ಸಿಬಿಎಸ್ಸಿ 12ನೇ ತರಗತಿಯ 124 ವಿಷಯಗಳಲ್ಲಿ ಪ್ರಾಮುಖ್ಯ 20 ವಿಷಯಗಳಿಗೆ ಮಾತ್ರ ಪರೀಕ್ಷೆ?

ನವದೆಹಲಿ: ಸಿಬಿಎಸ್ಇ ಯ 174 ವಿಷಯಗಳಲ್ಲಿ ಕೇವಲ 20 ವಿಷಯಗಳು ಪ್ರಾಮುಖ್ಯ ವಿಷಯಗಳು ಎಂದು ಪರಿಗಣಿತವಾಗಿದೆ.ಈ ಹಿನ್ನೆಲೆಯಲ್ಲಿ ಪ್ರಾಮುಖ್ಯ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವ ಬಗ್ಗೆ ಕೆಲ ಸರ್ಕಾರ ಗಂಭೀರ ಚಿಂತನೆ ಯಲ್ಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಎಲ್ಲಾ ರಾಜ್ಯಗಳ ಶಿಕ್ಷಣ ಮಂತ್ರಿಗಳು ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಗಂಭೀರ ಸಭೆಗಳನ್ನು ಆಯೋಜಿಸಿದೆ. ಈ ಸಭೆಯ ತೀರ್ಮಾನ ಆದನಂತರ ಈ ನಿನ್ನೆ ಹೊರ ಬರುತ್ತದೆ ಎನ್ನಲಾಗುತ್ತಿದೆ.
ಈ ನಡುವೆ ಸಂಪೂರ್ಣ ಪರೀಕ್ಷೆಗಳನ್ನು ರದ್ದುಗೊಳಿಸುವ ಬಗ್ಗೆ ಶಿಕ್ಷಣ ತಜ್ಞರು ಹಾಗೂ ಪೋಷಕರು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.