ಉಷ್ಣ ಮಾರುತ ಎಫೆಕ್ಟ್ ಗೆ 43 ಬಲಿ ಅಕಾಲಿಕ ಮಳೆಗೆ ಬೆಚ್ಚಿಬಿದ್ದ ಜನ

ನವದೆಹಲಿ : ದೇಶಾದ್ಯಂತ ಉತ್ತರದ ರಾಜ್ಯಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಸಹಿತ ಬಾರೀ ಮಳೆಗೆಪ್ರತಿ 43 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಆಧಿಕ‌ ಮಂದಿ‌ ಗಾಯಗೊಂಡಿದ್ದಾರೆ. 
ಬಿಸಿಲಿನ ಝುಳ ಏರಿಕೆಯಾದ ಬೆನ್ನಲ್ಲೇ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ, ಹರಿಯಾಣ, ದೆಹಲಿ ಮತ್ತು ಮಣಿಪುರ ರಾಜ್ಯಗಳಲ್ಲಿ ಕಳೆದೆರಡು ದಿನಗಳಿಂದಲೂ ಅಕಾಲಿಕ‌ ಮಳೆ ಅಬ್ಬರಿಸಿದೆ. 
ಅಕಾಲಿಕ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ 16‌ ಮಂದಿ ಮೃತರಾಗಿದ್ದರೆ, ಗುಜರಾತ್​ನಲ್ಲಿ 11, ರಾಜಸ್ಥಾನದಲ್ಲಿ 7, ಮಹಾರಾಷ್ಟ್ರದಲ್ಲಿ 3, ಪಂಜಾಬ್​ನಲ್ಲಿ 2, ಹರಿಯಾಣ, ಜಾರ್ಖಂಡ, ಉತ್ತರಪ್ರದೇಶ ಮತ್ತು ಮಣಿಪುರದಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.  ಮಾತ್ರವಲ್ಲ ಇನ್ನೂ ನಾಲ್ಕು ದಿನಗಳ ಕಾಲ ಆಲಿಕಲ್ಲು ಸಹಿತ ಮಳೆ‌ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 
ಈ‌ ನಡುವೆ ಪ್ರಧಾನಿ‌ ನರೇಂದ್ರ ಮೋದಿ, ಅಕಾಲಿಕ ಮಳೆಯಿಂದ ಮೃತರಾದವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ., ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನೂ  ಗುಜರಾತ್ ರಾಜ್ಯ ಸರ್ಕಾರವೂ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದೆ. ಮಧ್ಯಪ್ರದೇಶ ಸರ್ಕಾರ ಮೃತರ ಕುಟುಂಬಸ್ಥರಿಗೆ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ಉಷ್ಣ ಮಾರುತದ ಎಫೆಕ್ಟ್ ?

ಪಾಕಿಸ್ತಾನದಿಂದ ಬಂದಿರುವ ಪಶ್ಚಿಮದ ಬಂದಿರುವ ಬಯ ಜೊತೆಗೆ ಕಳೆದ 3-4 ದಿನಗಳಿಂದ ಬೀಸುತ್ತಿರುವ ಉಷ್ಣಮಾರುತದ ಪ್ರಭಾವದಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುತ್ತಿದೆ. ಗುರುವಾರದವರೆಗೂ ಇದೇ ವಾತಾವರಣ ಇರಲಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ. ಈ ಬಾರಿ ಮಧ್ಯ ಭಾರತದಿಂದ ವಿದರ್ಭವರೆಗೆ ಪದೇಪದೆ ಉಷ್ಣ ಮಾರುತಗಳು ಬೀಸಲಿದ್ದು, ಈ ನಡುವೆ ಕೆಲ ದಿನಗಳ ಅಂತರದಲ್ಲಿ ಮಳೆ ಬೀಳುವ ಸಾಧ್ಯತೆಯಿದೆ. ಆದರೆ ಈ ವಾತಾವರಣ ಮುಂದುವರಿದರೆ ಭಾರಿ ಪ್ರಮಾಣದ ಬೆಳೆ ನಷ್ಟ ಉಂಟಾಗುವ ಸಾಧ್ಯತೆಯಿದೆ. 
 

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.