ಶಾಸಕ ಹರೀಶ್ ಪೂಂಜಾ ರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧ್ಯಕ್ಷರ ಸಹೋದರ, ಕಾಂಗ್ರೆಸ್ ನಾಯಕರುಗಳು ವಿರುದ್ಧ ವಸಂತ ಬಂಗೇರ ಆಸಮಾಧಾನ?

ಬೆಳ್ತಂಗಡಿ: ಬೆಳ್ತಂಗಡಿಯ ಶಾಸಕ ಹರೀಶ್ ಪುಂಜ ತನ್ನ ಮೂರನೇ ವರ್ಷವನ್ನು ಪೂರೈಸಿದ್ದು, ಈ ಸಂದರ್ಭದಲ್ಲಿ ರಾಜಕೀಯದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದ್ದು ಕಾಂಗ್ರೆಸ್ ನಾಯಕರುಗಳು ಬಿಜೆಪಿ ಶಾಸಕರಿಗೆ ಅಭಿನಂದನೆ ಸಲ್ಲಿಸಲು ಹೋಗಿ ಈಗ ಪಕ್ಷದ ನಾಯಕರುಗಳ ಮಾಜಿ ಶಾಸಕ ವಸಂತ ಬಂಗೇರ ರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಮೂರುವರ್ಷದ ಪೂರೈಸಿದ ಸಂದರ್ಭದಲ್ಲಿ ಸ್ಥಳೀಯ ಪತ್ರಿಕೆಯಲ್ಲಿ  ಅಭಿನಂದನೆ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಹರೀಶ್ ಕುಮಾರ್ ಸಹೋದರ ಕಾಂಗ್ರೆಸ್ ನಾಯಕ ಯೋಗೀಶ್ ಕುಮಾರ್ ನಡೆಯ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಗರ೦  ಆಗಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಈ ಬಗ್ಗೆ ಗಂಭೀರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಶಾಸಕ ವಸಂತ ಬಂಗೇರ ಈ ಬಗ್ಗೆ ನಾನು ಹೈಕಮಾಂಡ್ ಮುಂದೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ನಾನು ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಹರೀಶ್ ಕುಮಾರ್ ಅವರ ಸೋದರ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಹಿರಿಯ ಕಾಂಗ್ರೆಸ್ ನಾಯಕ ಪಿಕೆ ರಾಜು ಪೂಜಾರಿ ಸಹ ಹರೀಶ್ ಪೂಂಜಾ ಅವರನ್ನು ಅಭಿನಂದಿಸಿ ಪತ್ರಿಕೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಆದರೆ ಹರೀಶ್ ಪೂಂಜಾ ಬಗ್ಗೆ ಸತತ ಆರೋಪ ಮಾಡುತ್ತಾ ಬಂದಿರುವ ಮಾಜಿ ಶಾಸಕ ವಸಂತ ಬಂಗೇರ ರಿಗೆ ಇದು ಮುಜುಗುರವಾಗಿದ್ದು ಜಿಲ್ಲಾಧ್ಯಕ್ಷರ ನಡೆಯನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ನ ನಾಯಕರುಗಳಿಂದ ಹೊಗಳಲು ಪಟ್ಟದ್ದು ಈಗ ಕಾಂಗ್ರೆಸಿಗೆ ಮುಜುಗರ ತಂದಿದ್ದು, ಇದರಿಂದ ಬಂಗೇರ ಬಹಳಷ್ಟು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಬಿಜೆಪಿಯವರು ಈ ಬಗ್ಗೆ ಸಮರ್ಥನೆಯನ್ನು ವ್ಯಕ್ತಪಡಿಸುತ್ತಿದ್ದು, ಹರೀಶ್ ಪೂಂಜಾ ರವರ ಕೆಲಸ ಕಾರ್ಯವನ್ನು ಮೆಚ್ಚಿ ಕಾಂಗ್ರೆಸ್ಸಿನವರು ಅಭಿನಂದನೆ ಸಲ್ಲಿಸಿದ್ದಾರೆ. ಇದರಲ್ಲಿ ತಪ್ಪೇನು? ಈ ನಾಯಕರುಗಳಿಗೆ ಕಾಂಗ್ರೆಸ್ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.