ಒಂದು ಕಡೆ ಪದಗ್ರಹಣ ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ ವಿವಿಧ ಮಠಾಧೀಶರ ಭೇಟಿ..!

ಬೆಂಗಳೂರು: ಒಂದು ಕಡೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಮಾಡುತ್ತಿದ್ದರೆ. ಮತ್ತೊಂದು ಕಡೆ ಕೆ.ಎಸ್.ಈಶ್ವರಪ್ಪ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿವಿಧ ಮಠಾಧೀಶರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ.

ಸ್ವಾಮೀಜಿಗಳ ಭೇಟಿ ಬಳಿಕ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಉಪಮುಖ್ಯಮಂತ್ರಿ ಹುದ್ದೆ ಪಡೆಯುವಂತೆ ಸ್ವಾಮೀಜಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬಿಎಸ್‌ವೈ ಸಿಎಂ ಸ್ಥಾನ ಬಿಡುವ ದಿನದಿಂದ ಈ ಚರ್ಚೆ ಇತ್ತು. ನಾನು ಮುಖ್ಯಮಂತ್ರಿ ಆಗಬೇಕೆಂಬ ಚರ್ಚೆ ಇತ್ತು. ಈಗ ಉಪಮುಖ್ಯಮಂತ್ರಿ ಆಗಲೇಬೇಕೆಂದು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು, ಡಿಸಿಎಂ ಹುದ್ದೆ ಒತ್ತಾಯ ಗಮನಕ್ಕೆ ತರುತ್ತೇನೆಂದು ಹೇಳಿದ್ದೇನೆ. ಬೊಮ್ಮಾಯಿ ಶ್ಯಾಡೋ ಸಿಎಂ ಎಂದು ಹೇಳಲು ಸಿದ್ಧನಿಲ್ಲ ಎಂದು ತಿಳಿಸಿದ್ದಾರೆ.

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.