ ಬರಲಾರೆನು
ಸುಖವೆಲ್ಲ ನಿನಗೆ ಶರಣಾಗಿ ಇರಲು
ಭಯವೇಕೆ ಎಮಗೆ ನೀ ರಕ್ಷಿಸಲು
ನಿನ್ನ ತೇಜ ನಿನ್ನಂದಲೆ ಶಮನ
ನಿನ್ನ ರ‍್ಜನೆಗೆ ತ್ರಿಲೋಕ ಕಂಪನ
ಮಹಾವೀರ ನಿನ್ನ ನಾಮವ ಕೇಳಲು
ಸನಿಹಕೆ ಬರದು ಭೂತಪ್ರೇತಗಳು
ಹನುಮ ನಿನ್ನನು ಸದಾ ಭಜಿಸಲು
ನಾಶವಾಗುವುವು ರೋಗರುಜಗಳು
ಹನುಮನ ಧ್ಯಾನಿಸೆ ತ್ರಿಕರಣದಿಂದ
ಕಷ್ಟಕರ‍್ಪಣ್ಯವು ದೂರಾಗುವುದು
ತಪಸ್ವೀರಾಮನ ಕರ‍್ಯಗಳೆಲ್ಲವ
ಯಶಸ್ಸಿನಿಂದ ಸಫಲಗೊಳಿಸಿದವ
ನೆರವೇರಿಸುತಲಿ ಭಕ್ತರಾಭೀಷ್ಟವ
ಅಮಿತ ಫಲವನು ನೀ ಕರುಣಿಸುವೆ
ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ
ನಿನ್ನಯ ಪ್ರಭೆಯ ಲೋಕ ಬೆಳಗಿದೆ
ಸಾಧುಸಂತರನು ಪೊರೆದು ಸಲಹಿದೆ
ಅಸುರರ ಕೊಂದು ರಾಮಪ್ರಿಯನಾದೆ
ಅಷ್ಟಸಿದ್ಧಿ ನವನಿಧಿಯ ಕೊಡುವವ
ಜಾನಕಿ ಮಾತೆಯಿಂ ವರವ ಪಡೆದವ  ನಿನ್ನಲಿ

ಕಾಮೆಂಟ್ ಬಿಡಿ