ರಾಜ್ಯದಲ್ಲಿ ಜುಲೈ. 1ರಿಂದ ಶಾಲೆ ಆರಂಭಕ್ಕೆ ಸೂಚನೆ..!?

ಬೆಂಗಳೂರು :  ರಾಜ್ಯದಲ್ಲಿ ಕೊರೋನಾ ಆರ್ಭಟದ ಹಿನ್ನಲೆ ದ್ವೀತಿಯ ಪಿಯುಸಿ ಪರೀಕ್ಷೆಗಳನ್ನು ಸರ್ಕಾರ ರದ್ದು ಮಾಡಿದೆ. ಇದರ ಬೆನ್ನಲ್ಲೇ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭದ ದಿನಾಂಕವನ್ನು ಪರಿಷ್ಕರಿಸಿ ಸರ್ಕಾರ ಇಂದು ಆದೇಶ ನೀಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಜೂನ್​ 15ರಂದು ಶಾಲೆ ಪ್ರಾರಂಭಕ್ಕೆ ಅಧಿಸೂಚನೆ ಹೊರಡಿಸಿತ್ತು.

ಈಗ ಈ ಆದೇಶವನ್ನು ಪರಿಷ್ಕರಿಸಿದ ಶಿಕ್ಷಣ ಇಲಾಖೆ ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭಕ್ಕೆ ಹೊಸ ಸುತ್ತೋಲೆ ಹೊರಡಿಸಿದೆ. ಜುಲೈ 1ರಿಂದ ಅ.9ರವರೆಗೆ ಮೊದಲ ಅವಧಿ, ಅ.21ರಿಂದ ಏಪ್ರಿಲ್​ 30ರವರೆಗೆ 2ನೇ ಅವಧಿ ಆರಂಭವಾಗಿದೆ ಎಂದು ತಿಳಿಸಿದೆ. ಅಲ್ಲದೇ, ಜೂನ್​ 15ರಿಂದ ದಾಖಲಾತಿ ಆರಂಭಕ್ಕೆ ಸೂಚನೆ ನೀಡಿದ್ದು, ಆ.31ರೊಳಗೆ ದಾಖಲಾತಿ ಮುಕ್ತಾಯಕ್ಕೆ ಸೂಚಿಸಲಾಗಿದೆ. 

ರಾಜ್ಯದಲ್ಲಿ ಕೊರೋನಾ ಸೋಂಕು ತಗ್ಗಿದೆಯಾದರೂ, ಮೂರನೇ ಅಲೆ ಬಗ್ಗೆ ಈಗಾಗಲೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಸರ್ಕಾರ ಲಾಕ್​ಡೌನ್​ ಅನ್ನು ಜೂನ್​. 14 ರವರೆಗೆ ಘೋಷಣೆ ಮಾಡಿರುವ ಹಿನ್ನಲೆ ಶಾಲೆಗಳನ್ನು ಜೂನ್​ 15ರಿಂದ ತೆರೆಯಲು ಸಾಧ್ಯವಿಲ್ಲ. ಇದೇ ಹಿನ್ನಲೆ ಈ ಹಿಂದಿನ ಆದೇಶವನ್ನು ಪರಿಷ್ಕರಿಸಲಾಗಿದೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.