ವೀಕೆಂಡ್ ಕರ್ಫ್ಯೂ ಬಗ್ಗೆ ಜನರ ಅಭಿಪ್ರಾಯ ಏನ್ ಗೊತ್ತಾ....? ಬಿಜೆಪಿಯ ಆಡಳಿತ ಪಕ್ಷದಲ್ಲೂ ಕಾಡುತ್ತಿದೆ ಈ ಭಯ..!?

ಮಂಗಳೂರು: ಕೊರೋನ ಲಾಕ್ಡೌನ್ ಎನ್ನುವ ಶಬ್ದ ನಿದ್ದೆಯಿಂದ ಬಡಿದೇಬ್ಬಿಸುತ್ತಿದೆ. ಕೊರೋನ ವಾರ್ಷಿಕೋತ್ಸವದಂತೆ ಪ್ರತಿ ವರ್ಷವೂ ಬರುತ್ತಿದೆ ಎನ್ನುವುದು ಅಚ್ಚರಿಯ ಸಂಗತಿ. ಒಂದು ತುತ್ತು ಅನ್ನಕ್ಕೂ ಕನ್ನ ಹಾಕುತ್ತಿದೆ ಈ ಕೊರೋನ. ಎರಡು ವರ್ಷದಲ್ಲಿ ಜನ ಜೀವನ ಅವ್ಯವಸ್ಥೆಯ ಆಗರವಾಗುತ್ತಿದೆ.

ಮಳೆಗಾಲ ಆರಂಭ ವಾದಾಗ ಶೀತ, ಜ್ವರ ನೆಗಡಿ ಬರುವುದು ಸರ್ವೇ ಸಾಮಾನ್ಯ. ಇದು ಈಗಿನ ಕಥೆಯಲ್ಲ. ಎಷ್ಟೋ ವರ್ಷಗಳಿಂದ ಕಾಡುತ್ತಿದೆ. ಅದಾದನಂತರ ಚಳಿಗಾಲ, ಬೇಸಿಗೆಕಾಲ. ಹವಾಮಾನ ಬದಲಾದಂತೆ ಜನರ ಮೇಲೆ ಪ್ರಭಾವ ಬೀರುತ್ತಾ ಹೋಗುತ್ತದೆ ಆ ಅಂಶವೇ ಶೀತ, ಜ್ವರ, ನೆಗಡಿ. ಆದರೆ ಎರಡು ವರ್ಷಗಳಿಂದ ಅದೇ ಸಮಯದಲ್ಲಿ ಕೊರೋನ ಬಾಧಿಸುತ್ತಿದೆ ಎನ್ನುತ್ತಾರೆ ಆರೋಗ್ಯ ತಜ್ಞರು.

truenewskaanada

ಇದರಲ್ಲೂ ಅಚ್ಚರಿಯ ಸಂಗತಿ ಎಂದರೆ ಕೊರೋನ ಹೆಚ್ಚಾಗುತ್ತಿರುವಾಗ ಮಲೇರಿಯಾ, ಡೆಂಗ್ಯೂ, ನ್ಯೂಮೋನೀಯ, ಹೆಚ್ ವನ್ ಏನ್ ವನ್, ಇಂತಹ ಮಾರಕ ರೋಗಗಳು ನಾಪತ್ತೆ ಯಾಗಿರುವುದು ಅಚ್ಚರಿಯ ಸಂಗತಿ. ಅದೇ ಎರಡು ವರ್ಷಗಳ ಹಿಂದೆ ಇವುಗಳ ಆರ್ಭಟ ಬಹಳ ಜೋರಾಗಿತ್ತು. ಇದೆಲ್ಲವನ್ನೂ ಗಮನಿಸಿದ ಜನರು ಮೆಡಿಕಲ್ ಎನ್ನುವ ಮಾಫಿಯ ಬಲು ಜೋರು ಸದ್ದು ಮಾಡುತ್ತಿದೆ ಎನ್ನುವ ಆರೋಪ ಮಾಡಿದ್ದಾರೆ.

ಮಂಗಳೂರಿನ ಜನತೆ ಈ ಕೊರೋನ ಲಾಕ್ಡೌನ್ ನ ಬಗ್ಗೆ ಹೇಳುವುದು ಹೀಗೆ ಶ್ರೀಮಂತರಿಗೆ ಕಷ್ಟವಿಲ್ಲ, ಬಡವನಿಗೆ ಸಮಸ್ಯೆಯಿಲ್ಲ ಆದರೆ ಮಧ್ಯಮ ವರ್ಗದ ಜನರಿಗೆ ಭದ್ರತೆ ಇಲ್ಲ.

ಹೌದು... ಶ್ರೀಮಂತರು ಹಣ ಇದೆ ಹೇಗೂ ಬದುಕುತ್ತಾರೆ, ಬಡವರಿಗೆ ಇದ್ದವರು ಸಹಾಯ ಮಾಡುತ್ತಾರೆ ಆದರೆ ಮಧ್ಯಮ ವರ್ಗದ ಜನರಿಗೆ ಸ್ವಾಭಿಮಾನ ದ ಬದುಕು ಬಾಳುತ್ತಾರೆ ಅಂಥವರು ಬೀದಿಗೆ ಬೀಳುತ್ತಿರುವುದು ಅಷ್ಟೇ ಸತ್ಯ. ವೀಕೆಂಡ್ ಕರ್ಫ್ಯೂ ಅನ್ನುವಂತ ಮಾರಿ ರಾಜ್ಯ ಸರ್ಕಾರ ಜನರ ಮೇಲೆ ಹೇರಿದರೂ, ಜನರು ಮನಸ್ಸಿಲ್ಲದ ಮನಸ್ಸಿನಿಂದ ಪಾಲುಸುತ್ತಿದ್ದಾರೆ ಎನ್ನುವ ಮಾತು ಕೇಳುತ್ತಿದೆ. ಇಷ್ಟಕ್ಕೂ ಪಾಲಿಸುವುದ್ದಕ್ಕೂ ಒಂದು ಕಾರಣ ಇದೆ. ಏನೆಂದರೆ ದಂಡ ಹಾಗೂ ವಾಹನ ಸೀಸ್ ಮಾಡುವ ಭಯವು ಇರುವುದರಿಂದ. ವರ್ತಕರಿಗೆ ಇದೇ ಭಯ ಕಾಡುತ್ತಿದೆ. ಆದರೆ ಎಲ್ಲರ ಮನಸ್ಸಿನಲ್ಲಿ ಸರ್ಕಾರದ ನಿಲುವಿನ ಮೇಲೆ ಆಕ್ರೋಶವು ಇದೆ.

truenewskaanada


ಆಡಳಿತ ಪಕ್ಷದ ಕೆಲವು ಹಿಂಬಾಲಕರನ್ನು ಹೊರತುಪಡಿಸಿ ಎಲ್ಲಾ ಸಾರ್ವಜನಿಕರ ಅಭಿಪ್ರಾಯ ಮಾತ್ರ ರಾಜ್ಯ ಸರ್ಕಾರದ ನಿಲುವಿನ ವಿರುದ್ದವಾಗಿದೆ. ಅಷ್ಟೇ ಯಾಕೆ ಕೆಲವು ಬಿಜೆಪಿಯ ನಾಯಕರುಗಳೇ ಸಂಕಷ್ಟಕ್ಕೆ ಸಿಲುಕಿದ್ದನ್ನು ಒಪ್ಪಿಕೊಳ್ಳುತ್ತಾರೆ. ಇಷ್ಟದರೂ ಕೂಡ ಏನೋ ದೊಡ್ಡ ಸಾಧನೆ ಮಾಡಿದಂತೆ ಬೀಗುತ್ತಿದೆ ರಾಜ್ಯ ಸರ್ಕಾರ ಎನ್ನುತ್ತಾರೆ ಜನ. ಯಾವುದಕ್ಕೂ ಒಂದು ಸಮಯ ಇದೆ. ಆ ಸಮಯ ಸದ್ಯದಲ್ಲೇ ಬರುತ್ತಿದೆ ಅದೇ ಚುನಾವಣೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಾಗೂ ವಿಧಾನ ಸಭಾ ಚುನಾವಣೆ ಹತ್ತಿರ ವಾಗುತ್ತಿರುವುದರಿಂದ ದಿಟ್ಟ ಉತ್ತರ ಕೊಡುವುದಕ್ಕೆ ಮತದಾರರು ಗಟ್ಟಿ ಮನಸ್ಸಿನ ನಿರ್ಧಾರ ಮಾಡಿರುವುದು ಅಷ್ಟೇ ಸತ್ಯ.

ಬಿಜೆಪಿಯು ಧರ್ಮ ರಾಜಕೀಯ  ಮಾಡಲೂ ಮುಂದಾಗಿದೇ ಏನುವುದಕ್ಕೆ ಇದೀಗಿನ ಘಟನೆಗಳು ಸಾಕ್ಷಿಯಾಗಿದೆ. ಹಿಂದೂಗಳ ಭಾವನೆಯಲ್ಲಿ ಮತದಾರರನ್ನು ತನ್ನತ್ತ ಸೆಳೆಯುವ ತಂತ್ರಗಾರಿಕೆ ಮಾಡುತ್ತಲೇ ಇದೆ. ಆದರೆ ಮಾತ್ರ ಮತದಾರರನ್ನು ಸೆಳೆಯುವುದರಲ್ಲಿ ವಿಫಲವಾಗುತ್ತಿದೆ. ಮತದಾರರ ಒಲವು ಬಿಜೆಪಿಯ ಮೇಲೆ ಕಡಿಮೆ ಆಗುತ್ತಿದೆ ಅನ್ನುವುದಕ್ಕೆ ಈ ಬಾರಿಯ ಚುನಾವಣೆಯ ಫಲಿತಾಂಶವೇ ಉತ್ತಮ ಉದಾಹರಣೆ. ಇದರ ಭಯ ಬಿಜೆಪಿ ಯ ಆಡಳಿತ ಪಕ್ಷದಲ್ಲೂ ಕಾಡುತ್ತಿದೆ.

  • ವರದಿ: ಹರೀಶ್ ಮುಲ್ಕಿ
  • ಪೊಲಿಟಿಕಲ್ ಬ್ಯೂರೋ ಟ್ರೂ ನ್ಯೂಸ್‌ ಕನ್ನಡ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.