ವಾಟ್ಸ್‌ಆ್ಯಪ್ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ
ಬೆಂಗಳೂರು: ವಾಟ್ಸ್‌ಆ್ಯಪ್ ಬಳಸುವ ನೂರಾರು ಕೋಟಿ ಗ್ರಾಹಕರಿಗೆ ಗುಡ್‌ನ್ಯೂಸ್. ಜನಪ್ರಿಯ ಮೆಟಾ ಒಡೆತನದ ವಾಟ್ಸ್‌ಆ್ಯಪ್‌ಸದ್ಯದಲ್ಲೇ ಸ್ಟೇಟಸ್ ಅವಧಿಯನ್ನ ಎರಡು ನಿಮಿಷಕ್ಕೆ ಏರಿಕೆ ಮಾಡಲಿದೆ. ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸೋ ಮೆಸೇಜಿಂಗ್ ಆ್ಯಪ್ ವಾಟ್ಸ್‌ಆ್ಯಪ್ ಜನಪ್ರಿಯ ಅಪ್ಲಿಕೇಷನ್ ಕೂಡ ಹೌದು. ದಿನದಿಂದ ದಿನಕ್ಕೆ ಈ ಅಪ್ಲಿಕೇಷನ್ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಮೆಟಾ ಕಂಪನಿಯೂ ಅಪ್ಲಿಕೇಷನ್‌ನಲ್ಲೂ ಅಪ್‌ಡೇಟ್ ಮಾಡಿ ಗ್ರಾಹಕರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ.
ಅಸಂಖ್ಯಾ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತರಲಿದೆ. ಅದರಂತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಲು ಹೊರಟಿದೆ. ಈ ಮೊದಲು 30 ಸೆಕೆಂಡ್‌ಗಳಿಗೆ ಸೀಮಿತವಾಗಿದ್ದ ವಿಡಿಯೊವನ್ನು ಕೆಲ ತಿಂಗಳ ಹಿಂದೆ 1 ನಿಮಿಷಕ್ಕೆ ಹೆಚ್ಚಿಸಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆವಾಗಿದೆ.
ಇದರಿಂದ ಪ್ರೇರಣೆಗೊಂಡಿರುವ ಕಂಪೆನಿಯು ಎರಡು ನಿಮಿಷಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಇದು ಸದ್ಯದಲ್ಲೇ ಅನುಷ್ಠಾನವಾಗಲಿದ್ದು, ಗ್ರಾಹಕರು ಆಗ ದೀರ್ಘಾವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಆ್ಯಪ್ ಅಪ್ಡೇಟ್ ಮಾಡಿಕೊಂಡು ಅದನ್ನು ಬಳಸಬಹುದಾಗಿದೆ.
ಕಾಮೆಂಟ್ ಬಿಡಿ