ರಾಜ್ಯ ಸುದ್ದಿ

ಮಂಗಳೂರಿನ ರೋಹನ್ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಸಹಿ

ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದಿಗ್ಗಜ ಸಂಸ್ಥೆಯಾಗಿರುವ ಮಂಗಳೂರಿನ ರೋಹನ್ ಕಾರ್ಪೊರೇಷನ್ ತನ್ನ ಬ್ರಾಂಡ್ ರಾಯಭಾರಿಯಾಗಿ ಬಾಲಿವುಡ್‌ನ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಘೋಷಿಸಿದೆ. ರೋಹನ್ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಶಾರುಖಾನ್ ಸಹಿ ಮಾಡುವ ಮೂಲಕ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ.


 ರೋಹನ್ ಕಾರ್ಪೊರೇಷನ್ ಕಳೆದ ಮೂರು ದಶಕಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ರೋಹನ್ ಸಿಟಿ, ರೋಹನ್ ಸೈರ್‌ನಂತಹ ಯೋಜನೆಗಳ ಮೂಲಕ ಆಧುನಿಕತೆ, ವಿಶ್ವಾಸ ಮತ್ತು ಗುಣಮಟ್ಟದ ಸಂಕೇತವಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಪರಿಸರ ಸಂರಕ್ಷಣೆ ಮತ್ತು ಗ್ರಾಹಕರ ತೃಪ್ತಿಗೆ ಒತ್ತು ನೀಡುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಶಾರುಖ್ ಖಾನ್‌ರಂತಹ ಜಾಗತಿಕ ಐಕಾನ್‌ನನ್ನು ತನ್ನ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡುವ ಮೂಲಕ ರೋಹನ್ ಕಾರ್ಪೊರೇಷನ್ ತನ್ನ ಯಶಸ್ಸಿನ ಪಯಣದಲ್ಲಿ ಹೊಸ ಶಿಖರವನ್ನು ಮುಟ್ಟಿದೆ.

ಕಾಮೆಂಟ್ ಬಿಡಿ

Join Us