ಕ್ರೈಂ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಗಳಿಗೆ ಯುವ ಜನತೆ ಬಲಿ; ಬೆಟ್ಟಿಂಗ್ ಆ್ಯಪ್‌ಗಳು ಕಾನೂನುಬಾಹಿರ ಚಟುವಟಿಕೆ


ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಹೆಚ್ಚು ಆಕರ್ಷಿಸುತ್ತಿವೆ. ಇವುಗಳಲ್ಲಿ ಕೆಲವನ್ನು ಪ್ರಚಾರ ಮಾಡುವ ಸಲುವಾಗಿ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಪೇಜ್‌ಗಳಿಂದ ಜಾಹಿರಾತು ನೀಡುತ್ತಿದ್ದಾರೆ. ಇದರಿಂದ ಪ್ರೇಕ್ಷಕರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಲಾಗಿದೆ.

ಆನ್‌ಲೈನ್ ಬೆಟ್ಟಿಂಗ್‌ಗಳಿಂದ ಸಾಕಷ್ಟು ಮಂದಿ ಆರ್ಥಿಕವಾಗಿ ಹಾಳಾಗಿರುವ ಘಟನೆಗಳು ಸಂಭವಿಸಿವೆ. ಹೀಗಾಗಿ, ಸೈಬರ್ ಪೊಲೀಸರು ಈ ಸ್ಟಾರ್ಸ್‌ಗಳ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲು ಸಿದ್ಧರಾಗಿದ್ದಾರೆ. ಬೆಟ್ಟಿಂಗ್‌ ಪ್ರಚಾರ ಮಾಡುವುದು ಕಾನೂನುಬಾಹಿರವಾಗಿದ್ದು, ಇದರಿಂದ ಯುವ ಜನತೆ ದಾರಿ ತಪ್ಪುವ ಸಂಭವಿರುತ್ತದೆ.

ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಕಾನೂನುಬಾಹಿರವಾಗಿದ್ದು, ಅವುಗಳನ್ನು ಪ್ರಚಾರ ಮಾಡುವುದು ಅಪರಾಧ ಎನಿಸಿಕೊಂಡಿದೆ. ಈ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ಮಾಡಲು ಪ್ರೋತ್ಸಾಹ ನೀಡಿದರೆ, ಯುವಕರಲ್ಲಿ ಕಾನೂನುಬಾಹಿರ ಚಟುವಟಿಕೆಗಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. 

ಕನ್ನಡ ಚಿತ್ರರಂಗದಲ್ಲಿಯೂ ಬೆಟ್ಟಿಂಗ್ ಪ್ರಚಾರ:ಇದೀಗ ಕರ್ನಾಟಕದಲ್ಲೂ ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಆಲೋಚನೆ ನಡೆಯುತ್ತಿದ್ದು, ಸ್ಯಾಂಡಲ್‌ವುಡ್‌ನಲ್ಲಿಯೂ ಕೆಲವು ಕಲಾವಿದರು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ನಟಿ ಐಂದ್ರಿತಾ ರೇ, ಪ್ರಣಿತಾ, ಸಂಜನಾ ಆನಂದ್, ಕುರಿ ಪ್ರತಾಪ್ ಸೇರಿದಂತೆ ಹಲವು ಸ್ಟಾರ್ಸ್‌ಗಳು ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್‌ಗಳಲ್ಲಿ ಬೆಟ್ಟಿಂಗ್ ಆ್ಯಪ್‌ಗಳ ಜಾಹಿರಾತುಗಳನ್ನು ಹಾಕುತ್ತಿದ್ದಾರೆ.

ಕಾಮೆಂಟ್ ಬಿಡಿ

Join Us