New Year 2022 Celebrations: ಹೊಸ ವರ್ಷಕ್ಕೆ ಬಾಳಿನ ಅಧ್ಯಾಯದ ಹೊಸ ಪುಟ ತೆರೆಯುವ ತವಕ..!

New Year 2022 Guidelines

ಬಂತು ಹೊಸ ವರುಷ ತಂತು ಹೊಸ ಹರುಷ 2021 ವಿದಾಯ 2022 ಕ್ಕೆ ಸ್ವಾಗತ. ಮುಗಿಯಿತು 2021 ಇನ್ನೆಂದು ಇದು ಸಿಗದು ಒಂಥರಾ ಭಾವುಕ ಭಾವನಾತ್ಮಕ ಕ್ಷಣವಿದು. ಯಾಕೆಂದರೆ ಸಮಯವೆಂಬುದು ಅದ್ಭುತ ಮತ್ತು ಅಮೂಲ್ಯ ಈ ದೃಷ್ಟಿಯಿಂದ ನೋಡಿದರೆ ಪ್ರತಿ ವರ್ಷವೂ ಸರಿಯುವ ಕ್ಷಣ ಮನಸಿನಲ್ಲೇನೋ ನೋವು ತರುತ್ತವೆ. ಹಾಗಂತ ಜಾಸ್ತಿ ನೊಂದು ಕುಳಿತುಕೊಳ್ಳಬೇಕಾಗಿಲ್ಲ ಯಾಕೆಂದರೆ ನಮ್ಮ ಬದುಕಿನ ಅಧ್ಯಾಯದ ಹೊಸ ಪುಟ ತೆರೆಯಲು ಹೊಸ ಉಲ್ಲಾಸ, ಹೊಸ ಚೈತನ್ಯ,ಹೊಸ ವಿಶ್ವಾಸ ತುಂಬಲು ಹೊಸ ವರ್ಷ ಕಾದಿರುತ್ತದೆ. ಹೊಸ ವರ್ಷಚಾರಣೆ ಡಿಸೆಂಬರ್ 31ರ ಮಧ್ಯಾರಾತ್ರಿಯ ಸಂಭ್ರಮ ಜಗತ್ತಿನಾ ದ್ಯಂತ ನಡೆಯುವ ದೊಡ್ಡ ಆಚರಣೆ. ಹಿಂದಿನ ವರ್ಷದ ಸವಿ ನೆನಪನ್ನೆಲ್ಲ ಹೊಸ ವರ್ಷದ ಆಚರಣೆಯಲ್ಲಿ ಸೇರಿಸಿ ಮುಂದಿನ ವರ್ಷಕ್ಕೆ ಒಂದಿಷ್ಟು ನವ ಚೈತನ್ಯ ತುಂಬಿಕೊಳ್ಳುವ ಸಂಧರ್ಭವಾಗಿದೆ.

''ಬದಲಾದ ಜೀವನ ಬದಲಾದ ಕನಸು'' ಕಳೆದ ಮಾರ್ಚ್ನಲ್ಲಿ ಕೋವಿಡ್ 19 ಪಿಡುಗನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ನಂತರ ಎಲ್ಲವು ಬದಲಾದವು ಯಾರು ಊಹಿಸದಷ್ಟು ಜನ ಜೀವನ ಬದಲಾಯಿತು.ಜೀವ ಕಳೆದು ಕೊಂಡವರೆಸ್ಟೋ ಪ್ರೀತಿಪಾತ್ರರ ಕಣ್ಮರೆಯಿಂದಾಗಿ ಮನದೊಳಗೆ ದುಃಖವನ್ನು ಅದುಮಿಟ್ಟುಕೊಂಡು ಜೀವನವನ್ನು ಸಾಗಿಸುತ್ತಿರುವವರೆಸ್ಟೋ! ಇವರ ಮಧ್ಯೆ ಉದ್ಯೋಗ ಕಳೆದುಕೊಂಡವರು,ಹಣಕಾಸಿನ ತೊಂದರೆಯಿಂದ ಹೈರಾಣಾದವರು, ಮಾನಸಿಕ ಸಮಸ್ಯೆಯಿಂದ ತೋಳಲಾಡಿದವರು, ಒತ್ತಡದಿಂದ ಬಳಲಿದವರು, ಹೇಗೋ ಈ 'ನ್ಯೂನಾರ್ಮಲ್ಗೆ ಹೊಂದಿಕೊಂಡು ಬದುಕನ್ನು ಹಳಿಯಾತ್ತ ತರಲು ಹರಸಾಹಸ ಪಟ್ಟವರು. ಅವರಿವರೆಂದಲ್ಲ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟ ಅನುಭವಿಸಿದವರೇ ಹೀಗಾಗಿ 2021 ನೇ ವರ್ಷವನ್ನು ನಿಜವಾಗಿಯೂ ಹಿಂದೆ ಬಿಟ್ಟು, ಅದರ ಜೊತೆಗೆ ತಳಕು ಹಾಕಿಕೊಂಡ ಕಹಿ ನೆನಪುಗಳಿಗೆ ಕೂಡ ಬೆನ್ನು ಹಾಕಿ 2022 ನೇ ವರ್ಷವನ್ನು ಸರಳವಾಗಿ ಅಂದರೆ ಕೊರೋನ ಕಡಿಮೆಯಾಗಲಿ ಸಾಮಾನ್ಯ ಬದುಕು ಹಿಂದಿರುಗಲಿ ಎಂಬ ಆಶಯದೊಂದಿಗೆ ಬರಮಾಡಿಕೊಳ್ಳೋಣ.

ಈ ಸಲ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಚರಿಸಬಹುದು. ದೊಡ್ಡ ನಗರಗಳಲ್ಲಿ ಹೆಚ್ಚು ಕಡಿಮೆ ಅಪರಿಚಿತರಾಗಿ ಉಳಿದಿರುವ ನೆರೆ ಹೊರೆಯವರ ಪರಿಚಯ ಮಾಡಿಕೊಳ್ಳಿ, ದೂರದ ಊರಿನಲ್ಲಿರುವ ಬಂಧುಗಳ ಸ್ನೇಹಿತರ ಜೊತೆ ಮಾತಾಡಿ, ಪ್ರೀತಿಪಾತ್ರರ ಜೊತೆ ಕಷ್ಟಸುಖ ಹಂಚಿಕೊಳ್ಳಿ,ಹೆಚ್ಚು ಜನರ ಸಂಪರ್ಕ ಇದ್ದಷ್ಟು ಒಂದು ರೀತಿಯ ಸಮಾಧಾನ ಭಾವ ನಮ್ಮೊಳಗೆ. ನಿಮ್ಮ ನೆಚ್ಚಿನ ಅಡುಗೆ ತಯಾರಿಸಿ, ಬೀದಿಯ ಬದಿಯಲ್ಲಿ ಕುಳಿತ ನಿರಾಶ್ರಿತರಿಗೆ ಒಂದಿಷ್ಟು ಆಹಾರ ಹಂಚಿ, ಅವರ ಕಣ್ಣಲ್ಲಿನ ಕೃತಜ್ಞತಾಭಾವ ನೆಮ್ಮದಿ ನೀಡಿದಷ್ಟು ಆಡಂಬರದ ಆಚರಣೆ ನೀಡಲಾರದು. ಟಿವಿ ವೀಕ್ಷಿಸಿ, ಕಾಮಿಡಿ ಶೋ ವೀಕ್ಷಿಸಿ ಹೊಟ್ಟೆ ತುಂಬಾ ನಗಬೋದು ಇಷ್ಟವಾದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ, ಮನೆ ಸ್ವಚ್ಛ ಮಾಡಿ ಕಾಡಿಮೆಯಾಗಿತ್ತಿರುವ ಕೊರೋನ ಸೋಂಕು ಲಸಿಕೆಯ ಆಗಮನದ ಖುಷಿಯಲ್ಲಿ ಆಶಾದಾಯಕ ಮುನ್ನೋಟ ಬೀರಬಹುದು 2022ಕ್ಕೆ ಎನ್ನುವುದು ನನ್ನ ಆಶಯ.

ಹೊಸ ಎಂಬ ಪಾದವೊಂದೇ ಸಾಕು ಮನವನ್ನು ಉತ್ಸಾಹದ ಕಡಲಲ್ಲಿ ತೇಲಿಸಲು ಅದರಲ್ಲೂ ಹೊಸ ವರ್ಷ ಎಂದಾಕ್ಷಣ ನೋವು ಗದ್ದಲಗಳನ್ನೆಲ್ಲಾ ಮರೆತು ಬಾಳಿನ ಅಧ್ಯಾಯದ ಹೊಸ ಪುಟ ತೆರೆಯುವ ತವಕ ಮೂಡುವುದು ಸಹಜ. ಒಂದೆಡೆ ಸಾಲು ಸಾಲು ನೆನಪುಗಳ ಸಿಹಿಖಾದ್ಯ ಉಣಬಡಿಸಿದ ವರ್ಷದ ಬೀಳ್ಕೊಡುವ ನೋವಾದರೆ, ಇನ್ನೊಂದೆಡೆ ನೂರಾರು ಮಹತ್ವಾಕಾಂಕ್ಷೆಗಳ ಹೊತ್ತು ಹೊಸ್ತಿಲಲಿ ನಿಂತಿಹ 2022 ನ್ನು ಸ್ವಾಗತಿಸುವ ಸಂಭ್ರಮವಾಗಿದೆ.

  • ಲೇಖಕಿ : ಅಮೃತಾ (ಪ್ರಥಮ ಬಿಎ) ಡಾ.ಜಿ.ಶಂಕರ್ ಕಾಲೇಜು ,ಅಜ್ಜರಕಾಡು ಉಡುಪಿ

Add new comment

Restricted HTML

  • You can align images (data-align="center"), but also videos, blockquotes, and so on.
  • You can caption images (data-caption="Text"), but also videos, blockquotes, and so on.