ಯತ್ನಾಳ್ ಇದೀಗ ಟ್ರೋಲ್:ರಸ್ತೆ ಗುಂಡಿ ಮುಚ್ಚುವುದಕ್ಕೆ ಒಂದಾದರು JCB ತರ್ಸಿ ರಸ್ತೆ ಸರಿ
ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜೆಸಿಬಿ ಹೇಳಿಕೆ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ನಾನೇನಾದರೂ ಕರ್ನಾಟಕದ ಮುಖ್ಯಮಂತ್ರಿಯಾದರೆ, ಸಾವಿರ ಜೆಸಿಬಿಗಳನ್ನು ಆರ್ಡರ್ ಮಾಡುತ್ತೇನೆ. ಪ್ರತಿ ತಾಲ್ಲೂಕಿಗೂ 35 ಜೆಸಿಬಿಗಳನ್ನು ಇರಿಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಮಾದರಿಯನ್ನು ಕರ್ನಾಟಕದಲ್ಲೂ ಜಾರಿ ಮಾಡುವ ಬಗ್ಗೆ ಯತ್ನಾಳ್ ಅವರು ಮಾತನಾಡಿದ್ದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊಟ್ಟಿರುವ ಹೇಳಿಕೆಯೊಂದು ಇದೀಗ ಟ್ರೋಲ್‌ಗೆ ಕಾರಣವಾಗಿದೆ. ನಾನು ಸಿಎಂ ಆದ ಮೇಲೆ ಪ್ರತಿ ತಾಲ್ಲೂಕಿನಲ್ಲೂ ಜೆಸಿಬಿ ಇರಿಸುತ್ತೇನೆ ಎಂದು ಹೇಳಿದ್ದರು. ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ ಮಾದರಿಯನ್ನು ಅನುಸರಿಸಲಾಗುತ್ತಿದೆ. ಈ ಭಾಗದಲ್ಲಿ ಕ್ರಿಮಿನಲ್‌ಗಳಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಬುಲ್ಡೋಜರ್ ಪ್ರಯೋಗ ಅನುಸರಿಸಲಾಗುತ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಪರ ಹೋರಾಟಗಾರ ಶಿವಾನಂದ ಗುಂಡನವರ್ ಅವರು, ದೇವ್ರೆ.. ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಮೊದಲ ಆ ನಿಮ್ಮ ಮತ ಕ್ಷೇತ್ರದ ಜುಮನಾಳ to ಸಾರವಾಡ ರಸ್ತಿಯಲ್ಲಿರುವ ರಸ್ತೆ ಗುಂಡಿ ಮುಚ್ಚುವುದಕ್ಕೆ ಒಂದಾದರು JCB ತರ್ಸಿ ರಸ್ತೆ ಸರಿ ಮಾಡಿ. ಆ ನಂತರ ನಿಮ್ಮ ಹೇಳಿಕೆಗೆ ಅರ್ಥ ಬಂದೀತು ಎಂದಿದ್ದಾರೆ.
ಮುಂದುವರಿದು ಧರ್ಮದ ಕಾವಲ್ಲಿ ಎಷ್ಟು ದಿನವೆಂದು ರಾಜಕೀಯ ಮಾಡಿ ಜನಗಳನ್ನು ಹಿಂದಕ್ಕೆ ತಳ್ಳುವಿರಿ. ಮೊದಲು ರಸ್ತೆ ಸರಿ ಮಾಡಿ ನಿಮ್ಮ ಕ್ಷೇತ್ರದ ಜನಗಳಿಗೆ ನ್ಯಾಯ ಒದಗಿಸಿ ಎಂದು ಹೇಳಿದ್ದಾರೆ. .
ಮುಂದುವರಿದು ಧರ್ಮದ ಕಾವಲ್ಲಿ ಎಷ್ಟು ದಿನವೆಂದು ರಾಜಕೀಯ ಮಾಡಿ ಜನಗಳನ್ನು ಹಿಂದಕ್ಕೆ ತಳ್ಳುವಿರಿ. ಮೊದಲು ರಸ್ತೆ ಸರಿ ಮಾಡಿ ನಿಮ್ಮ ಕ್ಷೇತ್ರದ ಜನಗಳಿಗೆ ನ್ಯಾಯ ಒದಗಿಸಿ ಎಂದು ಹೇಳಿದ್ದಾರೆ.
ಕಾಮೆಂಟ್ ಬಿಡಿ