ಕ್ರೀಡಾ ಸುದ್ದಿ

ಏಕಾಏಕಿ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌

ಟೀಂ ಇಂಡಿಯಾ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರು ಶನಿವಾರದಂದು ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ಪಂಜಾಬ್ ವಿರುದ್ಧ ಬಂಗಾಳದ ಪರ ತಮ್ಮ ಅಂತಿಮ ರಣಜಿ ಪಂದ್ಯವನ್ನು ಆಡಿದ ನಂತರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ವೃದ್ಧಿಮಾನ್ ಸಹಾ ನಿವೃತ್ತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದು, ʼನಾನು 1997ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟು 28 ವರ್ಷಗಳಾಗಿವೆ ಮತ್ತು ಇದು ಅದ್ಭುತ ಪ್ರಯಾಣವಾಗಿದೆ. ನನ್ನ ದೇಶ, ರಾಜ್ಯ, ಜಿಲ್ಲೆ, ಕ್ಲಬ್, ವಿಶ್ವವಿದ್ಯಾನಿಲಯ, ಕಾಲೇಜು ಮತ್ತು ಶಾಲೆಯನ್ನು ಪ್ರತಿನಿಧಿಸುವುದು ನನ್ನ ಜೀವನದ ಬಹುದೊಡ್ಡ ಗೌರವವಾಗಿದೆ' ಎಂದು ಸಹಾ ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಕಾಮೆಂಟ್ ಬಿಡಿ

Join Us