ಶತಕ ಬಾರಿಸಿದ ಪೆಟ್ರೋಲ್ ದರ! ದರ ಏರಿಕೆಗೆ ಹೈರಾಣರಾದ ಜನತೆ!!

ಬೆಂಗಳೂರು:ಕೊರೊನಾ ಲಾಕ್‌ಡೌನ್‌ ನಡುವೆಯೂ ಇಂಧನ ಬೆಲೆ ಏರುತ್ತಲೇ ಇದೆ. ಈ ಹಿಂದೆ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ ದಾಟಿತ್ತು. ಇದೀಗ ಈ ಪಟ್ಟಿಗೆ ಕರ್ನಾಟಕವು ಸೇರಿದ್ದು, ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ 100 ರೂಪಾಯಿಗೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ದರ 97 ರೂಪಾಯಿ 92 ಪೈಸೆಯಾಗಿದ್ದರೆ, ಡೀಸೆಲ್ ಬೆಲೆ 90 ರೂಪಾಯಿ 81 ಪೈಸೆಗೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದಂತೆ ಭಾರತದಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 95 ರೂಪಾಯಿ 31 ಪೈಸೆಗೆ ತಲುಪಿದೆ. ಡೀಸೆಲ್ ದರ ಲೀಟರ್ ಗೆ 86 ರೂಪಾಯಿ 22 ಪೈಸೆಯಷ್ಟಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಗೆ 95 ರೂಪಾಯಿ 28 ಪೈಸೆ, ಡೀಸೆಲ್ ಬೆಲೆ ಲೀಟರ್ ಗೆ 89 ರೂಪಾಯಿ 07 ಪೈಸೆಯಷ್ಟಿದೆ. ಚೆನ್ನೈಯಲ್ಲಿ ಪೆಟ್ರೋಲ್ ಲೀಟರ್ ಗೆ 96 ರೂಪಾಯಿ 71 ಪೈಸೆಯಷ್ಟಿದ್ದರೆ, ಡೀಸೆಲ್ ಬೆಲೆ 90 ರೂಪಾಯಿ 92 ಪೈಸೆಯಷ್ಟಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟದೆ. ಒಟ್ಟಾರೆ ದರ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಒಂದು ಕಡೆ ಲಾಕ್ಡೌನ್ ಇನ್ನೊಂದು ಕಡೆ ದರ ಏರಿಕೆ ಬಿಸಿ. ಒಟ್ಟಿನಲ್ಲಿ ಜೀವನ ದುರ್ಬರವಾಗಿದೆ ಎನ್ನುತ್ತಾರೆ ನಾಗರಿಕರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.