ಶ್ರೀ ರಾಮ ಯುವಕ ಸಂಘ: ನಯನಾಡು ಮಜಲು ಗದ್ದೆಯಲ್ಲಿನಾಲ್ಕನೇ ವರ್ಷದ ಕೆಸರ್ ಡೊಂಜಿ ದಿನ

truenws

ದಕ್ಷಿಣ ಕನ್ನಡ: ನಯನಾಡು ಮಜಲು ಗದ್ದೆಯಲ್ಲಿ ಶ್ರೀ ರಾಮ ಯುವಕ ಸಂಘ ದ  ನಾಲ್ಕನೇ ನಯನಾಡಿನ ಶ್ರೀ ರಾಮ ಯುವಕ ಸಂಘ ದ ವತಿಯಿಂದ ದಿನಾಂಕ 14 ರಂದು ನಯನಾಡಿನ ಮಜಲ್ ಗದ್ದೆಯಲ್ಲಿ  ನಾಲ್ಕನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಸಿರಿ ಸುಂದರ ಪೂಜಾರಿ ವೇದಿಕೆಯಲ್ಲಿ ಯಂ. ತುಂಗಪ್ಪ ಬಂಗೇರ ರವರ ಅಧ್ಯಕ್ಷತೆಯಲ್ಲಿ , ಟಿ. ಹರೀಂದ್ರ ಪೈ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. 

truenewskaanada

 


ಶ್ರೀಮತಿ ಸುಜಾತ ಉಮೇಶ್ ರ ಪ್ರಾರ್ಥನೆ ಯೊಂದೀಗೆ  ಕಳಸೆಗೆ ಭತ್ತವನ್ನು ಹಾಕುವ ಮುಖೇನ ಸಭಾ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.  ಸಂಘದ ಅಧ್ಯಕ್ಷ ಶೇಖರ ನಿನ್ನಿಕಲ್ಲು  ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಅತಿಥಿ ಗಳಿಗೆ ಹಾಗೂ ಊರ ಬಂಧುಗಳಿಗೆ ಚಿತ್ರದುರ್ಗ ದ ಕೋಟೆಯಲ್ಲಿದ್ದ ಒನಕೆ ಓಬವ್ವ ಮೆಟ್ಟಿ ನಡೆದಾಡಿದ್ದ ನೆಲದ ಮಣ್ಣನ್ನು, ಉಳ್ಳಾಲ ದ ಅಬ್ಬಕ್ಕ ರಾಣಿ ಯು ನಡೆದಾಡಿದ ನೆಲದ ಮಣ್ಣನ್ನು ತಂದು ವೀರ ತಿಲಕವಾಗಿ ಕೊಡಲಾಯಿತು. ಕಾರ್ಯದರ್ಶಿ ರಾಘವೇಂದ್ರ ರು ವರದಿ ವಾಚನ ಮಾಡಿದರು. 

truenewskaanada

 


ವೇದಿಕೆಯಲ್ಲಿ ಹರ್ಷಿಣಿ ಪುಷ್ಪಾನಂದ್, ಅಧ್ಯಕ್ಷರು ಪಿಲಾತಬೆಟ್ಟು ಗ್ರಾಮ ಪಂಚಾಯತ್, ಶ್ರೀ ಮತಿ ಅಮೃತಾ ಯಸ್. ಸೇವಾ ಪ್ರತಿನಿಧಿ ಧ. ಗ್ರಾ. ಯೋ. , ರಮೇಶ್ ಕುಡ್ಮೇರು, ಚಂದ್ರಶೇಖರ ಶೆಟ್ಟಿ, ಗೋಪಾಲ್ ಪೂಜಾರಿ, ಲಕ್ಷ್ಮಿನಾರಾಯಣ ಹೆಗ್ಡೆ ಉಪಾಧ್ಯಕ್ಷರು ಪಿಲಾತಬೆಟ್ಟು ಪಂಚಾಯತ್, ಜಾರಪ್ಪ ಪೂಜಾರಿ ಆಧ್ಯಕ್ಷರು ಶ್ರೀ ರಾಮ ಭಜನಾ ಮಂದಿರ,  ಶಾರದಾ ಕೊಡೆಂಜಾರು, ಪಂಚಾಯತ್ ಸದಸ್ಯರು, ದಯಾನಂದ್ ನಿನ್ನಿಕಲ್ಲು, ಮೋಹನ ಹೆಗ್ಡೆ,  ಯುವಕ ಸಂಘ ದ ಅಧ್ಯಕ್ಷರಾದ ಶೇಖರ ನಿನ್ನಿಕಲ್ಲು ಮುಂತಾದವರಿದ್ದರು. ವೇದಿಕೆಯಲ್ಲಿ ಊರಿನ ಏಳು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಚಿನ್ನಯ ಹೆಗ್ಡೆ ನಿನ್ಯಾಲು,  ಉಗ್ಗಪ್ಪ ಪೂಜಾರಿ ತಿಮರಡ್ಡ, ಅಣ್ಣು ಪೂಜಾರಿ ಮಿತ್ತಬೆಟ್ಟು, ಉಮೇಶ್ ಮೂಲ್ಯ ಕೊಡಂಗೆ, ಸುಧಾನಂದ ಶೆಣೈ, ಆಶಾ ಕಾರ್ಯಕರ್ತೆ ಪ್ರಮೀಳಾ ಮಿತ್ತಬೆಟ್ಟು, ಯುವ ಪ್ರತಿಭೆ ಯಶು ಸ್ನೇಹಗಿರಿ ರವರುಗಳನ್ನು ಗೌರವಿಸಲಾಯಿತು. ನಾಲ್ಕು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಧನ ನೀಡಲಾಯಿತು.

truenewskaanada


ಕೆಸರ್ ಗದ್ದೆಯಲ್ಲಿ  ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ವಿವಿಧ ರೀತಿಯ ಕೆಸರ್ ಗದ್ದೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೆಳಗಿನ ಉಪಹಾರಕ್ಕೆ  ಬೆಲ್ಲ ತೆಂಗಿನತುರಿ ಹಾಕಿದ ಕಡುಬು, ಬೇಂಗದ ಕಷಾಯ,   ಮಧ್ಯಾಹ್ನ ದ ಊಟಕ್ಕೆ ಗಂಜಿ ಚಟ್ನಿ, ಬಾಳೆ ದಿಂಡಿನ ಪಲ್ಯ,  ಪಾಯಸದ ಸವಿಯಿತ್ತು.ಕೆಸರ್ದ ಕಂಡೊದ ಗೀತೆ ಯನ್ನು ಹಾಡಿದ ಯಶ್ವಂತ್ ಸ್ನೇಹಗಿರಿ, ರಾಘವ ಆಚಾರ್ಯ, ಅಶ್ವಿನಿ ರವಿ ಮಿತ್ತಬೆಟ್ಟು ರವರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀನಾರಾಯಣ ಉಡುಪರು, ಪ್ರಕಾಶ್ ರಾವ್, ಸದಾಶಿವ ಹೆಗ್ಡೆ, ಸರೋಜಾ ಶೆಟ್ಟಿ, ಶಿಲ್ಪಾ ಐಶ್ವರ್ಯ ಪೈ, ಜಯಲಕ್ಷ್ಮಿ ಹೆಗ್ಡೆ, ವೆಂಕಪ್ಪ ಪೂಜಾರಿ, ಜಯರಾಂ ನಾಯ್ಯ್, ಕೀರ್ತೆಶ್ ಮೂರ್ಜೆ,  ಚಂದ್ರ ಶೇಖರ ಹೆಗ್ಡೆ,  ಯಕ್ಷಗಾನ ಕಲಾವಿದ ಶ್ರೀ ಸತೀಶ್ ಬಾಡಾರು , ಸಂಘದ ಕಾರ್ಯದರ್ಶಿ ರಾಘವೇಂದ್ರ ಮುಂತಾದವರಿದ್ದರು. ಗದ್ದೆಯ ಮಾಲೀಕ ರಾದ ಶ್ರೀಮತಿ ಕಮಲಾ ಶೆಡ್ತಿ ಯವರನ್ನು ಗೌರವಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.  ಬಹುಮಾನ ದ ಪಟ್ಟಿಯನ್ನು ಚಂದ್ರಶೇಖರ ಅಚ್ಚಿನಡ್ಕ, ಗಣೇಶ್ ಹೆಗ್ಡೆ ವಾಚಿಸಿದರು. ನಯನಾಡು ಶ್ರೀ ರಾಮ ಭಜನಾ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಚಿಣ್ಣರ ಬಗೆ ಬಗೆಯ ವೇಷಭೂಷಣ ದ ಜೊತೆಗೆ ಕಾಜಲ ವೆಂಕಪ್ಪ ಪೂಜಾರಿ ಯವರ ಕಂಬಳದ ಕೋಣಗಳು ಭಾಗವಹಿಸಿದ್ದವು.  ಸಂಜೆ ರಾಷ್ಟ್ರ ಗೀತೆ ಯೊಂದೀಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.ಶ್ರೀ ರಾಮ ಯುವಕ ಸಂಘ ದ ಜೊತೆಯಲ್ಲಿ ಕಾರ್ಯಕ್ರಮ ದ ಯಶ್ಸಸ್ವಿಗೆ ನಿವೇದಿತಾ ಮಾತೃಮಂಡಳಿ ಸದಸ್ಯರು, ಭಜನಾ ಮಂದಿರ ಸದಸ್ಯರು, ಊರ ಬಂಧುಗಳು ಸಹಕರಿಸಿದರು.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.