ತುಳುನಾಡ ತುಡರ ಪರ್ಬ

ತುಳುನಾಡಿನಲ್ಲಿ ದೀಪಾವಳಿ ಹಬ್ಬವನ್ನು ಅವರದೇ ಆದ ಆಚರಣೆಯೊಂದಿಗೆ ಮಾಡುತ್ತಾರೆ. ಹಬ್ಬದ ಹಿಂದಿನ ದಿನ ತುಳುವಿನಲ್ಲಿ 'ಗುರ್ಕೆ' ಎಂದು ಕರೆಯುವ ನೀರಿನ ಹಂಡೆಗೆ ಹೂವು, ಮಾವಿನ ಎಲೆ, ಹಲಸಿನ ಎಲೆಯನ್ನು ಕಟ್ಟಿ ರಾತ್ರಿ ನೀರನ್ನು ತುಂಬುತ್ತಾರೆ. ಮರುದಿನ ಬೆಳಗಿನ ಜಾವ  ಹಿಂದಿನ ದಿನದಂದು ತುಂಬಿದ ನೀರನ್ನು ಬಿಸಿ ಮಾಡುತ್ತಾರೆ. ಬಿಸಿಯಾದ ಬಳಿಕ ಮನೆಯವರೆಲ್ಲ ತಲೆಗೆ, ಮೈಕೈಗೆ ಎಣ್ಣೆಯನ್ನು ಹಾಕಿ ಸ್ನಾನ ಮಾಡುತ್ತಾರೆ.  

ಇನ್ನು ಎರಡನೇ ದಿನದಂದು ಆ  ದಿನ   ಬೆಳಿಗ್ಗೆ  ಕೆಲವರು ಅಂಗಡಿ ಪೂಜೆ ಮಾಡಿ ಸಿಹಿ  ಹಂಚುತ್ತಾರೆ. ಹಾಗೂ ಗೋ ಪೂಜೆ  ಮಾಡುತ್ತಾರೆ. ಬೇಸಾಯದ ಗದ್ದೆ ಇರುವವರು ಸಂಜೆಯ ವೇಳೆ ಅಡಿಕೆ, ಅವಲಕ್ಕಿ, ವೀಳ್ಯದೆಲೆ, ಹೂ , ಮತ್ತು ದೊಂದಿ ತೆಗೆದುಕೊಂಡು ಹೋಗಿ ಅದರೂಂದಿಗೆ ಬೆಂಕಿ ಉರಿಸಿ, ತೂಟೆ ತೆಗೆದುಕೊಂಡು ಹೋಗಿ    ಗದ್ದೆಯಲ್ಲಿ ಇಟ್ಟು ತುಳುವಿನಲ್ಲಿ, 

"ಕರ್ಗಲ್ಲ್ ಕಾಯಾನಗಾ
ಬೊಲ್ ಗಲ್ಲ್ ಪೂ ಪೋನಗಾ
ನೆಕ್ಕಿದಡಿಟ್ ಆಟ ಆನಗಾ
ತುಂಬೆದಡಿಟ್ ಕೂಟ ಆನಗಾ
ದೆಂಬೆಲಿಗ್ ಪಾಂಪು ಪಾಡ್ನಗಾ
ಜಾಲ್ ಪಾದೆ ಆನಗಾ
ಅಲೆಟ್ ಬೊಲ್ನೆಯಿ ಮುರ್ಕುನಗಾ
ಉರ್ದು ಮದ್ದೊಲಿ ಆನಗಾ
ಗುರ್ಗುಂಜಿದ ಕಲೆ ಮಾಜಿನಗಾ
ಎರು ದಡ್ಡೆ ಆನಗಾ
ಗೊಡ್ಡೆರ್ಮೆ ಗೋಣೆ ಆನಗಾ
ಕಲ್ಲ ಕೋರಿ ಕೆಲೆಪುನಗಾ
ಕಲ್ಲ ಬಸವೆ ಮುಕ್ಕುಡ್ ದಕ್ಕ್ ನಗಾ
ಮಂಜಲ್ ಪಕ್ಕಿ ಮೈಯಿ ಪಾಡ್ನಗಾ
ಕೊಟ್ರುಞ್ಞೆ ಕೊಡಿ ಏರ್ ನಗಾ
ದಂಟೆದಜ್ಜಿ ಮದಿಮಾಲಾನಗಾ

ಆ ಊರ ಪೊಲಿ ಕನಲಾ
ಈ ಊರಾ ಬಲಿ ಕೊನೊಲಾ
ಬಲ ಬಲೀಂದ್ರ........... ಕೂ...

ಅರಕ್ ದ ಒಟ್ಟೆ ಓಡೊಡು, 
ಮಯಣದ ಮೋಂಟು ಜಲ್ಲೊಡು
ಕೊಟ್ಟುಗು ಗೊಂಡೆ ಪೂ ಕಟ್ಟ್ ದ್
ಪೊಟ್ಟು ಗಟ್ಟಿ ಪೊಡಿ ಬಜಿಲ ಬಲಿ ದೆತೊನಿಯೆರೆ
ಬಲ ಬಲೀಂದ್ರಾ..."

ಎಂದು ಬಲೀಂದ್ರನನ್ನು ಕರೆಯುತ್ತಾರೆ.  ನಂತರ ಮನೆಗೆ ಬಂದು ಲಕ್ಷ್ಮಿ ಪೂಜೆ ಮಾಡಿ ನಂತರ ಕೆಲವರು ತುಳಸಿ ಪೂಜೆ ಕೂಡ ಆದೆ ದಿನ ಮಾಡುತ್ತಾರೆ. ತುಳುನಾಡಿನ ಹಬ್ಬಗಳ ಆಚರಣೆಯಲ್ಲಿ ಪ್ರಾಂತ್ಯಗಳ ಭಿನ್ನತೆಯಿದ್ದು, ಉಡುಪಿ-ದಕ್ಷಿಣಕನ್ನಡಗಳ ನಡುವಿನ ಆಚರಣೆಯಲ್ಲಿ ದಿನ ವ್ಯತ್ಯಾಸಗಳು ಕಂಡುಬರುತ್ತವೆ.

 

 

  • ಕೆ.ಎನ್.ಕಾರ್ತಿಕ್

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.