ಹನಿಟ್ರ್ಯಾಪ್ ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ... ರಾಷ್ಟ್ರಮಟ್ಟದಲ್ಲೂ ರಾಜಕಾರಣಿಗಳು ಹನಿ ಟ್ರ್ಯಾಪ್ ಗೆ ಬಲಿ
ಬೆಂಗಳೂರು : ಕರ್ನಾಟಕದ ಹಲವಾರು ಸಚಿವರು, ಶಾಸಕರು ಮತ್ತು ರಾಜಕಾರಣಿಗಳು ಹನಿ ಟ್ರ್ಯಾಪ್‌ಗೆ ಬಲಿಯಾಗಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿವೆ. ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಸಂಪುಟ ಸಹೋದ್ಯೋಗಿಯೊಬ್ಬರ ಮೇಲೆ ಎರಡು ಬಾರಿ ಹನಿ ಟ್ರ್ಯಾಪ್ ಪ್ರಯತ್ನಗಳು ನಡೆದಿವೆ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಇದು ಮೊದಲ ಬಾರಿಗೆ ಅಲ್ಲ, ಕಳೆದ 20 ವರ್ಷಗಳಿಂದ ಇದು ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಪ್ರತಿಯೊಂದು ಪಕ್ಷವೂ ಇದಕ್ಕೆ ಬಲಿಯಾಗಿದೆ" ಎಂದು ಜಾರಕಿಹೊಳಿ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಹನಿಟ್ರ್ಯಾಪ್ ಕುರಿತಂತೆ ಗಂಭೀರವಾದ ಚರ್ಚೆ ನಡೆಯಿತು. ದೇವರು ಫೋಟೋ ಪ್ರದರ್ಶಿಸಿ ಶಾಸಕ ಮುನಿರತ್ನ ಭಾವಕರಾದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಕೆ.ಎನ್ ರಾಜಣ್ಣ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಹನಿಟ್ರ್ಯಾಪ್ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಲ್ಲೂ ಕೂಡ 48 ಜನರ ಪೆನ್ ಡ್ರೈವ್ ಇದೆ ಎಂದು ಹೊಸ ಬಾಂಬ್ ಸಿಡಿಸಿದರು.
ಹನಿಟ್ರ್ಯಾಪ್ ರಾಜ್ಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ರಾಷ್ಟ್ರಮಟ್ಟದಲ್ಲೂ ರಾಜಕಾರಣಿಗಳು ಹನಿ ಟ್ರ್ಯಾಪ್ ಗೆ ಬಲಿಯಾಗಿದ್ದಾರೆ. ಕರ್ನಾಟಕ ಸಿಡಿ ಪೆನ್ ಡ್ರೈವ್ ಕಾರ್ಖಾನೆಯಾಗಿದೆ. ಸಿಡಿ ಮಾಡುವಂತಹ 48 ಜನರು ಇದ್ದಾರೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ರಾಷ್ಟ್ರಮಟ್ಟದವರೆಗೂ ಹನಿ ಟ್ರ್ಯಾಪ್ ಆಗಿದೆ. 48 ಜನರ ಪೆನ್ ಡ್ರೈವ್ ಕೂಡ ಇದೆ ಈ ಕುರಿತು ನಾನು ಗ್ರಹ ಮಂತ್ರಿಗಳಿಗೆ ಲಿಖಿತವಾದ ದೂರು ನೀಡುತ್ತೇನೆ. ಹನಿ ಟ್ರ್ಯಾಕ್ ಹಿಂದೆ ದೊಡ್ಡ ಜಾಲವೇ ಇದೆ ಇದರ ಹಿಂದೆ ಯಾರೇ ಇದ್ದರೂ ಹೊರಬರಲೇಬೇಕು. ಇದು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ರಾಷ್ಟ್ರಮಟ್ಟದ ಎಲ್ಲಾ ಪಕ್ಷಗಳ ಮುಖಂಡರುಗಳ ಪೆನ್ ಡ್ರೈವ್ ಕೂಡ ಇದೆ. ಆ ಒಂದು ದೃಷ್ಟಿಯಲ್ಲಿ ನನ್ನ ಮೇಲಿನ ಏನು ಆರೋಪ ಇದೆ ಅದಕ್ಕೆ ಕ್ಲಾರಿಫಿಕೇಶನ್ ಕೊಡಲು ಗೃಹ ಮಂತ್ರಿಗಳಿಗೆ ದೂರು ನೀಡುತ್ತೇನೆ. ದೂರನ್ನು ಆಧರಿಸಿ ಅವರು ತನಿಖೆ ಮಾಡಿಸಲಿ ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತು ಹೊರಗಡೆ ಬರಲಿ ಜನರಿಗೆ ಗೊತ್ತಾಗಲಿ ಎಂದು ಸಚಿವ ಕೆ ಎನ್ ರಾಜಣ್ಣ ತಿಳಿಸಿದರು.
ಹನಿ ಟ್ರ್ಯಾಪ್ ಕಡಿವಾಣ ಹಾಕಬೇಕು: ಸತೀಶ್ ಜಾರಕಿಹೊಳಿ ಸಚಿವ ಕೆ ಎನ್ ರಾಜಣ್ಣಗೆ ಹನಿ ಟ್ರ್ಯಾಪ್ ಯತ್ನದ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿ, ರಾಜಕೀಯದಲ್ಲಿ ಯಾರು ಬೆಳೆಯುತ್ತಾರೆ ಅವರನ್ನು ತುಳಿಯುವ ಪ್ರಯತ್ನ ನಡೆದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಸಚಿವ ಕೆ ಎನ್ ರಾಜಣ್ಣ ಸದನದಲ್ಲಿ ಹೇಳಿದ್ದಾರೆ. ಆದಷ್ಟು ಬೇಗ ದೂರು ಕೊಟ್ರೇ ಒಳ್ಳೆಯದು. ದೂರು ಕೊಟ್ಟು ತನಿಖೆ ಆದರೆ ಇದಕ್ಕೆ ಇತಿಶ್ರೀ ಹಾಡಬೇಕು. ಇದೊಂದು ಕ್ಯಾನ್ಸರ್ ಪಿಡುಗು ಇದ್ದಂಗೆ ಇದೆ. ಕೆಲವು ಹೊರಗೆ ಬಂದಿದೆ, ಇನ್ನೂ ಕೆಲವು ಬಂದಿಲ್ಲ. ಸಿಡಿ ಹೊರ ಬರದೇ ಬ್ಲ್ಯಾಕ್ ಮೇಲ್ ಮಾಡೋ ಕೆಲಸವೂ ಆಗಿದೆ. ಸಿಡಿ ಮಾಡಿಸುವ ಉದ್ದೇಶ ಏನ್ ಎಂದು ಆರೋಪಿಗಳು ಹೇಳಬೇಕು. ತನಿಖೆಗೆ ನಾವು ಕೂಡ ಒತ್ತಾಯ ಮಾಡ್ತಾ ಇದ್ದೇವೆ. ದೂರು ಕೊಡಲು ಸಚಿವ ರಾಜಣ್ಣ ಒಪ್ಪಿಕೊಂಡಿದ್ದಾರೆ ಎಂದರು. ಹಿಂದೆಯೇ ಬೆಳಗಾವಿಯಲ್ಲಿ ಆಗಿದೆ. ರಾಜಕಾರಣಿಗಳ ವಿರುದ್ಧ ರಾಜಕಾರಣಿಗಳು ಷಡ್ಯಂಡ್ರ ಮಾಡಿದ್ದಾರೆ. ಇದಕ್ಕೆ ಬ್ರೇಕ್ ಹಾಕಲೇ ಬೇಕು. ಯಾರ ವಿರುದ್ಧ ಆರೋಪ ಮಾಡಲ್ಲ. ಪೊಲೀಸ್ ರಿಂದ ತನಿಖೆ ಮಾಡಿದ್ರೆ ಸತ್ಯ ಹೊರ ಬರುತ್ತದೆ. ವರಿಷ್ಠರಿಗೆ ತಲುಪಿಸುವ ಪ್ರಯತ್ನ ಮಾಡಬೇಕು. ಹೈಕಮಾಂಡ್ ಗೆ ಸಹ ಇದನ್ನು ಗಮನ ಸೆಳೆಯುವ ಪ್ರಯತ್ನ ಮಾಡುತ್ತೇವೆ. ರಮೇಶ್ ಜಾರಕಿಹೊಳಿ, ರಾಜಣ್ಣ ಮೂಲಕ ಪ್ರಕರಣ ಹೊರ ಬಂದಿದೆ. ಈ ಎಪಿಸೋಡ್ ಇಲ್ಲಿಗೆ ಕೊನೆಯಾಗಬೇಕು ಎಂದರು.
ಕಾಮೆಂಟ್ ಬಿಡಿ