ಸುಲಭ ಸೂತ್ರದಿಂದ ಸುಂದರ ಬಾಲ್ಕನಿ ನಿಮ್ಮದಾಗಿಸಿ..!

blocony

ಸ್ನೇಹಿತರೆ, ದೊಡ್ಡ ನಗರಗಳಲ್ಲಿ ಮತ್ತು ಅಪಾರ್ಟ್ಮೆಂಟ್‌ಗಳಲ್ಲಿ ವಾಸಿಸುವವರಿಗೆ ಸ್ವಚ್ಛಂದವಾಗಿ ತಮ್ಮದೇ ಆದ ಒಂದು ಹೂದೋಟವನ್ನು ಮಾಡಬೇಕೆಂಬ ಕನಸು ಯಾವತ್ತಾದರೂ ಕನಸಗಾಗಿಯೇ ಉಳಿಯುತ್ತೆ..! ಅವರಿಗೆ ಸಣ್ಣ ಗಾರ್ಡನ್ ಎಂದರೆ ಅದು ಅಪಾರ್ಟ್ಮೆಂಟ್‌ನ ಬಾಲ್ಕನಿ. ಅಲ್ಲಿಂದ ಇಣುಕಿದರೆ ಪಕ್ಕದ ಮನೆಯ ಬಾಲ್ಕನಿ ನೋಡಲು ಸಿಗುತ್ತದೆ. ನಿಮ್ಮ ಬಾಲ್ಕನಿ ಸಣ್ಣ ಮತ್ತು ಮಬ್ಬಾಗಿದ್ದರೆ ಅದನ್ನು ಬದಲಾಯಿಸಿ...ಬಾಲ್ಕನಿಯನ್ನು ಸಿಂಗರಿಸಿ ಅದಕ್ಕೊಂದು ಸುಂದರ ರೂಪ ನೀಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. 

decoration of balcony


ಅಪಾಟ್‌ಮೆಂಟ್‌ನ ಬಾಲ್ಕನಿಗಳನ್ನು ಸುಂದರವಾಗಿ ಪರಿವರ್ತಿಸುದು ಒಂದು ಸವಾಲಿನ ಕೆಲಸ. ಕೆಲವರು ಈ ಸವಾಲನ್ನು ಎದುರಿಸಲು ಹೋಗದೆ ಬಾಲ್ಕನಿಯನ್ನು ಖಾಲಿ ಮತ್ತು ಸಾಧಾರಣವಾಗಿಡುತ್ತಾರೆ. ಮತ್ತೆ ಕೆಲವರು ಬಾಲ್ಕನಿಗಳನ್ನು ಬೇಡವಾದ ವಸ್ತುಗಳನ್ನು ಇಡಲು ಬಳಸುತ್ತಾರೆ. ಆದರೆ ನೀವು ಬಾಲ್ಕನಿಯಯನ್ನು ಕೆಲವೊಂದು ಸುಂದರ, ಆಕರ್ಷಕ ಗಿಡಗಳು, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಬಹುದಾಗಿದೆ.

decoration of balcony

ಬಾಲ್ಕನಿಯನ್ನು ಖಾಸಗಿಯಾಗಿ ಮತ್ತು ವೀಕೆಂಡ್‌ನಲ್ಲಿ ಬೋರೆನಿಸಿದಾಗ ಸಮಯ ಕಳೆಯಲು ಉಪಯೋಗಿಸಬಹುದಾಗಿದೆ. ಬಾಲ್ಕನಿ ಅಂದಗೊಳಿಸುವ ಮೊದಲು ಅಲ್ಲಿನ ಸ್ಥಳವನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಬಾಲ್ಕನಿಯ ನಿರ್ಮಾಣ ಮತ್ತು ಅದರ ಸ್ವರೂಪ ಹೇಗಿದೆ, ಅದನ್ನು ಯಾವ ರೀತಿ ನಿರ್ಮಿಸಲಾಗಿದೆ ಎಂದು ಅರಿತುಕೊಳ್ಳಬೇಕು.

decoration of balcony

ಈ ಎಲ್ಲಾ ಮಾಹಿತಿಯನ್ನು ಪಡೆದ ಬಳಿಕ ಬಾಲ್ಕನಿಗೆ ಬೇಕಾಗಿರುವಂತಹ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಳ್ಳಬೇಕು. ಬಾಲ್ಕನಿಯು ಮನೆಯ ಮತ್ತೊಂದು ಗೋದಾಮು ಕೋಣೆಯಲ್ಲ. ಹೌದು, ಮನೆಯಲ್ಲಿನ ವಾಸಸ್ಥಳವನ್ನು ಮತ್ತಷ್ಟು ಸುಂದರವಾಗಿ ಮಾಡಬೇಕೆಂದರೆ ಬಾಲ್ಕನಿಯನ್ನು ಮನೆಯ ಮತ್ತೊಂದು ಕೋಣೆಯೆಂದು ಪರಿಗಣಿಸಬೇಕು. ಇದನ್ನು ಬೇಡದ ವಸ್ತುಗಳನ್ನು ಇಡುವ ಗೋದಾಮನ್ನಾಗಿ ಮಾಡಬಾರದು. ಬಾಲ್ಕನಿಯಲ್ಲಿ ಹೆಚ್ಚಾಗಿ ಆಟಿಕೆಗಳು, ಉಪಯೋಗಿಸದ ಸೈಕಲ್ ಇತ್ಯಾದಿಗಳು ಬಾಲ್ಕನಿಯ ಸ್ಥಳವನ್ನು ಆಕ್ರಮಿಸದಂತೆ ನೋಡಿಕೊಳ್ಳಿ. ಹಾಗೆ ಮಾಡಿದಾಗ ಬಾಲಕ್ನಿಯು ಗೋದಾಮುಮಯವಾಗುವುದು ತಪ್ಪುತ್ತದೆ.

decoration of balcony

ಬಾಲ್ಕನಿಯನ್ನು ಶೃಂಗರಿಸಲು ನಿರ್ಧರಿಸಿದರೆ ಮೊದಲು ನೀವು ನೆಲದ ಬಗ್ಗೆ ಗಮನಹರಿಸಬೇಕು. ಬಾಲ್ಕನಿ ಆಕರ್ಷಕವಾಗಿ ಕಾಣಲು ಸರಿಯಾದ ನೆಲವನ್ನು ಆಯ್ಕೆ ಮಾಡಿ. ಬಿಳಿ ಅಥವಾ ಹಗುರ ಬಣ್ಣದ ಟೈಲ್ಸ್ಗಳನ್ನು ಬಾಲ್ಕನಿ ನೆಲಕ್ಕೆ ಬಳಸಿ ಅದು ಆಧುನಿಕ ಸ್ಪರ್ಶ ನೀಡುತ್ತದೆ. ಬಾಲ್ಕನಿಯನ್ನು ಶೃಂಗರಿಸುವಾಗ ಎರಡನೆಯದ್ದಾಗಿ ನಿಮ್ಮ ಬಾಲ್ಕನಿಗೆ ಸರಿಯಾದ ಗಿಡಗಳನ್ನು ಆಯ್ಕೆ ಮಾಡಬೇಕು. ತಾಜಾ ಮತ್ತು ಸ್ಪಂದನಶೀಲ ಸಸ್ಯಗಳು ನಿಮ್ಮ ಮನಸ್ಥಿತಿ ಆರಾಮವಾಗಿರುವಂತೆ ಮಾಡುತ್ತದೆ. ಸಸ್ಯಗಳಿಗೆ ನೀವು ವ್ಯಯಿಸಲು ಬಯಸುವ ಹಣಕ್ಕೆ ಸರಿಯಾದ ಮೌಲ್ಯ ಬರಲಿ. ಈಗಾಗಲೇ ನಿಮ್ಮ ಬಾಲ್ಕನಿಯಲ್ಲಿ ಸಸ್ಯಗಳು ಇದ್ದರೆ ಅದಕ್ಕೆ ಹೆಚ್ಚಿನ ಕಾಳಜಿ ನೀಡಿ.

decoration of balcony

ಸಸ್ಯಗಳಲ್ಲಿ ಒಣಗಿರುವ ಎಲೆಗಳನ್ನು ತೆಗೆದು ಸರಿಯಾದ ಪ್ರಮಾಣದಲ್ಲಿ ನೀರು ಹಾಕಿ. ಬಾಲ್ಕನಿಯಲ್ಲಿ ಖಾಲಿ ಇರುವ ಹೂಕುಂಡಗಳಿದ್ದರೆ ನರ್ಸರಿಗೆ ತೆರಳಿ ಮತ್ತು ಕೆಲವು ಗಿಡಗಳನ್ನು ಖರೀದಿಸಿ. ಬಾಲ್ಕನಿಗೆ ಬೇಕಾಗುವ ಆರೋಗ್ಯಕರವಾಗಿರುವ ಸಸ್ಯಗಳನ್ನು ಖರೀದಿಸಿ. ಬಾಲ್ಕನಿಗೆ ಬೀಳುವ ಸೂರ್ಯನ ಬೆಳಕನ್ನು ಆಧರಿಸಿ ಸಸ್ಯಗಳನ್ನು ಆಯ್ಕೆ ಮಾಡಿ. ಬಾಲ್ಕನಿಯನ್ನು ಸಿಂಗರಿಸಲು ಇದು ಒಳ್ಳೆಯ ವಿಧಾನ. ಲಾವೆಂಡರ್, ಸುಂದರವಾದ ಕಲರ್‌ಫುಲ್ ಹೂವಿನ ಗಿಡಗಳು ಮತ್ತು ಹೂವಿನ ಬಳ್ಳಿಗಳು, ಹ್ಯಾಂಗಿಂಗ್ ಪಾಟ್ಸ್ಗಳು. ಬಾಲ್ಕನಿಯನ್ನು ಆಕರ್ಷಕವಾಗಿ ಕಾಣುವಂತೆ ಮಾಡತ್ತದೆ.

decoration of balcony

ಹಾಗು  ನಿಮ್ಮ ವಾಸ ಸ್ಥಳಕ್ಕೆ ಬಾಲ್ಕನಿ ವಿಶೇಷವಾದ ಮೆರುಗನ್ನು ನೀಡುತ್ತದೆ. ಅಲ್ಲದೆ ನಿಮ್ಮ ಬಾಲ್ಕನಿಯಲ್ಲಿ ಸ್ವಲ್ಪ ಜಾಗ ಉಳಿದಿದೆಯಂತಾದರೆ ಸುಂದರವಾದ ಗಿಡಗಳ ನಡುವೆ ಒಂದು ಉಯ್ಯಾಲೆಯನ್ನು ಹಾಕಿ ಇದು ನಿಮಗೆ ಬಿಡುವಿನ ಸಮಯದಲ್ಲಿ ಕಾಲ ಕಳೆಯಲು ಸಹಾಯ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

decoration of balcony

ಗಿಡಗಳನ್ನು ಬಾಲ್ಕನಿಯ ಅಂಚಿನಲ್ಲಿಡಿ ಸರಿಯಾದ ಗಿಡಗಳ ಆಯ್ಕೆಯ ನಂತರ ಅದನ್ನು ಬಾಲ್ಕನಿಯ ಅಂಚುಗಳಲ್ಲಿ ಇಡುವುದರಿಂದ ನಿಮ್ಮ ಒಳಾಂಗಣಕ್ಕೆ ವಿಶೇಷವಾದ ನೋಟ ನೀಡಬಹುದು. ಇದರಿಂದ ನಿಮ್ಮ ಬಾಲ್ಕನಿಯಲ್ಲಿ ಹೆಚ್ಚಿನ ಜಾಗವಿರುವಂತೆ ಕಾಣುತ್ತದೆ. ಬಾಲ್ಕನಿಯಲ್ಲಿ ಹೆಚ್ಚಿನ ಜಾಗವಿದ್ದರೆ ಅದರ ಅಂಚಿನಲ್ಲಿ ಸಸ್ಯಗಳನ್ನು ನೆಡುವುದು ಬೇಲಿಯಂತೆ ಕೆಲಸ ಮಾಡುತ್ತದೆ. ಸಣ್ಣ ಬಾಲ್ಕನಿಯಾಗಿದ್ದರೂ ಅದು ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಬಾಲ್ಕನಿಗೆ ಒಳ್ಳೆಯ ಬಣ್ಣಗಳನ್ನು ಆಯ್ಕೆ ಮಾಡಿ. 3 ಬಣ್ಣಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಇದು ನಿಮ್ಮ ಬಾಲ್ಕನಿಯ ಸುಂದರತೆ ಮತ್ತು ಸಮೃದ್ಧತೆಯನ್ನು
ಹೆಚ್ಚಿಸುತ್ತದೆ.

decoration of balcony
  • ಸುಲಭಾ ಆರ್. ಭಟ್
  • ನ್ಯೂಸ್ ಬ್ಯೂರೋ, ಟ್ರೂನ್ಯೂಸ್ ಕನ್ನಡ 
     

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.