ಸಿಎಂ ಯಡಿಯೂರಪ್ಪ ಬದಲಾವಣೆಗೆ ಕಾರಣಗಳೇನು.?

ಬೆಂಗಳೂರು: ನೆನ್ನೆಯಿಂದ ರಾಜ್ಯ ರಾಜ್ಯಕಾರಣದಲ್ಲಿ ಹೊಸ ಬೆಳವಣಿಗೆಗಳು ಕಂಡು ಬಂದಿದ್ದು, ಸಿಎಂ ಯಡಿಯೂರಪ್ಪ ಅಧಿಕಾರದಿಂದ ಕೇಳಗಿಳಿಯುತ್ತಾರೆ ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಹಾಗಾದರೆ ನಿಜಕ್ಕೂ ಯಡಿಯೂರಪ್ಪರವರು ಬದಲಾಗಲು ಕಾರಣಗಳೇನು.? 

ಬಹು ಮುಖ್ಯ ಕಾರಣವೆಂದರೆ, ಯಡಿಯೂರಪ್ಪಗೆ 75 ವರ್ಷದ ಬಳಿಕ ಅಧಿಕಾರ ಇಲ್ಲ ಅನ್ನೋ ರೂಲ್ಸ್​​, ಯಡಿಯೂರಪ್ಪ ಸಿಎಂ ಆದಾಗಲೇ ಎರಡು ವರ್ಷಕ್ಕೆ ಕುರ್ಚಿ ಬಿಡ್ಬೇಕೆಂಬ ಷರತ್ತು. ಜುಲೈ 26ಕ್ಕೆ ಯಡಿಯೂರಪ್ಪ ಸಿಎಂ ಆಗಿ 2 ವರ್ಷ ಪೂರೈಕೆ ಆಗಿದ್ದು, ಯಡಿಯೂರಪ್ಪರನ್ನ ಚೇಂಜ್​ ಮಾಡದಿದ್ರೆ, ಬೇರೆ ನಾಯಕರಿಂದಲೂ ಯಡಿಯೂರಪ್ಪ ಮಾದರಿ ಭೀತಿ ಇದೆ.

ಎಲ್ಲದಿಕ್ಕಿಂತ ಮುಖ್ಯ ಕಾರಣ, ವಯಸ್ಸು ಹಾಗೂ ಆರೋಗ್ಯದ ದೃಷ್ಟಿಯಿಂದ ಯಡಿಯೂರಪ್ಪರನ್ನ  ಚೇಂಜ್​ ಮಾಡಲೇಬೆಕಿದೆ ಹಾಗೂ ಮುಂಬರುವ ಎಲೆಕ್ಷನ್​ ದೃಷ್ಟಿಯಿಂದ ಈಗಲೇ ನಾಯಕತ್ವ  ಬದಲಾವಣೆ ಮಾಡುವುದು ಸೂಕ್ತ, ಯಡಿಯೂರಪ್ಪ ಕುಟುಂಬದವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಶಾಸಕರ ಆರೋಪ, ಪಕ್ಷ ಮತ್ತು ಮುಂದಿನ ನಾಯಕತ್ವ ಬೆಳೆಸಲು ಅನಿವಾರ್ಯ ವಾಗಿದ್ದು, ಯುವ ನಾಯಕತ್ವಕ್ಕೆ ಮುಂದಿನ ಜನರೇಶನ್​ಗೆ ಅವಕಾಶ ಕೋಡುವ ಉದ್ದೇಶದಿಂದ  ಯಡಿಯೂರಪ್ಪ ಬದಲಾವಣೆಯಾಗುತ್ತಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.