ವಾಮದಪದವಿನ ಅಜ್ಜಿಬೆಟ್ಟು ಗ್ರಾಮದ  ಕಾಪು ಎಂಬಲ್ಲಿ ಪುರಾತನ ಮಹತೋಭಾರ ಶ್ರೀ ಉಮಾಮಹೇಶ್ವರ  ದೇವರ ಶಿವಲಿಂಗ ಪತ್ತೆ..!

ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ  ವಾಮದಪದವಿನ ಅಜಿಲ ಸೀಮೆಯ 7 ಮಾಗಣೆಯ ಅಜ್ಜಿಬೆಟ್ಟು ಗ್ರಾಮದ  ಕಾಪು ಎಂಬಲ್ಲಿ  ವನದ ಮಧ್ಯೆ ಹಚ್ಚ ಹಸಿರಿನಿಂದ ಕಂಗೊಳಿಸುವ ರಮಣೀಯ ಸುಂದರ ಪರಿಸರದಲ್ಲಿ ಕಂಗೊಳಿಸುತ್ತಿರುವ ಸುಮಾರು1418 ವರ್ಷಗಳ ಪುರಾತನ ಇತಿಹಾಸದಲ್ಲಿ ಊರಿನ ಸಂರಕ್ಷಣೆಯ ಶಕ್ತಿಯಾಗಿ ಋಷಿಮುನಿಗಳ  ತಪಸ್ಸಿಗೆ  ಮೆಚ್ಚಿ ಒಲಿದು ನೆಲೆಯಾಗಿ ನಿಂತ    ಮಹತೋಭಾರ ಶ್ರೀ ಉಮಾಮಹೇಶ್ವರ  ದೇವರ ಸಾನಿಧ್ಯವು ಪೂರ್ವಕಾಲದಲ್ಲಿ  ಹುಲ್ಲಿನಿಂದ ನಿರ್ಮಾಣವಾಗಿತ್ತು.

truenewskaanada

ಮಹತೋಭಾರ ಶ್ರೀ ಉಮಾಮಹೇಶ್ವರ ದೇವರ  ಸಾನಿಧ್ಯಕ್ಕೆ ಹಾಗೂ ಅಜ್ಜಿಬೆಟ್ಟು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆಅಭಿನಾಭಾವ ಸಂಬಂಧವಿದ್ದು ಆ ಕಾಲದಿಂದಲೂ ಈ ಮಹತೋಭಾರ ಶ್ರೀ ಉಮಾಮಹೇಶ್ವರ ದೇವಸ್ಥಾನವು ಜೀರ್ಣೋದ್ದಾರ ಆಗದೆ ಹಾಗೆಯೇ ಉಳಿದಿದೆ ನಂತರ ರಾಜವಂಶಜರ ಕಾಲದಲ್ಲಿ ಕಲ್ಲುಬಂಡೆಗಳಿಂದ ಜೀರ್ಣೋದ್ಧಾರಗೊಂಡು ಸುಮಾರು744 ವರ್ಷಗಳ ಕಾಲ ಪೂಜೆ ಉತ್ಸವಾದಿಗಳು ವೈಭವದಿಂದ ನಡೆಯುತ್ತಿತ್ತು ಸುಮಾರು 578 ವರ್ಷಗಳಿಂದ  ಇತ್ತೀಚಿನವರೆಗೆ ಪ್ರಕೃತಿಯ ವಿಕೋಪದಿಂದ ಅನ್ಯ ಮತಸ್ಥರ ದಾಳಿಯಿಂದ   ಪೂಜೆ ಉತ್ಸವಗಳ ಆಗದೆ ಶ್ರೀ ಕ್ಷೇತ್ರವು ಸಂಪೂರ್ಣ ನಾಶವಾಗಿದೆ.

truenewskaanada

ಮಹತೋಭಾರ ಶ್ರೀ ಉಮಾಮಹೇಶ್ವರ ದೇವರ  ಸಾನಿಧ್ಯಕ್ಕೆ ಹಾಗೂ ಅಜ್ಜಿಬೆಟ್ಟು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆಅಭಿನಾಭಾವ ಸಂಬಂಧ ವಿದ್ದ ಪದವು ಶ್ರೀ  ದುರ್ಗಾಪರಮೇಶ್ವರಿ ದೇವಸ್ಥಾನವು  ಗ್ರಾಮಸ್ಥರಿಂದ ಹಾಗೂ ಮಾಗಣೆಯ  ಭಕ್ತಾದಿಗಳಿಂದ ಜೀರ್ಣೋದ್ಧಾರಗೊಂಡು ಪುನರ್  ಪ್ರತಿಷ್ಠೆಯಾಗಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿರುತ್ತದೆ .

truenewskaanada

ಅಜಿಲ ಸೀಮೆಗೆ ಸಂಬಂಧಪಟ್ಟ  4 ಶಿವ ಕ್ಷೇತ್ರಗಳ ಪೈಕಿ ಮಹತೋಭಾರ ಶ್ರೀ ಉಮಾಮಹೇಶ್ವರ ದೇವರ ಚೈತನ್ಯವಾದ ಸಾನ್ನಿಧ್ಯವು ವಾಮದಪದವಿನ ಅಜ್ಜಿಬೆಟ್ಟು ಗ್ರಾಮದ ಕಾಪು ಎಂಬ ಪ್ರದೇಶದ ವನದ ಮಧ್ಯೆ  ಇರುವ ಸಾನಿಧ್ಯವು ಒಂದಾಗಿದೆ  ಈ ಸಾನಿಧ್ಯವು  ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು , ಚೆನ್ನೈತೋಡಿ, ಪಿಲಿಮೋಗರು , ಕೊಡಂಬೆಟ್ಟು, ಮೂಡುಪಡುಕೊಡಿ, ಇರ್ವತ್ತೂರು, ಪಿಲಾತಬೆಟ್ಟು  ಗ್ರಾಮಗಳ ಭಕ್ತರ  ಆರಾಧನ ಕ್ಷೇತ್ರವಾಗಿದೆ.

truenewskaanada

ಇತಿಹಾಸದಲ್ಲಿ ವೈಭವದಿಂದ ಮೆರೆದ ಶ್ರೀ ಕ್ಷೇತ್ರವು ನಾಶವಾಗಿರುವುದರಿಂದ  ಮಾಗಣೆಗೆ ಸಂಬಂಧ ಪಟ್ಟ ಇತರ ಕ್ಷೇತ್ರಗಳು ಹಾಗೂ ದೈವಸ್ಥಾನಗಳಿಗೂ ಮಹತೋಭಾರ  ಶ್ರೀ ಉಮಾಮಹೇಶ್ವರ ದೇವರ  ಕೋಪವಿರುವುದರಿಂದ ಊರಜನತೆಗೆ ಅನಾರೋಗ್ಯ, ಅಲ್ಪಾಯುಶ್ಯ, ಮಾನಸಿಕ ಅಶಾಂತಿ ಸಹಿತ ಪ್ರಕೃತಿ ವಿಕೋಪಾದಿ ತೊಂದರೆಗಳು ಕಂಡು ಬರುತ್ತಿದೆ. ಅದ್ದರಿಂದ ಏಳು ಗ್ರಾಮದ ಭಕ್ತರು ಒಮ್ಮನಸ್ಸಿನಿಂದ ಜತೆಗೂಡಿ ಕ್ಷೇತ್ರದ ಜೀರ್ಣೋದ್ಧಾರ ಮಾಡಿ, ಉತ್ಸವಾದಿ ಪುಣ್ಯಕಾರ್ಯಗಳು ವಿಧಿವತ್ತಾಗಿ ಸಂಪನ್ನಗೊಂಡಲ್ಲಿ ನಾಡಿಗೆ ಸುಬೀಕ್ಷೆಯಾಗುವುದರೊಂದಿಗೆ ಮನುಕುಲದ ಇಷ್ಟಾರ್ಥಗಳು ಈಡೇರುತ್ತದೆ ಎಂದು ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ.

truenewskaanada

ಶ್ರೀ ಕ್ಷೇತ್ರವು  ಗಜಪೃಷ್ಟಾಕಾರದಲ್ಲಿ ನಿರ್ಮಾಣಗೊಳ್ಳಬೇಕಾಗಿದ್ದು ಪ್ರಧಾನ ಶಕ್ತಿ ಮಹತೋಭಾರ ಶ್ರೀ ಉಮಾಮಹೇಶ್ವರ ಸಹಿತ ಶ್ರೀ ಗಣಪತಿ ದೇವರ ಗುಡಿ, ಶ್ರೀ ಸುಬ್ರಹ್ಮಣ್ಯ ದೇವರ ಗುಡಿ, ನಮಾಸ್ಕಾರ ಮಂಟಪ, ಗೋಪುರ, ಸುತ್ತು ಪೌಳಿ, ಅಯ್ಯಂಗಾಯಿ ಕಲ್ಲು,  ನಂದಿ‌ ಪ್ರತಿಷ್ಠೆ, ಕೊಡಿಮರ( ಧ್ವಜಸ್ತಂಭ) ಪ್ರತಿಷ್ಠೆ, ಕ್ಷೇತ್ರಪಾಲ ಕಲ್ಲು, ಸಪ್ತಮಾತೃಗಳು, ಗುರುಪೀಠ, ತೀರ್ಥಭಾವಿ ಮೊದಲಾದ ಅಂಗಗಳಿರುವ ಕ್ಷೇತ್ರವನ್ನು ನಿರ್ಮಾಣ ಮಾಡಬೇಕೆಂದು ಅಷ್ಟಮಂಗಲ  ಪ್ರಶ್ನೆಯಲ್ಲಿ ತಿಳಿದು ಬಂದಿದೆ.


ಕ್ಷೇತ್ರದ ಈಶಾನ್ಯ ಭಾಗದಲ್ಲಿ ಜಲಕದ ಕೆರೆಯಿದೆ, ಇದನ್ನು ಅಭಿವೃದ್ಧಿ ಪಡಿಸಬೇಕು. ನೈರುತ್ಯ ಭಾಗದಲ್ಲಿ ವನ ಶಾಶ್ತಾವಿ ಮತ್ತು ವನದುರ್ಗಾ ಸಾನಿಧ್ಯವಿದೆ. ಈ ಶಕ್ತಿಗಳಿಗೆ ಕಟ್ಟೆ ನಿರ್ಮಿಸಿ ಶಿಲಾ ಪ್ರತಿಷ್ಟೆ ಮಾಡಬೇಕೆಂದು ತಿಳಿದು ಬಂದಿದೆ.
 

truenewskaanada

ಕ್ಷೇತ್ರದ ಸನಿಹದಲ್ಲೇ ಇರುವ ದೇವರ ಗುಂಡಿಯಲ್ಲಿ ಶಿವಲಿಂಗವಿದ್ದು ವೈಧಿಕ ವಿಧಿವಿಧಾನದೊಂದಿಗೆ ಶಿವಲಿಂಗ ಸಹಿತ ಇತರ ಸಾನಿಧ್ಯ ಶಕ್ತಿಗಳನ್ನು ಬಾಲಾಲಯ ಪ್ರತಿಷ್ಢಾಪಿಸಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಡಿ ಇಡಬೇಕೆಂದು ಅಷ್ಟಮಂಗಲದಲ್ಲಿ ಕಂಡು ಬಂದಿದೆ. ಅಜೀರ್ಣ ಅವಸ್ಥೆಯಲ್ಲಿ ಇದ್ದ ಅಜ್ಜಿಬೆಟ್ಟು ಗ್ರಾಮದ ಕಾಪುವಿನ ಮಹತೋಭಾರ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯ ನಂತರ  ಅನುಜ್ಞಾ ಕಳಸ  ಮಾಡಿ 21 ದಿವಸಗಳ ನಂತರ ಶ್ರೀದೇವರ  ಜೀರ್ಣೋದ್ಧಾರಕ್ಕೆ ಲಿಂಗ ಶೋಧನೆ ಮಾಡಿ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಆರಂಭಿಸಲು   ಪುರಾತನ ಕಾಲದ  ಮಹತೋಭಾರ  ಶ್ರೀ ಉಮಾಮಹೇಶ್ವರ  ದೇವರ ಮೂಲ ಸ್ಥಳದಲ್ಲಿ  ಪ್ರಾರ್ಥನೆಯೊಂದಿಗೆ  ಪುನರ್ ವರ್ತಿಸಿದಾಗ  ಪುರಾತನ ಮೂಲ ಕ್ಷೇತ್ರದಲ್ಲಿ  ಮೂಲ ಮಹಾಶಿವಲಿಂಗ ಹಾಗೂ ದೇವರಗುಂಡಿಯಲ್ಲಿ ಪುರಾತನ ಲಿಂಗವು ಗೋಚರಿಸಿದೆ.

truenewskaanada

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದಿನಾಂಕ 10/01/2022 ಸೋಮವಾರದಂದು ಊರಿನ ಗ್ರಾಮಸ್ಥರು, ಮಾಗಣೆಯ  ಭಕ್ತಾದಿಗಳು ಒಮ್ಮತದಿಂದ ಸೇರಿ   ವಾಸ್ತು ಶಾಸ್ತ್ರಜ್ಞ ರಾದ  ಸುಬ್ರಮಣ್ಯ ಅವಧಾನಿ,  ತಂತ್ರಿಗಳಾದ ಶ್ರೀಪಾದ ಪಂಗಣ್ಣಾಯ ಇವರ ಉಪಸ್ಥಿತಿಯಲ್ಲಿ  ಶ್ರೀ ಕ್ಷೇತ್ರದಲ್ಲಿ   ದೇವರ ಜೀರ್ಣೋದ್ಧಾರಕ್ಕೆ  ಲಿಂಗ ಸಂಶೋಧನೆ ಮಾಡಿದಾಗ ಶ್ರೀ ಕ್ಷೇತ್ರದ ಮೂಲ ಸ್ಥಳದಲ್ಲಿ ಮೂಲ ಮಹಾ ಶಿವಲಿಂಗವು ಹಾಗೂ ದೇವರ ಗುಂಡಿಯಲ್ಲಿ  ಪುರಾತನ ಶಿವಲಿಂಗವು ಲಭಿಸಿತ್ತು. ತದನಂತರ ಗ್ರಾಮಸ್ಥರು ಭಕ್ತಾದಿಗಳು ಸೇರಿ ಇದೇ ಬರುವ ಜನವರಿ 27 ತಾರೀಖಿನಂದು ಬಾಲಯಾದ  ಪ್ರತಿಷ್ಠೆ  ನೆರವೇರಿಸುವುದು ಎಂದು ಸಂಕಲ್ಪಿಸಲಾಗಿದೆ. 

 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.